ಟ್ರೈನಿಂಗ್ ಮುಗಿಸಿ ಬಂದ ಅಂಬರೀಶ್ ಲುಕ್ ನೋಡಿ
ರೆಬಲ್ ಸ್ಟಾರ್ ಅಂಬರೀಶ್ ರಾಜಕೀಯಕ್ಕೆ ಬಂದ ನಂತರ ಆಗೊಂದು ಹೀಗೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದರ ಜೊತೆಗೆ ಮನಸ್ಸಿಗೆ ಇಷ್ಟವಾದ ಪಾತ್ರಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ, ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿನ ರೆಬಲ್ ಸ್ಟಾರ್ ಲುಕ್ ರಿವಿಲ್ ಆಗಿದೆ.
ರೀಮೇಕ್ ಚಿತ್ರವಾದರೂ ನಮ್ಮ ನೆಟಿವಿಟಿಗೆ ತಕ್ಕಂತೆ ಕಥೆಯನ್ನ ಬದಲಾವಣೆ ಮಾಡಿಕೊಂಡಿರುವ ನಿರ್ದೇಶಕ ಗುರುದತ್ತ್ ಗಾಣಿಗ ಅಂಬಿಗೆ ಆಕ್ಷನ್ ಕಟ್ ಹೇಳಲು ಶುರು ಮಾಡಿದ್ದಾರೆ. ಕಳೆದ ವಾರವಷ್ಟೇ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದ ಅಂಬಿ ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನುವ ಕುತೂಹಲ ಸಾಕಷ್ಟು ಜನರಿಗೆ ಇತ್ತು. ಅದರಂತೆ ಅಂಬರೀಶ್ ಡಿಫ್ರೆಂಟ್ ಲುಕ್ ನಲ್ಲಿ ಸೆಟ್ ಗೆ ಎಂಟ್ರಿಕೊಟ್ಟಿದ್ದಾರೆ.
ಹಾಗಾದ್ರೆ, ಅಂಬಿ ಪಾತ್ರದ ವಿಶೇಷತೆ ಏನು? ಅಂಬಿ ಹೊಸ ಲುಕ್ ನೋಡಿ ಅಭಿಮಾನಿಗಳು ಏನು ಹೇಳುತ್ತಿದ್ದಾರೆ ? 'ಅಂಬಿ ನಿಂಗ್ ವಯಸ್ಸಾಯ್ತೋ' ಟೀಂ ಗೆ ಕಿಚ್ಚನ ಎಂಟ್ರಿ ಯಾವಾಗ ಆಗುತ್ತೆ? ಎಲ್ಲವನ್ನೂ ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಮುಂದೆ ಓದಿ...

ವಯಸ್ಸಾಗಿರೋ ಅಂಬಿ ನೋಡಿ
'ವೀರ ಪರಂಪರೆ' ಸಿನಿಮಾದ ನಂತರ ಅಂಬರೀಶ್ ಹಾಗೂ ಸುದೀಪ್ ಒಟ್ಟಿಗೆ ಅಭಿನಯಿಸುತ್ತಿರುವ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ'. ಕಥೆ ತುಂಬಾ ಚೆನ್ನಾಗಿದೆ ಅನ್ನೋ ಕಾರಣದಿಂದ ಇಬ್ಬರು ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಈ ಸಿನಿಮಾದಲ್ಲಿ ಅಂಬಿ ಯಾವ ಲುಕ್ ನಲ್ಲಿ ಬರುತ್ತಾರೆ ಅನ್ನೋ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ. ಅಂಬರೀಶ್ ಅವರ ಲುಕ್ ರಿವಿಲ್ ಆಗಿದೆ.

ಫಿಟ್ ಆಗಿ ಕಾಣಿಸುತ್ತಿದ್ದಾರೆ ಅಂಬಿ
'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ಅಂಬರೀಶ್ ಮುಖ್ಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿರುವ ಅಂಬರೀಶ್ ಫಿಟ್ ಆಗಿ ಕಾಣಿಸಿಕೊಳ್ಳಬೇಕು, ಅದೇ ಕಾರಣದಿಂದ ಒಂದಿಷ್ಟು ವರ್ಕ್ ಔಟ್ ಮಾಡಿದ್ದಾರೆ ರೆಬಲ್ ಸ್ಟಾರ್.

ಅಭಿನಯಕ್ಕೆ ಬೆಲೆ ನೀಡುವ ಕಲಾವಿದ
ರೆಬಲ್ ಸ್ಟಾರ್ ಅಂಬರೀಶ್ ಕಲೆಗೆ ಬೆಲೆ ಕೊಡುವ ಕಲಾವಿದ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ನಟ ಆದಿ ಲೋಕೇಶ್ ಸಿನಿಮಾದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದು 'ಅಂಬಿ', ಆದಿ ಲೋಕೇಶ್ ಹಿಂದೆ ಕೈಕಟ್ಟಿ ನಿಂತು
ಅಭಿನಯಿಸಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಮುಂದಿನ ವರ್ಷ ಚಿತ್ರತಂಡ ಸೇರಲಿರೋ ಕಿಚ್ಚ
ಮುಹೂರ್ತ ಮಾಡಿ ಚಿತ್ರೀಕರಣ ಶುರು ಮಾಡಿರುವ ನಿರ್ದೇಶಕ ಗುರುದತ್ತ್ ಗಾಣಿಗ, ಅಂಬರೀಶ್ ಅವರ ದೃಶ್ಯಗಳ ಚಿತ್ರೀಕರಣ ಮುಗಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸುಹಾಸಿನಿ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು ಫೆಬ್ರವರಿ ತಿಂಗಳಲ್ಲಿ ಕಿಚ್ಚ ಸುದೀಪ್ ಹಾಗೂ ಶೃತಿ ಹರಿಹರನ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.


Click it and Unblock the Notifications











