ಅಂಬರೀಶ್ ಗೆ ವಯಸ್ಸಾಯ್ತು: ಇನ್ಮುಂದೆ ಸಿನಿಮಾ ಮಾಡೋದು ಡೌಟು.?

By Harshitha

ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಇಂದು ಸಂಭ್ರಮದ ಹಬ್ಬ. ಯಾಕಂದ್ರೆ, ಇವತ್ತು 'ಮಂಡ್ಯದ ಗಂಡು' ಅಂಬರೀಶ್ ಹುಟ್ಟುಹಬ್ಬ. 'ಕಲಿಯುಗದ ಕರ್ಣ' ಅಂಬರೀಶ್ ಇಂದು ತಮ್ಮ 66ನೇ ಜನ್ಮದಿನವನ್ನ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ.

ಈ ವರ್ಷದ ಅಂಬರೀಶ್ ಬರ್ತಡೇ ತುಂಬಾನೇ ಸ್ಪೆಷಲ್. ಹೇಗೆ ಅಂದ್ರೆ, ಅಂಬರೀಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಪುತ್ರ ಅಭಿಶೇಕ್ ರವರ ಚೊಚ್ಚಲ ಚಿತ್ರ 'ಅಮರ್' ಸೆಟ್ಟೇರಿದೆ.

ಒಂದ್ಕಡೆ ಮಗ ಅಭಿಶೇಕ್ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂತಸ. ಇನ್ನೊಂದ್ಕಡೆ ಜನ್ಮದಿನದ ಸಡಗರ. ಹೀಗಾಗಿ ಅಂಬರೀಶ್ ಇವತ್ತು ಡಬ್ಕಿ ಡಬಲ್ ಖುಷಿಯಲ್ಲಿದ್ದಾರೆ. ಈ ಖುಷಿಯ ನಡುವೆ ಅಭಿಮಾನಿಗಳಿಗೆ ಕೊಂಚ ಬೇಸರದ ಸುದ್ದಿಯನ್ನೂ ಅಂಬರೀಶ್ ನೀಡಿದ್ದಾರೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಇನ್ಮುಂದೆ ಅಂಬಿ ಸಿನಿಮಾ ಮಾಡೋದು ಡೌಟು.?

ಇನ್ಮುಂದೆ ಅಂಬಿ ಸಿನಿಮಾ ಮಾಡೋದು ಡೌಟು.?

ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ಅಂಬರೀಶ್ ಇವತ್ತು ಮಾಧ್ಯಮಗಳಿಗೆ ಒಂದು ಹೇಳಿಕೆ ನೀಡಿದ್ದಾರೆ. ಅದೇನಪ್ಪಾ ಅಂದ್ರೆ, ''ಅಂಬಿ ನಿಂಗೆ ವಯಸ್ಸಾಯ್ತೋ' ಬಳಿಕ ಇನ್ಯಾವುದೇ ಸಿನಿಮಾ ಒಪ್ಪಿಕೊಳ್ಳಬಾರದು ಅಂತ ತೀರ್ಮಾನ ಮಾಡಿದ್ದೇನೆ'' ಎಂದಿದ್ದಾರೆ ಅಂಬರೀಶ್. ಬೆಳ್ಳಿತೆರೆ ಮೇಲೆ ರೆಬೆಲ್ ಘರ್ಜನೆ ನೋಡಬೇಕು ಅಂತ ತುದಿಗಾಲಲ್ಲಿ ನಿಂತು ಕಾಯುವ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ ಅಲ್ಲದೇ ಮತ್ತೇನು.?

'ಅಂಬಿ ನಿಂಗ್ ವಯಸ್ಸಾಯ್ತೋ' ಫಸ್ಟ್ ಲುಕ್ ಔಟ್: ವಯಸ್ಸಾದ ಅಂಬಿ ಹೇಗ್ ಕಾಣ್ತಾರೆ?

ಯಾಕೆ ಇಂತಹ ನಿರ್ಧಾರ ಮಾಡಿದ್ರು ಅಂಬರೀಶ್.?

ಯಾಕೆ ಇಂತಹ ನಿರ್ಧಾರ ಮಾಡಿದ್ರು ಅಂಬರೀಶ್.?

ನಿಮಗೆಲ್ಲ ಗೊತ್ತಿರುವ ಹಾಗೆ ಅಂಬರೀಶ್ ಆರೋಗ್ಯದಲ್ಲಿ ಈಗೀಗ ಚೇತರಿಕೆ ಕಂಡುಬಂದಿದೆ. ಆರೋಗ್ಯದ ಕಡೆ ಗಮನ ಕೊಟ್ಟಿರುವ ಅಂಬರೀಶ್ ಗೆ ಸಿನಿಮಾ ಸಾಕು ಅನಿಸಿದ್ಯಾ.? ಗೊತ್ತಿಲ್ಲ. ಆದ್ರೆ, ''ನನಗೂ ವಯಸ್ಸಾಗಿದೆ. ರಾಜಕೀಯ ನಿಲ್ಲಿಸಿದ್ದೇನೆ. ಇನ್ಮೇಲೆ ಮನೆಯಲ್ಲಿ ಆರಾಮಾಗಿ ಇರುತ್ತೇನೆ'' ಅಂತಾರೆ ಅಂಬರೀಶ್.

ಚುನಾವಣೆ ರಾಜಕೀಯಕ್ಕೆ ಗುಡ್ ಬೈ

ಚುನಾವಣೆ ರಾಜಕೀಯಕ್ಕೆ ಗುಡ್ ಬೈ

ಹಾಗ್ನೋಡಿದ್ರೆ, 2018 ರ ವಿಧಾನ ಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ರೆಬೆಲ್ ಸ್ಟಾರ್ ಅಂಬರೀಶ್ ಸ್ಪರ್ಧಿಸಬೇಕಿತ್ತು. ಕಾಂಗ್ರೆಸ್ ಪಕ್ಷ ಕೂಡ ಅಂಬರೀಶ್ ಗೆ ಟಿಕೆಟ್ ನೀಡಿತ್ತು. ಆದ್ರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅಂಬರೀಶ್ ನಿರಾಕರಿಸಿದರು. ಚುನಾವಣೆ ರಾಜಕೀಯದಿಂದ ಹಿಂದೆ ಸರಿದಿರುವ ಅಂಬರೀಶ್ ಇದೀಗ ಚಿತ್ರರಂಗಕ್ಕೂ ಗುಡ್ ಬೈ ಹೇಳುವ ಮನಸ್ಸು ಮಾಡಿದ್ದಾರಾ.?

'ಅಂಬಿ ನಿಂಗ್ ವಯಸ್ಸಾಯ್ತೋ' ಕೊನೆಯ ಚಿತ್ರ.?

'ಅಂಬಿ ನಿಂಗ್ ವಯಸ್ಸಾಯ್ತೋ' ಕೊನೆಯ ಚಿತ್ರ.?

ಒಂದೆಡೆ ಅಭಿಶೇಕ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಬಗ್ಗೆ ರೆಬೆಲ್ ಫ್ಯಾನ್ಸ್ ಖುಷಿ ಆಗಿದ್ದಾರೆ. ಈ ನಡುವೆ ಅದೇ ಸಮಯಕ್ಕೆ ''ನನ್ನ ಸಮಯ ಮುಗಿಯಿತು'' ಎಂದು ಅಂಬರೀಶ್ ಹೇಳಿರುವುದು ಅಭಿಮಾನಿಗಳಿಗೆ ಅಕ್ಷರಶಃ ಬೇಸರ ತಂದಿದೆ. ಅಂಬರೀಶ್ ಆಡಿರುವ ಮಾತುಗಳನ್ನು ಕೇಳಿದ್ರೆ, 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವೇ ಅವರ ಚಿತ್ರಜೀವನದ ಕಟ್ಟ ಕಡೆಯ ಸಿನಿಮಾ ಆಗಬಹುದು.

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಕುರಿತು...

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಕುರಿತು...

ಅಂಬರೀಶ್ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ'. ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್ ಇದಾಗಿದ್ದು, ಅಲ್ಲಿ ರಾಜ್ ಕಿರಣ್ ಮಾಡಿರುವ ಪಾತ್ರಕ್ಕೆ ಇಲ್ಲಿ ಅಂಬರೀಶ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಗುರುದತ್ ಆಕ್ಷನ್ ಕಟ್ ಹೇಳುತ್ತಿದ್ದು, ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ಕೂಡ ಅಭಿನಯಿಸಿದ್ದಾರೆ. ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಇಂದು 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ಬಿಡುಗಡೆ ಆಗಿದೆ.

More from Filmibeat

English summary
Kannada Film Ambi Ning Vayassaytho could be Kannada Actor, Rebel Star, Congress Politician Ambareesh's last film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X