ಅಂಬಿ ಮೇಲೆಯೂ ಬಿತ್ತು ಖದೀಮರ ಕಣ್ಣು : ವಾರ್ನಿಂಗ್ ಕೊಟ್ಟ ಕಿಚ್ಚ!
Recommended Video

ನಟ ಅಂಬರೀಶ್ ಅವರ ಸಿನಿಮಾದ ಮೇಲೆ ಇದೀಗ ಕದೀಮರು ಕಣ್ಣು ಹಾಕಿದ್ದಾರೆ. ಹೌದು, 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡಕ್ಕೆ ಈಗ ಬೇಸರದ ಸಂಗತಿಯೊಂದು ಬಂದಿದೆ. ಅರ್ಥಾತ್ ಈ ಸಿನಿಮಾಗೆ ಈಗ ಪೈರಸಿ ಕಾಟ ಎದುರಾಗಿದೆ.
ಕಳೆದ ಶುಕ್ರವಾರ ಬಿಡುಗಡೆಯಾಗಿರುವ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾಗೆ ಒಂದು ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ, ಇನ್ನೊಂದು ಕಡೆ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ನಲ್ಲಿ ಲೀಕ್ ಆಗಿದೆ. ಒಳ್ಳೆಯ ಸಿನಿಮಾ ಮಾಡಿದ್ದೀವಿ ಎಂಬ ಸಮಾಧಾನದಲ್ಲಿ ಇದ್ದ ಚಿತ್ರತಂಡಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ.
ಸಿನಿಮಾ ಪೈರಸಿ ಆಗುರುವ ಬಗ್ಗೆ ನಟ ಸುದೀಪ್ ಕೂಡ ಕೋಪಗೊಂಡಿದ್ದಾರೆ. ಈ ಘಟನೆಯ ಬಗ್ಗೆ ಕಿಚ್ಚ ಟ್ವೀಟ್ ಮೂಲಕ ವಾರ್ನಿಂಗ್ ನೀಡಿದ್ದಾರೆ. ಮುಂದೆ ಓದಿ..

ಜಸ್ಟ್ ಫಾರ್ ಎಂಟರ್ಟೈನ್ಮೆಂಟ್ ಎಂಬ ಸೈಟ್
'ಅಂಬಿ ನಿಂಗೆ ವಯಸ್ಸಾಯ್ತೋ' ಪೂರ್ಣ ಸಿನಿಮಾ ಈಗ ಆನ್ ಲೈನ್ ನಲ್ಲಿ ಲೀಕ್ ಆಗಿ ಬಿಟ್ಟಿದೆ. ಜಸ್ಟ್ ಫಾರ್ ಎಂಟರ್ಟೈನ್ಮೆಂಟ್ ಎಂಬ ವೆಬ್ ಸೈಟ್ ನಲ್ಲಿ ಸಿನಿಮಾ ಅಪ್ ಲೋಡ್ ಆಗಿದೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕಿದ್ದ ಎಷ್ಟೋ ಜನ ಇಲ್ಲೇ ಬಿಟ್ಟಿಯಾಗಿ ಸಿನಿಮಾ ನೋಡುತ್ತಿದ್ದಾರೆ.

ದೂರು ದಾಖಲಿಸಿದ ನಿರ್ಮಾಪಕರು
ಪದೇ ಪದೇ ಕನ್ನಡದಲ್ಲಿ ಈ ರೀತಿ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಆದ್ದರಿಂದ ಈ ಪ್ರಕರಣವನ್ನು ಚಿತ್ರತಂಡ ಗಂಭೀರವಾಗಿ ಪರಿಗಣಿಸಿದೆ. ಈ ರೀತಿ ಮಾಡಿದವರ ವಿರುದ್ಧ ಈಗಾಗಲೇ ನಟ ಸುದೀಪ್ ಹಾಗೂ ನಿರ್ಮಾಪಕ ಜಾಕ್ ಮಂಜು ದೂರು ದಾಖಲು ಮಾಡಿದ್ದಾರೆ.
ಕಿಚ್ಚನ ವಾರ್ನಿಂಗ್
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಸಿನಿಮಾಗೆ ಪ್ರೋತ್ಸಾಹ ನೀಡಿದವರಿಗೆ ಧನ್ಯವಾದ. ಆದರೆ, ಸಿನಿಮಾ ಲೀಕ್ ಮಾಡಿರುವ ವ್ಯಕ್ತಿ ದೂರದಲ್ಲಿ ಇಲ್ಲ. ನಿನ್ನನ್ನ ಹಿಡಿಯುವುದು ತಿಳಿದಿದೆ. ಇದು ಕೋಪದಿಂದ ಹೇಳುತ್ತಿರುವ ಮಾತಲ್ಲ. ಇದು ಸರಿ - ತಪ್ಪಿನ ಪ್ರಶ್ನೆ. C u soon ಎಂದು ವಾರ್ನಿಂಗ್ ನೀಡಿದ್ದಾರೆ.

ಸ್ಟಾರ್ ಗಳು ಮೆಚ್ಚಿದ ಸಿನಿಮಾ
ಈಗಾಗಲೇ ಸಿನಿಮಾವನ್ನು ಅನೇಕ ಸ್ಟಾರ್ ಗಳು ನೋಡಿ ಇಷ್ಟ ಪಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ನಿಖಿಲ್ ಕುಮಾರ್ ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದಾರೆ. ರಜನಿಕಾಂತ್, ಮೋಹನ್ ಬಾಬು, ಶತ್ರುಘ್ನ ಸಿನ್ಹಾ ಚಿತ್ರವನ್ನ ನೋಡಲಿದ್ದಾರೆ.

ಸಿನಿಮಾದ ವಿಮರ್ಶೆ
'ಅಂಬಿ ನಿಂಗೆ ವಯಸ್ಸಾಯ್ತೋ' ಒಂದು feel good ಸಿನಿಮಾ. ವಯಸ್ಸಾದ ಅಪ್ಪ ಅಂದ್ರೆ, ನಮ್ಮ ಮಕ್ಕಳನ್ನು ನೋಡಿಕೊಳ್ಳುವುದು, ನಾವು ಇಲ್ಲದಿದ್ದಾಗ ಮನೆ ಕಾಯುವುದು, ನಾವು ಹಾಕಿದ ಚಾನೆಲ್ ನೋಡುವುದು ಇಷ್ಟೇ ಅಂತ ನೀವೆನಾದರೂ ಅಂದುಕೊಂಡಿದ್ದರೆ ಒಮ್ಮೆ 'ಅಂಬಿ ನಿಂಗೆ ವಾಯಸ್ಸಾಯ್ತೋ' ಸಿನಿಮಾ ನೋಡಿ. ಈ ರೀತಿಯ ನಿಮ್ಮ ಭಾವನೆ ಬದಲಾಗಬಹುದು.


Click it and Unblock the Notifications











