'ದಿ ಟೆರರಿಸ್ಟ್' ಮುಖವಾಡ ಕಳಚಲಿದ್ದಾರೆ ರೆಬೆಲ್ ಸ್ಟಾರ್
ರೆಬೆಲ್ ಸ್ಟಾರ್ ಅಂಬರೀಶ್ ಇಂದು ಟೆರರಿಸ್ಟ್ ಗಳ ಮುಖವಾಡವನ್ನು ಕಳಚಲಿದ್ದಾರೆ. ಹೌದು ಈ ವಿಚಾರ ಕೇಳಿದ್ರೆ ಇದೇನಪ್ಪಾ, ಅಂಬಿಗೂ ಟೆರರಿಸ್ಟ್ ಗಳಿಗೂ ಎಲ್ಲಿಂದ ಸಂಬಂಧ ಎಂದು ಯೋಚನೆ ಮಾಡೋದಕ್ಕೆ ಹೋಗಬೇಡಿ. ಯಾಕೆಂದ್ರೆ ನಾವು ಹೇಳುತ್ತಿರುವುದು ಸಿನಿಮಾ ಬಗ್ಗೆ.
ನಟಿ ರಾಗಿಣಿ ದ್ವಿವೇದಿ ಅಭಿನಯದ 'ದಿ ಟೆರರಿಸ್ಟ್' ಸಿನಿಮಾದ ಮೊದಲ ಪೋಸ್ಟರ್ ಅನ್ನು ನಟ ರೆಬೆಲ್ ಸ್ಟಾರ್ ಅಂಬರೀಶ್ ಬಿಡುಗಡೆ ಮಾಡುತ್ತಿದ್ದಾರೆ. ಟೈಟಲ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ 'ದಿ ಟೆರರಿಸ್ಟ್' ಚಿತ್ರವನ್ನು ಪಿ ಸಿ ಶೇಖರ್ ನಿರ್ದೇಶನ ಮಾಡಿದ್ದಾರೆ.
'ದಿ ಟೆರರಿಸ್ಟ್' ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಲಂಕಾರ್ ಸಂತಾನಂ ಎನ್ನುವವರು ಚಿತ್ರಕ್ಕೆ ಬಂಡವಾಳ ಹಾಕಿದ್ದು, ಮುರಳಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. 'ರಾಗ' ಸಿನಿಮಾದ ನಂತರ ಸಚಿನ್ ಜಗದೀಶ್ವರ್ ಮತ್ತೆ ಪಿ ಸಿ ಶೇಖರ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ರಾಗಿಣಿ ಜೊತೆಯಾಗಿ 'ದಿ ಟೆರರಿಸ್ಟ್' ಸಿನಿಮಾದಲ್ಲಿ ಗಿರೀಶ್, ಲೂಸಿಯಾ ಕೃಷ್ಣ, ಭಾನು, ಮನು, ಸಮೀಕ್ಷಾ ಹಾಗೂ ಬಹುತೇಕ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. 'ದಿ ಟೆರರಿಸ್ಟ್' ಸಸ್ಪೆನ್ಸ್ -ಥ್ರಿಲ್ಲರ್ ಸಿನಿಮಾ ಆಗಿದ್ದು ಪಿ ಸಿ ಶೇಖರ್ ಅರ್ಜುನ್ ಚಿತ್ರದ ನಂತರ ಮತ್ತೆ ಸಸ್ಪೆನ್ಸ್ -ಥ್ರಿಲ್ಲರ್ ಚಿತ್ರ ಡೈರೆಕ್ಟ್ ಮಾಡಲು ಮುಂದಾಗಿದ್ದಾರೆ.
ಇಂದು ಬಿಡುಗಡೆ ಮಾಡುತ್ತಿರಿವ 'ದಿ ಟೆರೆರಿಸ್ಟ್' ಸಿನಿಮಾದ ಪೋಸ್ಟರ್ ಒಂದು ಕಥೆ ಹೇಳುತ್ತಂತೆ. ಅದಕ್ಕಾಗಿಯೇ ನಿರ್ದೇಶಕರು ಸಾಕಷ್ಟು ಸಮಯ ತೆಗೆದುಕೊಂಡು ಪೋಸ್ಟರ್ ಡಿಸೈನ್ ಮಾಡಿಸಿದ್ದಾರೆ. ಹಾಗಾಗಿ ಸ್ಪೆಷಲ್ ಆಗಿರುವ ಪೋಸ್ಟರ್ ಅನ್ನು ರೆಬೆಲ್ ಸ್ಟಾರ್ ರಿಂದ ಬಿಡುಗಡೆ ಮಾಡಿಸುತ್ತಿದೆ ಚಿತ್ರತಂಡ.


Click it and Unblock the Notifications











