ವಿಡಿಯೋ: ಕನ್ನಡದ ಮೊದಲ 360 ಡಿಗ್ರಿ ಟೀಸರ್ ಬಿಡುಗಡೆ

By Pavithra

ಅಂಬಿ ನಿಂಗ್ ವಯಸ್ಸಾಯ್ತೋ ಸದ್ಯ ಅಂಬರೀಶ್ ಅಭಿನಯ ಮಾಡಿ ತೆರೆಗೆ ಬರಲು ಸಿದ್ದವಾಗಿರುವ ಚಿತ್ರ. 'ವೀರಪರಂಪರೆ' ಚಿತ್ರದ ನಂತರ ಕಿಚ್ಚ ಸುದೀಪ್ ಹಾಗೂ ಅಂಬರೀಶ್ ಅಭಿನಯದ ಸಿನಿಮಾ. ಇಂದು ಅಂಬರೀಶ್ ಹುಟ್ಟುಹಬ್ಬದ ವಿಶೇಷವಾಗಿ ಅಂಬಿ ನಿಂಗ್ ವಯಸ್ಸಾಯ್ತೋ ಟೀಂ ಸ್ಪೆಷಲ್ ಆಗಿರುವ ಟೀಸರ್ ಅನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

360 ಡಿಗ್ರಿ ಯಲ್ಲಿ ಚಿತ್ರೀಕರಿಸಿ ನೋಡಲು ಸಾಧ್ಯವಾಗುವಂತಹ ಟೀಸರ್ ಬಿಡುಗಡೆ ಮಾಡಿದ್ದು ಪ್ರೇಕ್ಷಕರಿಗೆ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಉಂಟು ಮಾಡಿದೆ. ಇನ್ನು ಟೀಸರ್ ಬಗೆಗಿನ ವಿಶೇಷತೆಗಳನ್ನು ಹೇಳುವುದಾದರೇ ಅಂಬಿ ಅವರನ್ನು ಈ ಚಿತ್ರದಲ್ಲಿ ಔಟ್ ಅಂಡ್ ಔಟ್ ಮಾಸ್ ಫೀಲ್ ನಲ್ಲಿ ನೋಡಬಹುದು ಎನ್ನುವ ಸೂಚನೆ ಈಗಲೇ ಸಿಗುತ್ತಿದೆ.

Ambi ning vaisaytho movie teaser released

ಈ ಹಿಂದೆ ಇಮ್ರಾನ್ ಸರ್ದಾರಿಯಾ ತಮ್ಮ 'ಉಪ್ಪು ಹುಳಿ ಖಾರ' ಚಿತ್ರದ ಹಾಡನ್ನು 360 ಡಿಗ್ರಿಯಲ್ಲಿ ಶೂಟ್ ಮಾಡಿದ್ದರು. ಅದೇ ರೀತಿಯಲ್ಲಿ ಅಂಬರೀಶ್ ಅವರ ಟೀಸರ್ ಕೂಡ ಇದೆ. ನಿರ್ದೇಶಕ ಗುರುದತ್ತ್ ಗಾಣಿಗ ಡೈರೆಕ್ಟ್ ಮಾಡುತ್ತಿರುವ ಮೊದಲ ಚಿತ್ರ ಇದಾಗಿದ್ದು ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಜಾಕ್ ಮಂಜು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

Ambi ning vaisaytho movie teaser released

ವಿಶೇಷವಾಗಿರುವುದನ್ನು ಅಂಬಿ ಅಭಿಮಾನಿಗಳಿಗೆ ನೀಡುವ ಉದ್ದೇಶದಿಂದ ಈ ರೀತಿಯ ಟೀಸರ್ ಮಾಡಲಾಗಿದೆ. ಇನ್ನು ಅರ್ಜುನ್ ಜನ್ಯ ಸಂಗೀತ ಕೂಡ ಸಿನಿಮಾಗೆ ಫ್ಲಸ್ ಪಾಯಿಂಟ್ ಆಗಲಿದೆ. ಟೀಸರ್ ನಲ್ಲಿ ಉಗ್ರಂ ಮಂಜು ಹಾಗೂ ಶಿವರಾಜ್ ಕೆ ಆರ್ ಪೇಟೆ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada Ambi ning vaisaytho movie teaser released. This teaser can be viewed in 360 degrees. This teaser has been released as Ambarish's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X