For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ - ಸುಮಲತಾ 28ನೇ ವಿವಾಹ ವಾರ್ಷಿಕೋತ್ಸವ

  |

  ಇಂದು ರೆಬಲ್ ಸ್ಟಾರ್ ಅಂಬರೀಶ್ ಹಾಗೂ ನಟಿ, ಸಂಸದೆ ಸುಮಲತಾ ದಂಪತಿಯ ವಿವಾಹ ವಾರ್ಷಿಕೋತ್ಸವದ ದಿನ. ಅಂಬರೀಶ್ ಇಲ್ಲದೆ ಎರಡನೇ ವರ್ಷ ಸುಮಲತಾ ಮುಂದೆ ಈ ದಿನ ಬಂದಿದೆ.

  ಪ್ರತಿ ಬಾರಿ ಕೂಡ ಈ ದಿನವನ್ನು ಅಂಬರೀಶ್ ಜೊತೆಗೆ ಸಂಭ್ರಮದಿಂದ ಸುಮಲತಾ ಕಳೆಯುತ್ತಿದ್ದರು. ಆದರೆ, ಈ ಬಾರಿ ನೋವು, ದುಃಖ ಇದೆ. ಈ ದಿನವನ್ನು ಸಂಭ್ರಮಿಸಲು ಅಂಬರೀಶ್ ಜೊತೆಗಿಲ್ಲ. ಕಳೆದ ವರ್ಷ ನವೆಂಬರ್ 24 ರಂದು ಅಂಬರೀಶ್ ನಿಧನರಾದರು.

  ಅಂಬರೀಶ್ ಜೊತೆ ಆಕ್ಟ್ ಮಾಡಬಾರದೆಂದು ನಿರ್ಧರಿಸಿದ್ದರಂತೆ ಸುಮಲತಾಅಂಬರೀಶ್ ಜೊತೆ ಆಕ್ಟ್ ಮಾಡಬಾರದೆಂದು ನಿರ್ಧರಿಸಿದ್ದರಂತೆ ಸುಮಲತಾ

  ವಿವಾಹ ವಾರ್ಷಿಕೋತ್ಸವದ ದಿನ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅಂಬರೀಶ್ ರನ್ನು ಸುಮಲತಾ ನೆನೆದಿದ್ದಾರೆ. ''ಡಿಸೆಂಬರ್ 8, 1991.. 28 ವರ್ಷ... ನಗು, ಅಳು, ಸಂತೋಷ, ಪ್ರೀತಿ ಹಂಚಿಕೊಂಡು. 28 ವರ್ಷ ಅಂದರೆ ಎಂದಿಗೂ ಎಂದೆಂದಿಗೂ. ಪ್ರೀತಿ ಎಂದೆಂದಿಗೂ.'' ಎಂದು ಬರೆದುಕೊಂಡಿದ್ದಾರೆ.

  ಅಂಬರೀಶ್ ಹಾಗೂ ಸುಮಲತಾ ಒಟ್ಟಿಗೆ ನಟಿಸಿದ್ದ 'ಹಲೋ ನನ್ನ ಪ್ರೇಯಸಿ..', 'ಅಂದ ಚೆಂದ ತಂದ ಕಲ್ಪನಾ..' ಹಾಗೂ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಹಾಡುಗಳನ್ನು ಹಂಚಿಕೊಂಡಿದ್ದಾರೆ. ಈ ಹಾಡುಗಳ ಮೂಲಕ ಅಂಬಿಯನ್ನು ನೆನಪು ಮಾಡಿದ್ದಾರೆ.

  ಅಂಬರೀಶ್-ಸುಮಲತಾ ನಡುವೆ ಪ್ರೀತಿ ಮೂಡಿದ್ಹೇಗೆ.? 'ರೆಬೆಲ್ ಇನ್ ಟ್ರಬಲ್' ಕಥೆ ಇಲ್ಲಿದೆ..ಅಂಬರೀಶ್-ಸುಮಲತಾ ನಡುವೆ ಪ್ರೀತಿ ಮೂಡಿದ್ಹೇಗೆ.? 'ರೆಬೆಲ್ ಇನ್ ಟ್ರಬಲ್' ಕಥೆ ಇಲ್ಲಿದೆ..

  1991 ಡಿಸೆಂಬರ್ 8 ರಂದು ಅಂಬರೀಶ್ ಹಾಗೂ ಸುಮಲತಾ ಮದುವೆ ಆಗಿದ್ದರು. ಚಿತ್ರರಂಗದಲ್ಲಿ ಸ್ನೇಹಿತ ಸ್ನೇಹಿತೆ ಆಗಿದ್ದ ಇಬ್ಬರು ಪ್ರೀತಿ ಮಾಡಿದರು. ನಂತರ ಈ ಜೋಡಿ ಮದುವೆ ಮಾಡಿಕೊಂಡರು. ಕನ್ನಡದ ಬೆಸ್ಟ್ ತಾರ ಜೋಡಿಗಳಲ್ಲಿ ಈ ಜೋಡಿ ಒಂದಾಯಿತು.

  English summary
  Ambarish and Sumalatha 28th wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X