ನಿನ್ನೆಯೇ 'ಪ್ರೇಮ ಬರಹ' ಸಿನಿಮಾ ವೀಕ್ಷಿಸಿದ ಅಂಬಿ - ದರ್ಶನ್ !
Recommended Video

ನಟ ನಿರ್ದೇಶಕ ಅರ್ಜುನ್ ಸರ್ಜಾ ತಮ್ಮ ಮಗಳನ್ನು ಲಾಂಚ್ ಮಾಡಿದ್ದಾರೆ. ಐಶ್ವರ್ಯ ಅರ್ಜುನ್ ನಟನೆಯ ಮೊದಲ ಕನ್ನಡ ಸಿನಿಮಾ 'ಪ್ರೇಮಬರಹ' ಇಂದು ರಾಜ್ಯಾದಂತ್ಯ ರಿಲೀಸ್ ಆಗಿದೆ. ಒಂದು ಕಡೆ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡರೆ ಇತ್ತ ದೊಡ್ಡ ನಟ ನಟಿಯರು ಚಿತ್ರವನ್ನು ನೋಡಿ ಶುಭ ಹಾರೈಸಿದ್ದಾರೆ.
ಇಂದು ಸಿನಿಮಾ ರಿಲೀಸ್ ಇದ್ದು, ನಿನ್ನೆ ಚಿತ್ರದ ಪ್ರೀಮಿಯರ್ ಶೋವನ್ನು ಏರ್ಪಡಿಸಲಾಗಿತ್ತು. ನಟ ಅಂಬರೀಶ್, ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ನಟಿ ತಾರಾ, ಸುಮಲತಾ, ಹರಿಪ್ರಿಯಾ, ಅಮೂಲ್ಯ, ಮೇಘನಾ ರಾಜ್ ಹಾಗೂ ಬಿಗ್ ಬಾಸ್ ಸೀಸನ್ 5 ಕಾರ್ಯಕ್ರಮದ ಸ್ಪರ್ಧಿಗಳಾದ ದಿವಾಕರ್, ಜಗನ್, ಕೃಷಿ ತಾಪಂಡ, ಶೃತಿ ಸಿನಿಮಾವನ್ನು ನೋಡಿದರು.
ವಿಶೇಷ ಅಂದರೆ ನಿನ್ನೆ ಅರ್ಜುನ್ ಸರ್ಜಾ ದಂಪತಿಯ 30ನೇ ವರ್ಷದ ವಿವಾಹ ವಾರ್ಷಿಕೋತ್ಸವ ಇತ್ತು. ಈ ವಿಶೇಷವಾಗಿ ನಿನ್ನೆಯೇ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಓರಾಯನ್ ಮಾಲ್ ನಲ್ಲಿ ಸಿನಿಮಾದ ಪ್ರದರ್ಶನ ಇತ್ತು. ಅನೇಕ ಗಣ್ಯರು ಸಿನಿಮಾ ನೋಡಿ ಖುಷಿ ಪಟ್ಟರು. ದರ್ಶನ್ ಮತ್ತು ಅಂಬರೀಶ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರು. ಅಂದಹಾಗೆ, 'ಪ್ರೇಮಬರಹ' ಚಿತ್ರದಲ್ಲಿ ನಟ ದರ್ಶನ್ ಕೂಡ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ 'ಪ್ರೇಮ ಬರಹ' ಚಿತ್ರದಲ್ಲಿ ಒಂದು ಮುದ್ದಾದ ಲವ್ ಸ್ಟೋರಿ ಇದೆ. ಆದರೆ ಆ ಲವ್ ಸ್ಟೋರಿ ಬೇರೆ ಸಿನಿಮಾಗಳಲ್ಲಿ ನಡೆಯುವ ಲವ್ ಸ್ಟೋರಿಗಿಂತ ಕೊಂಚ ಭಿನ್ನವಾಗಿದೆ. ಟಿಕೆಟ್ ಪಡೆದು ಸೀಟ್ ಮೇಲೆ ಕುಳಿತ ಪ್ರೇಕ್ಷಕರಿಗೆ ಸಿನಿಮಾ ಮೋಸ ಮಾಡುವುದಿಲ್ಲ. ಮನರಂಜನೆ ಜೊತೆ ಜೊತೆಗೆ ಅನೇಕ ಭಾವನಾತ್ಮಕ ಅಂಶಗಳು ಚಿತ್ರದಲ್ಲಿದೆ. ಸಾಮಾನ್ಯ ಪ್ರೇಕ್ಷಕರು ಬಯಸುವ ಪ್ರೇಮಕಥೆ, ಹಾಡು, ಫೈಟ್, ಡ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲ ಅಂಶಗಳನ್ನು ಒಳಗೊಂಡ ಒಂದು ಅಚ್ಚುಕಟ್ಟಾದ ಸುಂದರ ಸಿನಿಮಾ 'ಪ್ರೇಮ ಬರಹ'.


Click it and Unblock the Notifications











