'ಅಂಬಿ' ರಿಮೇಕ್ ನಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್.!
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ.
ತಮಿಳಿನ 'ಪವರ್ ಪಾಂಡಿ' ಚಿತ್ರದ ರಿಮೇಕ್ ಇದ್ದಾಗಿದ್ದು, ಕನ್ನಡದ ನೆಟಿವಿಟಿಗೆ ತಕ್ಕಂತೆ ಚಿತ್ರಕಥೆ ಬದಲಿಸಿಕೊಂಡು ಬಹಳ ಚೆನ್ನಾಗಿ ತಯಾರಿಸಲಾಗಿದೆ ಎಂಬ ಮಾತಿದೆ.

ಈಗಾಗಲೇ ಸುದೀಪ್ ಸೇರಿದಂತೆ ಹಲವರು ತಾರೆಯರು 'ಅಂಬಿ' ಸಿನಿಮಾ ನೋಡಿದ್ದು, ಫುಲ್ ಖುಷ್ ಆಗಿದ್ದಾರೆ. ಈ ಮಧ್ಯೆ ಅಂಬಿ ಸಿನಿಮಾ ಹಿಂದಿಗೆ ರಿಮೇಕ್ ಆಗಲಿದೆ ಎಂಬ ಸುದ್ದಿ ಅಭಿಮಾನಿ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇದೆ ಎಷ್ಟು ನಿಜವೋ ಗೊತ್ತಿಲ್ಲ. ಒಂದು ವೇಳೆ 'ಅಂಬಿ' ಸಿನಿಮಾ ಹಿಂದಿಗೆ ರಿಮೇಕ್ ಆದ್ರು ಬಾಲಿವುಡ್ ನಲ್ಲಿ ಯಾರು ಮಾಡಬಹುದು ಎಂಬ ಆಸೆಯನ್ನ ಕೂಡ ಅಭಿಮಾನಿಗಳೇ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಮತ್ತು ಸುದೀಪ್ ಮಾಡಿದ ಪಾತ್ರಗಳಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಕಾಣಿಸಿಕೊಂಡ್ರೆ ಅದ್ಭುತವಾಗಿರುತ್ತೆ ಎಂದು ಕಾಮೆಂಟ್ ಗಳು ಬರ್ತಿದೆ.
ಇನ್ನು ಈ ಚಿತ್ರವನ್ನ ಬಾಲಿವುಡ್ ಖ್ಯಾತ ನಿರ್ದೇಶಕ ಬಾಲ್ಕಿ ಡೈರೆಕ್ಟ್ ಮಾಡಿದ್ರೆ ಸೂಪರ್ ಎನ್ನುತ್ತಿದ್ದಾರೆ. ಕನ್ನಡದಲ್ಲಿ ಈ ಚಿತ್ರವನ್ನ ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದು, ಸುದೀಪ್, ಅಂಬಿ ಜೊತೆ ಶ್ರುತಿ ಹರಿಹರನ್, ಸುಹಾಸಿನಿ, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.


Click it and Unblock the Notifications











