twitter
    For Quick Alerts
    ALLOW NOTIFICATIONS  
    For Daily Alerts

    ಅದ್ಯಾವ ಕೆಟ್ಟ ಘಳಿಗೆಯಲ್ಲಿ 'ಇದೇ ನನ್ನ ಕೊನೆ ಸಿನಿಮಾ' ಅಂತ ಅಂಬಿ ಹೇಳಿದ್ರೋ.!

    |

    ಮಂಡ್ಯದ ಗಂಡು ಅಂಬರೀಶ್ ಅವರಿಗೆ ಅನಾರೋಗ್ಯದ ಸಮಸ್ಯೆ ಇಂದು ನಿನ್ನೆಯದ್ದಲ್ಲ. ನಾಲ್ಕು ವರ್ಷಗಳ ಹಿಂದೆಯೇ ಶ್ವಾಸಕೋಶದ ಸೋಂಕಿನಿಂದ ಬಳಲಿದ್ದ ಅಂಬರೀಶ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

    ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿ, ಅಲ್ಲಿನ ಮೌಂಟ್ ಎಲಿಜಬತ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದರು. ಅಲ್ಲಿ ಫಿಟ್ ಅಂಡ್ ಫೈನ್ ಆಗಿ ತಾಯ್ನಾಡಿಗೆ ಮರಳಿದ ಅಂಬರೀಶ್ ಚಿತ್ರೀಕರಣ ಮತ್ತು ರಾಜಕಾರಣದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.

    ಎಲ್ಲವೂ ಸರಾಗವಾಗಿದೆ ಅಂತಿರೋವಾಗಲೇ, ಈ ವರ್ಷದ ಹುಟ್ಟುಹಬ್ಬದಂದು (ಮೇ 29, 2018) ನಟ ಅಂಬರೀಶ್ ಒಂದು ಶಾಕಿಂಗ್ ಹೇಳಿಕೆ ನೀಡಿದ್ದರು. ''ಅಂಬಿ ನಿಂಗ್ ವಯಸ್ಸಾಯ್ತೋ' ನನ್ನ ಕೊನೆಯ ಸಿನಿಮಾ ಆಗಬಹುದು'' ಎಂದು ಜನ್ಮದಿನದಂದು ಅಂಬರೀಶ್ ಹೇಳಿದ್ದರು.

    ಅದ್ಯಾವ ಕೆಟ್ಟ ಘಳಿಗೆಯಲ್ಲಿ ಅಂಬರೀಶ್ ಈ ಮಾತು ಹೇಳಿದ್ರೋ, ಏನೋ.. ಆ ಮಾತೇ ನಿಜವಾಗಿದೆ.! ಮುಂದೆ ಓದಿರಿ...

    ಹುಟ್ಟುಹಬ್ಬದಂದು ಅಂಬರೀಶ್ ಹೇಳಿದ್ದೇನು.?

    ಹುಟ್ಟುಹಬ್ಬದಂದು ಅಂಬರೀಶ್ ಹೇಳಿದ್ದೇನು.?

    ಜನ್ಮದಿನದ ಸಡಗರದಲ್ಲಿ ಇದ್ದ ಅಂಬರೀಶ್, ''ಅಂಬಿ ನಿಂಗ್ ವಯಸ್ಸಾಯ್ತೋ' ಬಳಿಕ ಇನ್ಯಾವುದೇ ಸಿನಿಮಾ ಒಪ್ಪಿಕೊಳ್ಳಬಾರದು ಅಂತ ತೀರ್ಮಾನ ಮಾಡಿದ್ದೇನೆ'' ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು.

    ಅಂಬರೀಶ್ ಗೆ ವಯಸ್ಸಾಯ್ತು: ಇನ್ಮುಂದೆ ಸಿನಿಮಾ ಮಾಡೋದು ಡೌಟು.?ಅಂಬರೀಶ್ ಗೆ ವಯಸ್ಸಾಯ್ತು: ಇನ್ಮುಂದೆ ಸಿನಿಮಾ ಮಾಡೋದು ಡೌಟು.?

    ಆರಾಮಾಗಿ ಇರುತ್ತೇನೆ ಎಂದಿದ್ದ ಅಂಬಿ.!

    ಆರಾಮಾಗಿ ಇರುತ್ತೇನೆ ಎಂದಿದ್ದ ಅಂಬಿ.!

    ''ನನಗೂ ವಯಸ್ಸಾಗಿದೆ. ರಾಜಕೀಯ ನಿಲ್ಲಿಸಿದ್ದೇನೆ. ಇನ್ಮೇಲೆ ಮನೆಯಲ್ಲಿ ಆರಾಮಾಗಿ ಇರುತ್ತೇನೆ. ಸಿನಿಮಾ ಸಾಕು. ಇದೇ ನನ್ನ ಕೊನೆಯ ಸಿನಿಮಾ ಆಗಬಹುದು. ನನ್ನ ಸಮಯ ಮುಗಿಯಿತು'' ಎಂದು ಅಂಬರೀಶ್ ಹೇಳಿದ್ದರು.

    ಡಾಕ್ಟರ್ ಮಾತು ಕೇಳದೆ ಸಿನಿಮಾ ನೋಡಲು ಬಂದ ಅಂಬರೀಶ್ಡಾಕ್ಟರ್ ಮಾತು ಕೇಳದೆ ಸಿನಿಮಾ ನೋಡಲು ಬಂದ ಅಂಬರೀಶ್

    ಚುನಾವಣೆಯಲ್ಲೂ ಸ್ಪರ್ಧಿಸದ ಅಂಬರೀಶ್

    ಚುನಾವಣೆಯಲ್ಲೂ ಸ್ಪರ್ಧಿಸದ ಅಂಬರೀಶ್

    2018 ರ ವಿಧಾನ ಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ರೆಬೆಲ್ ಸ್ಟಾರ್ ಅಂಬರೀಶ್ ಸ್ಪರ್ಧಿಸಬೇಕಿತ್ತು. ಕಾಂಗ್ರೆಸ್ ಪಕ್ಷ ಕೂಡ ಅಂಬರೀಶ್ ಗೆ ಟಿಕೆಟ್ ನೀಡಿತ್ತು. ಆದ್ರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅಂಬರೀಶ್ ನಿರಾಕರಿಸಿದ್ದರು.

    ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

    ಆಂಬ್ಯುಲೆನ್ಸ್ ನಲ್ಲಿ ಬಂದು ಚಿತ್ರ ನೋಡಿದ್ದ ಅಂಬಿ

    ಆಂಬ್ಯುಲೆನ್ಸ್ ನಲ್ಲಿ ಬಂದು ಚಿತ್ರ ನೋಡಿದ್ದ ಅಂಬಿ

    ಅನಾರೋಗ್ಯ ಕಾಡುತ್ತಿದ್ದ ಕಾರಣ, ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರೂ, ಆಂಬ್ಯುಲೆನ್ಸ್ ನಲ್ಲಿ ಕಲಾವಿದರ ಸಂಘಕ್ಕೆ ಬಂದು 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಅಂಬರೀಶ್ ವೀಕ್ಷಿಸಿದ್ದರು.

    ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?

    ಛೇ.. ವಿಧಿ ಎಷ್ಟು ಕ್ರೂರ.!

    ಛೇ.. ವಿಧಿ ಎಷ್ಟು ಕ್ರೂರ.!

    ಸಿನಿಮಾ ಮತ್ತು ರಾಜಕೀಯ ಜೀವನದಿಂದ ದೂರ ಸರಿದಿದ್ದ ಅಂಬರೀಶ್, ''ನನ್ನ ಸಮಯ ಮುಗಿಯಿತು'' ಅಂತ ಅದ್ಯಾವ ಘಳಿಗೆಯಲ್ಲಿ ಹೇಳಿದ್ರೋ, ಅದೇ ಘಟಿಸಿದೆ. ವಿಧಿಯ ಆಟವೇ ಹೀಗೆ.!

    English summary
    On 29th May 2018, Kannada Actor Ambareesh had said that 'Ambi Ning Vayassaytho' could be my last movie. Unfortunately, 'Ambi Ning Vayassaytho' has been the last movie in Ambareesh's film carrer.
    Sunday, November 25, 2018, 15:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X