ಸಿಂಪಲ್ ಸುದೀಪ ಈ ರೀತಿಯ ಬಟ್ಟೆ ತೊಟ್ಟು 11 ವರ್ಷ ಆಗಿತ್ತು

By Naveen

Recommended Video

ಸಿಂಪಲ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ ಸುದೀಪ್ | Filmibeat Kannada

ಸುದೀಪ್ ಅಂತ ಹೇಳುತ್ತಿದ್ದ ಹಾಗೆ ಸ್ಟೈಲಿಶ್ ಲುಕ್ ಕಣ್ಣು ಮುಂದೆ ಬರುತ್ತದೆ. ಆದರೆ ಸುದೀಪ್ ಮತ್ತೆ ಈಗ ಸಿಕ್ಕಾಪಟ್ಟೆ ಸಿಂಪಲ್ ಆಗಿದ್ದಾರೆ. ಅದು 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾಗಾಗಿ. ಹೌದು, ಈ ಸಿನಿಮಾದಲ್ಲಿ ನಟ ಅಂಬರೀಶ್ ನಾಯಕನಾಗಿದ್ದು, ಅಂಬಿ ಅವರ ಸಣ್ಣ ವಯಸ್ಸಿನ ಪಾತ್ರವನ್ನು ಸುದೀಪ್ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಅವರ ಲುಕ್ ಒಬ್ಬ ಸಾಮಾನ್ಯ ಹುಡುಗನ ರೀತಿ ಇರಲಿದೆ.

ಅಂದಹಾಗೆ, 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಚಿತ್ರೀಕರಣ ವೇಳೆ ತೆಗೆದ ಕೆಲ ಫೋಟೋಗಳು ಇದೀಗ ಹೊರಬಂದಿದೆ. ಇಲ್ಲಿ ಸರಳವಾದ ಒಂದು ಅಂಗಿ ಮತ್ತು ಪ್ಯಾಂಟ್ ಅನ್ನು ಕಿಚ್ಚ ಉಟ್ಟಿದ್ದಾರೆ. ಸುದೀಪ್ ಲುಕ್ ಪಾತ್ರಕ್ಕೆ ತಕ್ಕಂತೆ ತುಂಬ ಸಿಂಪಲ್ ಆಗಿದೆ. ವಿಶೇಷ ಅಂದರೆ ಸುದೀಪ್ ಈ ರೀತಿ ಕಾಣಿಸಿಕೊಂಡು ತುಂಬ ವರ್ಷಗಳೆ ಆಗಿತ್ತು. ಕಿಚ್ಚ ಕೊನೆಯದಾಗಿ ಈ ರೀತಿ ಕಾಣಿಸಿಕೊಂಡಿದ್ದು 'ನಂ 73 ಶಾಂತಿನಿವಾಸ' ಸಿನಿಮಾದಲ್ಲಿ.

Ambi Ninge Vaiyasayitho movie making stilts out

'ನಂ 73 ಶಾಂತಿನಿವಾಸ' ಚಿತ್ರದ ಬಳಿಕ ಬಂದ ಎಲ್ಲ ಸಿನಿಮಾದಲ್ಲಿ ಸುದೀಪ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. 'ಮಾಣಿಕ್ಯ', 'ರನ್ನ', 'ಹೆಬ್ಬುಲಿ' ಸಿನಿಮಾಗಳಲ್ಲಿ ಅಂತು ಕಿಚ್ಚ ಕಣ್ಣುಕುಕ್ಕುವ ಹಾಗೆ ಬಟ್ಟೆ ತೊಟ್ಟಿದ್ದರು. ಆದರೆ 11 ವರ್ಷದ ನಂತರ ಮತ್ತೆ ಸುದೀಪ್ ಈಗ ಸಿಂಪಲ್ ಆಗಿದ್ದಾರೆ.

Ambi Ninge Vaiyasayitho movie making stilts out

ಅಂದಹಾಗೆ, 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ಸದ್ಯ ನಡೆಯುತ್ತಿದೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ತಯಾರಾಗುತ್ತಿದ್ದು, ಜ್ಯಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕೆ ಇರಲಿದೆ. ತಮಿಳಿನ 'ಪವರ್ ಪಾಂಡಿ' ಚಿತ್ರದ ರಿಮೇಕ್ ಇದಾಗಿದ್ದು, ಗುರುದತ್ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Kannada actors Sudeep and Ambareesh combination 'Ambi Ninge Vaiyasayitho' kannada movie making stilts out. The movie is a remake of tamil movie 'Power Pandi'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X