twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಶ್ ಸ್ಥಾನ ತುಂಬ ಬಲ್ಲ ನಟನ ಬಗ್ಗೆ ಅಭಿ ಹೇಳೋದೇ ಬೇರೆ

    |

    ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಈಗ ಬಹುಮುಖ್ಯವಾಗಿ ಚರ್ಚೆಯಾಗ್ತಿರುವ ವಿಷ್ಯ ಅಂದ್ರೆ, ''ಅಂಬರೀಶ್ ಸ್ಥಾನವನ್ನ ತುಂಬ ಬಲ್ಲ ಕಲಾವಿದ ಯಾರು'' ಅಂತ. ಅಂಬಿ ಇದ್ದಾಗ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಏನೇ ಸಮಸ್ಯೆಯಾದರೂ, ಅಭಿವೃದ್ದಿ ಕೆಲಸಗಳಾದರೂ ತಾವೇ ಮುಂದೆ ನಿಂತು ಮಾಡ್ತಿದ್ರು.

    ಈಗ ಅಂತಹದ್ದೇ ನಾಯಕನ ಅವಶ್ಯಕತೆ ಕನ್ನಡ ಚಿತ್ರರಂಗಕ್ಕೆ ಇದೆ. ಇದು ಬಹುತೇಕ ಕಲಾವಿದರ ಅಭಿಪ್ರಾಯ. ಅಂಬಿಯ ಈ ಸ್ಥಾನಕ್ಕೆ ಕೆಲವು ಹಿರಿಯ ನಟರ ಹೆಸರು ಪ್ರಸ್ತಾಪವಾಗ್ತಿದೆ. ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

    ಸ್ಯಾಂಡಲ್ ವುಡ್ ಗೆ ಮುಂದಿನ 'ಬಾಸ್' ಯಾರು.?ಸ್ಯಾಂಡಲ್ ವುಡ್ ಗೆ ಮುಂದಿನ 'ಬಾಸ್' ಯಾರು.?

    ಇದೀಗ, ಈ ವಿಷ್ಯದ ಬಗ್ಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಕೂಡ ಮಾತನಾಡಿದ್ದಾರೆ. ತಂದೆಯ ಸ್ಥಾನವನ್ನ ಯಾರು ತುಂಬಬಲ್ಲರು ಎಂದು ಹೇಳಿದ್ದಾರೆ. ಮುಂದೆ ಓದಿ.....

    ಇಂಡಸ್ಟ್ರಿಗೆ ಒಬ್ಬರು ಬೇಕು

    ಇಂಡಸ್ಟ್ರಿಗೆ ಒಬ್ಬರು ಬೇಕು

    ಅಂಬರೀಶ್ ಅವರ ನಂತರ ಆ ಸ್ಥಾನದಲ್ಲಿ ಯಾರು ಕೂರಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿ, ''ಇಂಡಸ್ಟ್ರಿಗೆ ಯಾರಾದರೂ ಒಬ್ಬರು ನಾಯಕರು ಇರಬೇಕು. ಇದು ಚಿತ್ರರಂಗದ ಬೆಳವಣಿಗೆ ಸಹಾಯವಾಗಲಿದೆ. ಇದು ಆಗಲೇಬೇಕು. ಬಟ್, ಯಾರಾಗಬಹುದು ಅಂತ ಗೊತ್ತಿಲ್ಲ'' ಎಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಭಿಪ್ರಾಯ ಪಟ್ಟಿದ್ದಾರೆ.

    ಆ ಸ್ಥಾನ ಭರ್ತಿ ಆಗಬೇಕು

    ಆ ಸ್ಥಾನ ಭರ್ತಿ ಆಗಬೇಕು

    ಇಂಡಸ್ಟ್ರಿಯಲ್ಲಿ ಯಾರೊಬ್ಬರ ಹೆಸರನ್ನ ತೆಗೆದುಕೊಳ್ಳದ ಅಭಿಷೇಕ್ ''ಕನ್ನಡ ಚಿತ್ರರಂಗವನ್ನ ಒಗ್ಗಟ್ಟಾಗಿ ಮುನ್ನಡೆಸುಕೊಂಡು ಹೋಗಲು ಆ ನಾಯಕನ ಅವಶ್ಯಕತೆ ಇದೆ. ಬಟ್, ಯಾರಾದರೂ ತೆಗೆದುಕೊಂಡು ಹೋಗಲಿ. ಆ ಸ್ಥಾನವನ್ನ ಭರ್ತಿ ಮಾಡುವ ಪ್ರಯತ್ನ ಆಗಬೇಕು'' ಎಂದರು.

    ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್ ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್

    ಹೆಸರು ಹೇಳುವುದು ಬೇಡ

    ಹೆಸರು ಹೇಳುವುದು ಬೇಡ

    ಹಲವು ಜನ ನಟರಿದ್ದಾರೆ, ಯಾರಾದರೂ ಕೆಲವು ಹೆಸರುಗಳನ್ನ ಸೂಚಿಸಬಹುದು ಎಂದು ನಿರೂಪಕರು ಕೇಳಿದ್ದಕ್ಕೆ ''ಬೇಡ, ಹೆಸರು ಹೇಳುವುದರಿಂದ ಬೇಸರವಾಗಬಹುದು. ಯಾರಾದರೂ ಆಗಲಿ, ದೊಡ್ಡ ನಟನೇ ಆಗಬೇಕು ಅಂತಲ್ಲ. ಸಾಮರ್ಥ್ಯವಿದ್ದವರು ಯಾರೇ ಮುನ್ನಡೆಸಿದರು ಸಂತೋಷವೇ. ಅಪ್ಪ ಯಾರ ಬಗ್ಗೆಯೂ ಫೇವರೆಟ್ ಆಗಿ ನಡೆದುಕೊಳ್ಳುತ್ತಿರಲಿಲ್ಲ. ಎಲ್ಲರನ್ನು ಒಂದೇ ದೃಷ್ಟಿಯಲ್ಲಿ ನೋಡಿದವರು'' ಎಂದು ಅಭಿ ತಮ್ಮ ನಿಲುವನ್ನ ತಿಳಿಸಿದರು.

    ಸುದೀಪ್ ಏನು ಹೇಳಿದ್ದರು

    ಸುದೀಪ್ ಏನು ಹೇಳಿದ್ದರು

    ನಾವು ಯಾರೂ ಆ ಸ್ಥಾನಕ್ಕೆ ಅರ್ಹರಲ್ಲ. ಅದರ ಅಕ್ಕಪಕ್ಕನೂ ಇಲ್ಲ. ಅವರು ಹಿರಿಯರು ಅಥವಾ ನಟರು ಮಾತ್ರವಲ್ಲ ತುಂಬಾ ಗೌರವ ಹೊಂದಿದ್ದ ಹಾಗೂ ಸಂಪಾದಿಸಿದ್ದ ವ್ಯಕ್ತಿ. ಹಾಗ್ನೋಡಿದ್ರೆ ನಮ್ಮಲ್ಲಿ ಇನ್ನು ಕೆಲವು ಹಿರಿಯ ನಟರಿದ್ದಾರೆ. ರವಿಚಂದ್ರನ್, ಶಿವರಾಜ್ ಕುಮಾರ್ ಅಂತವರಿದ್ದಾರೆ. ಇವರ ಮಾತಿಗೆ ತೂಕಯಿದೆ. ಇಂಡಸ್ಟ್ರಿ ಇವರ ಮಾತಿಗೆ ಬೆಲೆ ನೀಡುತ್ತೆ. ಅವರಿಬ್ಬರಿಗೆ ಸೀನಿಯರಿಟಿ ಇದೆ'' ಎಂದು ಸುದೀಪ್ ಅಭಿಪ್ರಾಯ ಪಟ್ಟಿದ್ದಾರೆ.

    ಸುದೀಪ್ ಪ್ರಕಾರ ಸ್ಯಾಂಡಲ್ ವುಡ್ ಗೆ ಈ ನಟ 'ಬಾಸ್' ಆಗ್ಬೇಕಂತೆ.! ಸುದೀಪ್ ಪ್ರಕಾರ ಸ್ಯಾಂಡಲ್ ವುಡ್ ಗೆ ಈ ನಟ 'ಬಾಸ್' ಆಗ್ಬೇಕಂತೆ.!

    English summary
    Ambarish was not only a hero in movies, but also a leader for kannada film industry. Apart him who will leads the industry now.? ambarish son abhishek spoke about this debate.
    Saturday, March 30, 2019, 12:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X