ಅಂಬಿ ಅಭಿಮಾನಿಗಳಿಗೆ ಈ ತಿಂಗಳು ಕಾದಿದೆ ಎರಡು ಅಚ್ಚರಿ

Recommended Video

ಸದ್ಯದಲ್ಲೇ ನಟ ಅಂಬರೀಷ್ ಫ್ಯಾನ್ಸ್ ಗೆ ಕಾದಿದೆ ಎರಡು ಅಚ್ಚರಿ | Oneindia Kannada

ಈ ವರ್ಷದಲ್ಲಿ ಇನ್ನು ಮೂರುವರೆ ತಿಂಗಳು ಮಾತ್ರ ಉಳಿದಿದೆ. ಇದರೊಳಗೆ ಕನ್ನಡದ ಯಾವ ಸಿನಿಮಾ ತೆರೆಗೆ ಬರುತ್ತದೆ, ಯಾವ ಸಿನಿಮಾ ಬರುವುದಿಲ್ಲ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಈಗಾಗಲೇ 'ದಿ ವಿಲನ್' ಚಿತ್ರದ ಬಿಡುಗಡೆಯ ದಿನಾಂಕವನ್ನು ಅನೌನ್ಸ್ ಮಾಡಿದೆ. 'ಕೆ ಜಿ ಎಫ್' ಚಿತ್ರದ ರಿಲೀಸ್ ಡೇಟ್ ಕೂಡ ಬರುವ ಸೋಮವಾರ ಬಹಿರಂಗ ಆಗಲಿದೆ. 'ಕೆ ಜಿ ಎಫ್' ಹಾಗೂ 'ದಿ ವಿಲನ್' ಸಿನಿಮಾಗಳ ನಂತರ ಈಗ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ.

ಈಗಾಗಲೇ, ಸಾಕಷ್ಟು ದಿನದಿಂದ ಕಾಯುತ್ತಿದ್ದ ಅಂಬರೀಶ್ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ವಿಶೇಷ ಅಂದರೆ, ಇದೇ ತಿಂಗಳಿನಲ್ಲಿ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಆಡಿಯೋ ಹಾಗೂ ಸಿನಿಮಾ ಬಿಡುಗಡೆಯಾಗಲಿದೆ. ಮುಂದೆ ಓದಿ...

ಭಾನುವಾರ ಆಡಿಯೋ ಲಾಂಚ್

ಭಾನುವಾರ ಆಡಿಯೋ ಲಾಂಚ್

'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಸಪ್ಟೆಂಬರ್ 16 ಅಂದರೆ ಇದೇ ಭಾನುವಾರ ನಡೆಯಲಿದೆ. ಕನ್ನಡ ಚಿತ್ರರಂಗದ ಬಹುಪಾಲು ಸ್ಟಾರ್ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ, ಸಿನಿಮಾದ ಒಂದು ಹಾಡು ಯೂ ಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ದೊಡ್ಡ ಹಿಟ್ ಆಗಿದೆ.

ಸಪ್ಟೆಂಬರ್ 28ಕ್ಕೆ ಸಿನಿಮಾ ಬರ್ತಿದೆ

ಸಪ್ಟೆಂಬರ್ 28ಕ್ಕೆ ಸಿನಿಮಾ ಬರ್ತಿದೆ

ಇನ್ನು ಆಡಿಯೋ ಬಿಡುಗಡೆಯ ಜೊತೆಗೆ ಸಿನಿಮಾದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. 'ಅಂಬಿ ನಿಂಗೆ ವಯಸ್ಸಾಯ್ತೋ' ಸಪ್ಟೆಂಬರ್ 28ಕ್ಕೆ ಬಿಡುಗಡೆಯಾಗುತ್ತಿದೆ. ಇಷ್ಟು ದಿನಗಳಿಂದ ಕಾಯುತ್ತಿರುವ ಅಂಬಿ ಅಭಿಮಾನಿಗಳ ಮನ ಆ ದಿನ ತಣಿಯಲಿದೆ. ಬಹಳ ವರ್ಷಗಳ ನಂತರ ಅಂಬರೀಶ್ ಮತ್ತೆ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.

ಹಿಟ್ ಆಯ್ತು ಜಲೀಲಾ ಹಾಡು

ಹಿಟ್ ಆಯ್ತು ಜಲೀಲಾ ಹಾಡು

ಸಿನಿಮಾದ ಮೊದಲ ಹಾಡು ಆಗಸ್ಟ್ 31ರಂದು ಬಿಡುಗಡೆಯಾಗಿತ್ತು. ವಿಜಯ ಪ್ರಕಾಶ್ ಧ್ವನಿಯಲ್ಲಿ ಬಂದ 'ಹೇ ಜಲೀಲಾ..' ಹಾಡು ಹಿಟ್ ಆಗಿದೆ. ಪ್ರೇಮ್ ಈ ಹಾಡನ್ನು ಬರೆದಿದ್ದಾರೆ. ಯೂ ಟ್ಯೂಬ್ ನಲ್ಲಿ ಆರು ಲಕ್ಷಕ್ಕೂ ಹೆಚ್ಚು ಹಿಟ್ಸ್ ಅನ್ನು ಈ ಹಾಡು ಪಡೆದುಕೊಂಡಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಎಲ್ಲ ಶೈಲಿಯ ಹಾಡುಗಳಿವೆ

ಎಲ್ಲ ಶೈಲಿಯ ಹಾಡುಗಳಿವೆ

ಚಿತ್ರದ ಹಾಡುಗಳ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿರುವ ನಿರ್ದೇಶಕ ಗುರುದತ್ ಗಾಣಿಗ ''ಸಿನಿಮಾದ ಹಾಡುಗಳು ತುಂಬ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಮೆಲೋಡಿ ಹಾಡುಗಳನ್ನು ಅರ್ಜುನ್ ಜನ್ಯ ನೀಡಿದ್ದಾರೆ. ಈ ಚಿತ್ರ ತಮಿಳಿನ ರಿಮೇಕ್ ಆಗಿದ್ದರೂ, ಅಲ್ಲಿನ ಯಾವ ಟ್ಯೂನ್ ಅನ್ನು ಬಳಸಿಲ್ಲ. ಮಾಸ್, ಕ್ಲಾಸ್, ಮೆಲೋಡಿ ಹೀಗೆ ಎಲ್ಲ ಶೈಲಿಯ ಹಾಡುಗಳು ಸಿನಿಮಾ ಆಲ್ಬಂ ನಲ್ಲಿ ಇವೆ''. ಎಂದು ಹೇಳಿದ್ದಾರೆ.

ಅಂಬಿ, ಸುದೀಪ್ ನಟನೆ

ಅಂಬಿ, ಸುದೀಪ್ ನಟನೆ

ಸಿನಿಮಾದಲ್ಲಿ ಅಂಬರೀಶ್ ಜೊತೆಗೆ ಸುದೀಪ್ ಸಹ ನಟಿಸಿದ್ದಾರೆ. ಈ ಚಿತ್ರದ ಚಿತ್ರಕಥೆಯನ್ನು ಸಹ ಸುದೀಪ್ ಅವರೇ ಬರೆದಿದ್ದಾರೆ. ಸುಹಾಸಿನಿ ಹಾಗೂ ಶೃತಿ ಹರಿಹರನ್ ಚಿತ್ರದಲ್ಲಿ ನಟಿಸಿದ್ದಾರೆ. ಜಾಕ್ ಮಂಜು 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

More from Filmibeat

English summary
Kannada actor Ambareesh's 'Ambi Ninge Vaiyasayitho' movie audio release on september 16th and movie will be releasing on september 28th. The movie is a remake of tamil movie 'Power Pandi'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X