ಅಂಬಿ ವರ್ಷದ ಪುಣ್ಯ ತಿಥಿ: ಸುಮಲತಾ, ಅಭಿ ಜೊತೆ ದರ್ಶನ್ ಭಾಗಿ
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಮೊದಲನೇ ವರ್ಷದ ಪುಣ್ಯ ತಿಥಿ ಕಾರ್ಯ ಇಂದು (ನವೆಂಬರ್ 14) ನಡೆಯಿತು. ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್, ಅಂಬಿ ಸಮಾಧಿ ಬಳಿ ಭೇಟಿ ನೀಡಿ ವರ್ಷದ ಪುಣ್ಯ ತಿಥಿ ಕಾರ್ಯವನ್ನ ನೆರವೇರಿಸಿದರು.
ವರ್ಷ ತುಂಬುವ ಮೊದಲು ಪುಣ್ಯ ತಿಥಿ ಮಾಡಬೇಕಿದ್ದ ಕಾರಣ, ಅಂಬರೀಶ್ ಅವರ ನಕ್ಷತ್ರದ ಪ್ರಕಾರ 10 ದಿನಗಳ ಮೊದಲೇ ವರ್ಷದ ತಿಥಿ ಕಾರ್ಯ ಮಾಡಲಾಗಿದೆ.
ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ್ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಅಂಬಿ ಸಮಾಧಿ ಬಳಿ ಭೇಟಿ ನೀಡಿ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಅಂಬಿ ಅವರ ಮೊದಲನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ಇಂದು ರೆಬೆಲ್ ಸ್ಟಾರ್ 'ಅಂಬಿ ಅಪ್ಪಾಜಿ' ಸಮಾಧಿ ಮುಂದೆ ಏರ್ಪಡಿಸಿದ್ದ ಡೆಂಟಲ್'ಕ್ಯಾಂಪ್'ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಂಡ್ಯ ಸಂಸದೆ ಸುಮಲತಾ ಚಾಲನೆ ನೀಡಿದರು.
ಅಂಬರೀಶ್ ಅವರ ಸ್ಮಾರಕ ವಿಚಾರವಾಗಿ ಮಾತನಾಡಿದ ಸುಮಲತಾ ಅಂಬರೀಶ್ ''ರಾಜ್ಯ ಸರ್ಕಾರ ಬದಲಾದ ಕಾರಣ ಸ್ಮಾರಕ ಕೆಲಸ ವಿಳಂಬ ಆಗುತ್ತಿದೆ. ಫಿಲಂ ಚೇಂಬರ್ ಮೂಲಕ ಈಗಿನ ರಾಜ್ಯ ಸರ್ಕಾರಕ್ಕೆ ಈ ಕುರಿತು ಮನವಿ ಮಾಡಲು ತೀರ್ಮಾನಿಸಲಾಗಿದೆ. ಆದಷ್ಟೂ ಬೇಗ ಕೆಲಸ ಆರಂಭವಾಗುತ್ತೆ'' ಎಂದು ತಿಳಿಸಿದರು.
ಇನ್ನು ರೆಬೆಲ್ ಸ್ಟಾರ್ ಪುಣ್ಯ ಸ್ಮರಣೆಯ ಪ್ರಯುಕ್ತ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಭೋಜನಕೂಟ ಆಯೋಜಿಸಲಾಗಿತ್ತು.


Click it and Unblock the Notifications











