ಬಂದೇ ಬಿಟ್ಟಿತು ಅಂಬಿಯ ಐದೂ ಹಾಡುಗಳು
Recommended Video

ನಟ ಅಂಬರೀಶ್ ಅವರ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಹಾಡುಗಳಿಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಸಿನಿಮಾದ ಆಡಿಯೋ ರಿಲೀಸ್ ಆಗಿದೆ.
ದೊಡ್ಡ ಕಾರ್ಯಕ್ರಮ ಮಾಡಿ ಚಿತ್ರದ ಆಡಿಯೋ ಲಾಂಚ್ ಅನ್ನು ಮಾಡಬೇಕು ಎಂಬುದು ಚಿತ್ರತಂಡದ ಪ್ಲಾನ್ ಆಗಿತ್ತು. ಅದೇ ರೀತಿ ನಿನ್ನೆ ಆಡಿಯೋ ಬಿಡುಗಡೆಗೆ ಡೇಟ್ ಕೂಡ ಫಿಕ್ಸ್ ಆಗಿತ್ತು. ಆದರೆ, ನಟ ಅಂಬರೀಶ್ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಯಾವುದೇ ಕಾರ್ಯಕ್ರಮ ಇಲ್ಲದೆ, ಹಾಡುಗಳನ್ನು ಯೂ ಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ.
ಅಂದಹಾಗೆ, 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದಲ್ಲಿ ಐದು ಹಾಡುಗಳಿವೆ. ಇವುಗಳ ಪೈಕಿ ಮೂರು ಹಾಡುಗಳನ್ನು ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಉಳಿದ ಎರಡು ಹಾಡುಗಳಲ್ಲಿ ಒಂದು ಹಾಡನ್ನು ಪ್ರೇಮ್ ಹಾಗೂ ಇನ್ನೊಂದು ಹಾಡನ್ನು ಕವಿರಾಜ್ ಬರೆದಿದ್ದಾರೆ.

ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಎರಡು ಹಾಡುಗಳನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಈಗಾಗಲೇ ಯೂ ಟ್ಯೂಬ್ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಿಟ್ಸ್ ಅನ್ನು ಹಾಡು ಪಡೆದುಕೊಂಡಿದೆ.
ಜಾಯ್ ಮಂಜು ಚಿತ್ರದ ನಿರ್ಮಾಣ ಮಾಡಿದ್ದಾರೆ. ಗುರುದತ್ತ ಗಾಣಿಗ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಂಬರೀಶ್, ಸುಹಾಸಿನಿ, ಸುದೀಪ್, ಶೃತಿ ಹರಿಹರನ್ ತಾರಬಳಗದಲ್ಲಿ ಇದ್ದಾರೆ. ಅಂದಹಾಗೆ, ಸಿನಿಮಾ ಇದೇ ತಿಂಗಳು 28ಕ್ಕೆ ಬಿಡುಗಡೆಯಾಗುತ್ತಿದೆ.


Click it and Unblock the Notifications











