For Quick Alerts
  ALLOW NOTIFICATIONS  
  For Daily Alerts

  ಅಂಬರೀಷ್ ಜನನಾಯಕ ಎಂದ ಡೀವಿ ಸದಾನಂದಗೌಡ

  |
  ಹಿರಿಯ ನಟ ಅಂಬರೀಷ್ 60 ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂಬರೀಷ್ ಅವರ 60 ನೇ ಹುಟ್ಟುಹಬ್ಬದ ಆಚರಣೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇನ್ನು ಕೆಲವೇ ಹೊತ್ತಿನಲ್ಲಿ ಪ್ರಾರಂಭವಾಗಲಿದೆ. ಅಂಬರೀಷ್ ಅವರನ್ನು ಬಹಳಷ್ಟು ಗಣ್ಯ ವ್ಯಕ್ತಿಗಳು ಬಹಳಷ್ಟು ರೀತಿಯಲ್ಲಿ ಹಾಡಿ ಹೊಗಳಿದ್ದಾರೆ.

  ಮಾನ್ಯ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಂಬರೀಷ್ ಬಗ್ಗೆ "ನಾಯಕರಾಗಿ ಬೆಳೆದಂತೆಲ್ಲ ಸಾಮಾನ್ಯವಾಗಿ ಜನರ ಪಾಲಿಗೆ ಖಳನಟರಾಗಿ ಕಾಣಿಸಿಕೊಳ್ಳುವವರೇ ಹೆಚ್ಚು. ಆದರೆ ಅಂಬರೀಷ್, ಖಳನಾಯಕರಾಗಿ ಚಿತ್ರರಂಗ ಪ್ರವೇಶಿಸಿ ಜನನಾಯಕರಾಗಿ ಪ್ರಸಿದ್ಧರಾಗಿದ್ದಾರೆ.

  ಆ ಕಾರಣಕ್ಕೆ ಅಂಬರೀಷ್ ವಿಶೇಷ ವ್ಯಕ್ತಿ ಎನಿಸಿಕೊಂಡಿದ್ದಾರೆ ಹಾಗೂ ಅವರ ಹುಟ್ಟುಹಬ್ಬವನ್ನು ಎಲ್ಲರೂ ಅತ್ಯಂತ ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಅಂಬರೀಷ್ ಜನರ ನೆರವಿಗೆ ಸ್ಪಂಧಿಸುವ ಧೀಮಂತ ವ್ಯಕ್ತಿ" ಎಂದು ಅಂಬರೀಷ್ ಅವರನ್ನು ಕೊಂಡಾಡಿದ್ದಾರೆ.

  ಅಂಬರೀಷ್ 60ನೇ ಹುಟ್ಟುಹಬ್ಬದ ಅಂಗವಾಗಿ ಜೆಪಿ ನಗರದ ದುರ್ಗಾ ಪರಮೇಶ್ವರಿ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಂಬಿ-ಬಿಂಬ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಡೀವಿ ಸದಾನಂದ ಗೌಡ ಮಾತನಾಡುತ್ತಿದ್ದರು. ಅಂಬರೀಷ್ ಭಾವಚಿತ್ರಗಳೇ ಎಲ್ಲವನ್ನೂ ಹೇಳುತ್ತಿವೆ ಎಂದೂ ಮಾರ್ಮಿಕವಾಗಿ ನುಡಿದರು.

  "ಯುವಜನಾಂಗಕ್ಕೆ ಅಂಬರೀಷ್ ಮಾದರಿ ವ್ಯಕ್ತಿ. ಜನರೊಂದಿಗೆ ಹೇಗಿರಬೇಕು, ಹೇಗೆ ಸ್ಪಂದಿಸಬೇಕು ಎನ್ನುವುದನ್ನು ಅವರಿಂದ ಕಲಿಯಬೇಕು. ಅವರ ಈ ವ್ಯಕ್ತಿತ್ವದಿಂದಲೇ ಖಳನಟರಾಗಿ ಚಿತ್ರರಂಗ ಪ್ರವೇಶಿಸಿದರೂ ಇಂದು ಜನನಾಯಕರಾಗಿ ಹೊರಹೊಮ್ಮಿದ್ದಾರೆ.

  ಅಂಬರೀಷ್ ನಡೆದು ಬಂದ ಹಾದಿ, ಮಾಡಿರುವ ಸಾಧನೆ, ಜೀವನದಲ್ಲಿ ಏನಾದರೂ ಸಾಧಿಸಬಯಸುವವರಿಗೆ ಮಾದರಿ. ಇದೊಂದು ಭಾವನಾತ್ಮಕ ವಿಚಾರ, ಸರಿಯಾಗಿ ಅರ್ಥೈಸಿಕೊಂಡರೆ ಮಾತ್ರ ಅರ್ಥವಾದೀತು. ಈ ಸಾಧನೆಯ ವಿಷಯಗಳು ಮಾತಿಗಿಂತ ಕೃತಿಗೆ ಹಾಗೂ ಭಾವನೆಗಳು ಹೆಚ್ಚು ಪ್ರಾಧಾನ್ಯತೆ ನೀಡುತ್ತವೆ" ಎಂದಿದ್ದಾರೆ ಡೀವಿ ಎಸ್.

  ಈ ಅಂಬಿ-ಬಿಂಬ ಛಾಯಾಚಿತ್ರ ಪ್ರದರ್ಶನವನ್ನು ಮುಖ್ಯಮಂತ್ರಿ ಸದಾನಂದ ಗೌಡರು ವೀಕ್ಷಿಸುವ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಜಯಂತಿ, ಜಯಮಾಲಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ಉಪೇಂದ್ರ, ನಿರ್ದೆಶಕ ರಾಜೇಂದ್ರ ಸಿಂಗ್ ಬಾಬು, ಪತ್ರಕರ್ತ ವಿಶ್ವೇಶ್ವರ ಭಟ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣ ಗೌಡ, ಮೇಯರ್ ವೆಂಕಟೇಶ್ ಮೂರ್ತಿ ಹಾಗೂ ಉಪ ಮೇಯರ್ ಎಲ್ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

  ಇಡೀ ಕನ್ನಡ ಚಿತ್ರರಂಗ ಅವರನ್ನು ಸನ್ಮಾನಿಸಲು ತುದಿಗಾಲಲ್ಲಿ ನಿಂತಿದೆ. ಎಲ್ಲಾ ನಟ-ನಟಿಯರೂ ಅಂಬರೀಷ್ ಹುಟ್ಟುಹಬ್ಬ ಕಾರ್ಯಕ್ರಮದ ನಿಮಿತ್ತ ಒಂದಲ್ಲೊಂದು ಪ್ರದರ್ಶನ ನೀಡಲಿದ್ದಾರೆ. ಕನ್ನಡ ಚಿತ್ರರಂಗ ಹೊರತುಪಡಿಸಿಯೂ ನೆರೆ ಹಗೂ ಪರಭಾಷೆಯ ಚಿತ್ರಂಗದದ ಗಣ್ಯರೂ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಲ್ಲಿ ಪ್ರಮುಖವಾಗಿ ರಜನಿಕಾಂತ್, ಚಿರಂಜೀವಿ ಹಾಗೂ ಶತ್ರುಘ್ನ ಸಿನ್ಹಾ ಹೆಸರು ಕೇಳಿಬರುತ್ತಿದೆ.

  ಒಟ್ಟಿನಲ್ಲಿ, ಅಂಬಿ ಸಂಭ್ರಮ ಕರ್ನಾಟಕದ ನಾಡಹಬ್ಬದ ಆಚರಣೆಯಂತೆ ಗೋಚರಿಸುತ್ತಿದೆ. ಅರಮನೆ ಮೈದಾನ ಅಂಬರೀಷ್ ಅವರ 60 ನೇ ಹುಟ್ಟುಹಬ್ಬದ ಸಂಭ್ರನಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಲಿದೆ. ಅಸಂಖ್ಯಾತ ಅಂಬರೀಷ್ ಅಭಿಮಾನಿಗಳು ಅರಮನೆ ಮೈದಾನದಲ್ಲಿ ಸೇರಲಿದ್ದಾರೆ. ಚಿತ್ರರಂಗದ ಗಣ್ಯಾತಿಗಣ್ಯರು ಬಂದು ಅಂಬರೀಷ್ ಅವರಿಗೆ ಶುಭ ಹಾರೈಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Chief Minister DV Sadananda Gowda told that Ambarish is a great Hero. Even he entered as Villon in Finland, he became the Hero in Society. On the occasion of Ambarish's 60th Birthday Celebration, he is watching Ambi Bimba Stills Exhibition. That time DV Sadananda admires Ambarish in this way. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X