twitter
    For Quick Alerts
    ALLOW NOTIFICATIONS  
    For Daily Alerts

    ಶೂಟಿಂಗ್ ಹಂತದಲ್ಲೇ ದಾಖಲೆ ಮಾಡಲು ಹೊರಟ 'ಅಮರ್'

    By Bharath Kumar
    |

    ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ನಟಿಸುತ್ತಿರುವ 'ಅಮರ್' ಚಿತ್ರ ಶೂಟಿಂಗ್ ಹಂತದಲ್ಲೇ ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮುಗಿಸಿರುವ ಅಮರ್, ಮುಂದಿನ ಭಾಗಕ್ಕಾಗಿ ವಿದೇಶಕ್ಕೆ ತೆರಳಲಿದೆ.

    90ರ ದಶಕದಲ್ಲಿ ನಡೆದಂಥ ಒಂದು ರಿಯಲ್ ಘಟನೆಯನ್ನ ಆಧರಿಸಿ ಈ ಚಿತ್ರಕ್ಕೆ ಕಥೆ ಮಾಡಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಅತಿಹೆಚ್ಚು ಲೊಕೇಶನ್ ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರ ಅಮರ್ ಎಂಬ ಹೆಗ್ಗಳಿಕೆ ಪಡೆದಿದೆ.

    ಸಂಪೂರ್ಣ ಆಸ್ತಿಯನ್ನು ಪುತ್ರನ ಹೆಸರಿಗೆ ಬರೆದ ರೆಬೆಲ್ ಸ್ಟಾರ್ ಸಂಪೂರ್ಣ ಆಸ್ತಿಯನ್ನು ಪುತ್ರನ ಹೆಸರಿಗೆ ಬರೆದ ರೆಬೆಲ್ ಸ್ಟಾರ್

    ಅಂಬರೀಶ್ ಮಗನ ಚೊಚ್ಚಲ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಗಶೇಖರ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಅಂಬರೀಶ್ ಅಭಿನಯದ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದ ಸಂದೇಶ ನಾಗರಾಜ್ ಅವರು ಈಗ ಅವರ ಪುತ್ರನ ಸಿನಿಮಾಗೆ ಹಣ ಹೂಡುತ್ತಿದ್ದಾರೆ. ಹಾಗಿದ್ರೆ, ಅಮರ್ ಚಿತ್ರದ ಶೂಟಿಂಗ್ ಎಲ್ಲಿಯವರೆಗೂ ಬಂದಿದೆ. ಮುಂದೆ ಓದಿ.....

    ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದಾರೆ ಗೊತ್ತಾ.?

    ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದಾರೆ ಗೊತ್ತಾ.?

    ಈಗಾಗಲೇ ಬೆಂಗಳೂರಿನಲ್ಲಿ 10 ದಿನಗಳ ಶೂಟಿಂಗ್ ಮುಗಿಸಿರುವ ಚಿತ್ರತಂಡ ರಾಜ್ಯದ ಬಹುತೇಕ ಲೊಕೇಶನ್‍ಗಳಲ್ಲಿ ಚಿತ್ರೀಕರಣ ನಡೆಸಿದೆ. ಮಣಿಪಾಲದಲ್ಲಿ 7 ದಿನ, ಮಂಗಳೂರಿನಲ್ಲಿ 7 ದಿನ, ಮಡಿಕೇರಿಯಲ್ಲಿ 7 ದಿನ ಹಾಗೂ ಕೇರಳದ ಸುಲ್ತಾನ್ ಬತೇರಿಯಲ್ಲಿ 2 ದಿನಗಳ ಕಾಲ ಚಿತ್ರೀಕರಣ ಮಾಡಿದೆ. ಅಲ್ಲದೆ ಊಟಿಯಲ್ಲಿ 6 ದಿನ ಮತ್ತು ಮೈಸೂರಿನಲ್ಲಿ 2 ದಿನಗಳ ಕಾಲ ಚಿತ್ರೀಕರಣ ನಡೆಸಿದೆ.

    ಅಂಬರೀಶ್ ಮಗನ ಚಿತ್ರದಲ್ಲಿ ಅಪ್ಪನಾದ ಸ್ಟೈಲಿಶ್ ವಿಲನ್ಅಂಬರೀಶ್ ಮಗನ ಚಿತ್ರದಲ್ಲಿ ಅಪ್ಪನಾದ ಸ್ಟೈಲಿಶ್ ವಿಲನ್

    45 ದಿನಗಳ ಚಿತ್ರೀಕರಣ ಬಾಕಿಯಿದೆ

    45 ದಿನಗಳ ಚಿತ್ರೀಕರಣ ಬಾಕಿಯಿದೆ

    ಈಗಾಗಲೇ 50 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಅಮರ್ ತಂಡ ಮುಂದಿನ ಶೆಡ್ಯೂಲ್ ನಲ್ಲಿ ಜೈಪುರದಲ್ಲಿ 5 ದಿನ ಸ್ಕೂಟರ್ ರೇಸ್ ಚಿತ್ರೀಕರಣ ಹಾಗೂ ಹೊರದೇಶದಲ್ಲಿ ಪ್ರಮುಖ ಮಾತಿನ ಭಾಗದ ಚಿತ್ರೀಕರಣ ನಡೆಸುವ ಪ್ಲಾನ್ ಹಾಕಿಕೊಂಡಿದೆ. ಅಲ್ಲದೆ ಚಿತ್ರದ ಕೊನೇಭಾಗವನ್ನು ಬೆಂಗಳೂರಿನಲ್ಲಿ 10 ದಿನಗಳ ಕಾಲ ಚಿತ್ರೀಕರಿಸಲಿದೆ. ಇನ್ನೂ 45 ದಿನಗಳ ಚಿತ್ರೀಕರಣ ಬಾಕಿಯಿದೆ.

    ಕೊಯಂಬತ್ತೂರಿಗೆ ಹೊರಟು ನಿಂತ ರೆಬೆಲ್ ಸ್ಟಾರ್ ಪುತ್ರಕೊಯಂಬತ್ತೂರಿಗೆ ಹೊರಟು ನಿಂತ ರೆಬೆಲ್ ಸ್ಟಾರ್ ಪುತ್ರ

    ಬೈಕ್ ರೇಸ್ ಪ್ರಮುಖ ಕಥೆ

    ಬೈಕ್ ರೇಸ್ ಪ್ರಮುಖ ಕಥೆ

    ಸಾಮಾನ್ಯವಾಗಿ ಎಲ್ಲರೂ ಹಾಡುಗಳ ಚಿತ್ರಣಕ್ಕೆ ಫಾರಿನ್ ಗೆ ಹೋಗುತ್ತಾರೆ. ಆದರೆ ಚಿತ್ರಕಥೆಗೆ ಫಾರಿನ್ ಲೊಕೇಶನ್ ಅಗತ್ಯವಾಗಿತ್ತು ಎನ್ನುವ ಕಾರಣಕ್ಕೆ ಚಿತ್ರತಂಡ ವಿದೇಶದಲ್ಲಿ ಚಿತ್ರೀಕರಣ ನಡೆಸಲಿದೆ. ಈ ಚಿತ್ರದಲ್ಲಿ ಬೈಕ್ ರೇಸ್ ಪ್ರಮುಖ ಭಾಗವಾಗಿ ಮೂಡಿಬಂದಿದೆ. ಗೋ ಗ್ರೀನ್ ಎನ್ನುವ ಮರಗಿಡ ಬೆಳೆಸಿ ಕಾನ್ಸೆಪ್ಟ್ ಅಡಿ, 50 ಜನ ರಿಯಲ್ ಬೈಕರ್ಸ್ ಈ ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ.

    'ಅಮರ್' ಅಡ್ಡದಲ್ಲಿ ಬೈಕ್ ರೈಡ್ ಮಾಡಿದ ತಾನ್ಯ 'ಅಮರ್' ಅಡ್ಡದಲ್ಲಿ ಬೈಕ್ ರೈಡ್ ಮಾಡಿದ ತಾನ್ಯ

    'ಅಮರ್' ಚಿತ್ರದ ತಾಂತ್ರಿಕ ತಂಡ

    'ಅಮರ್' ಚಿತ್ರದ ತಾಂತ್ರಿಕ ತಂಡ

    ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ನಾಗಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜಾಲಿಬಾಸ್ಟಿನ್, ಪಾಡ್ಯನ್ ಅವರ ಸಾಹಸ, ಮೋಹನ್ ಬಿ.ಕೆರೆ ಅವರ ಕಲೆ, ದೀಪು ಎಸ್.ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಅಭಿಷೇಕ್, ತಾನ್ಯಾ ಹೋಪ್, ಚಿಕ್ಕಣ್ಣ, ಸುಧಾರಾಣಿ, ದೀಪಕ್ ಶೆಟ್ಟಿ, ಸಾಧುಕೋಕಿಲ ಚಿತ್ರದ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ.

    English summary
    Rebel star ambarish son abhishek starrer debut movie amar create new record in shooting. amar movie completes 50 % of shooing.
    Tuesday, August 21, 2018, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X