ಚಿತ್ರೀಕರಣ ಮುಗಿಸಿದ 'ಅಂಬಿ ನಿಂಗ್ ವಯಸ್ಸಾಯ್ತೋ' ತಂಡ
Recommended Video

'ಅಂಬಿ ನಿಂಗ್ ವಯಸ್ಸಾಯ್ತೋ' ಕಿಚ್ಚ ಸುದೀಪ್ ಹಾಗೂ ಅಂಬರೀಶ್ ಅಭಿನಯದ ಸಿನಿಮಾ. 'ವೀರಪರಂಪರೆ' ಚಿತ್ರದ ನಂತರ ಸುದೀಪ್ ಹಾಗೂ ಅಂಬರೀಶ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವ ಸಮಯ ತುಂಬಾ ಹತ್ತಿರದಲ್ಲೇ ಇದೇ. ಕಾರಣ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಶೂಟಿಂಗ್ ಮುಗಿದಿದೆ.
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಚಿತ್ರೀಕರಣ ಮುಗಿದಿದೆ ಎನ್ನುವ ವಿಚಾರವನ್ನು ಕಿಚ್ಚ ಸುದೀಪ್ ಅವರೇ ತಿಳಿಸಿದ್ದು ಅದರ ಅನುಭವದ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಯಂಗ್ ಅಂಬಿ ಆಗಿ ನಟಿಸಿದ್ದು ಒಳ್ಳೆಯ ಅನುಭವ. ಅವರನ್ನು ಅನುಕರಿಸುವುದು ದೊಡ್ಡ ಚಾಲೆಂಜ್ ಆಗಿತ್ತು. ಆದ್ದರಿಂದ ನನ್ನದೇ ಸ್ಟೈಲ್ ನಲ್ಲಿಯೇ ಅವರನ್ನು ಅನುಕರಣೆ ಮಾಡಿದ್ದೇನೆ.

ಅನಂತರ ತಿಳಿಯಿತು ಅಂಬಿ ಆಗಿರುವುದು ಎಷ್ಟು ಕಷ್ಟ ಎನ್ನುವುದು. ನಿರ್ದೇಶಕ ಗುರುದತ್ತ್ ಗಾಣಿಗ, ಸಂಚಿತ್ ಸಂಜೀವ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ಜಾಕ್ ಮಂಜು ಎಲ್ಲರಿಗೂ ಧನ್ಯವಾದಗಳು ಹಾಗೆಯೇ ಆಲ್ ದ ಬೆಸ್ಟ್" ಎಂದಿದ್ದಾರೆ.
ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಲಿದೆ. ಚಿತ್ರವನ್ನ ಯುವ ನಿರ್ದೇಶಕ ಗುರುದತ್ತ್ ಗಾಣಿಗ ಡೈರೆಕ್ಟ್ ಮಾಡಿದ್ದು ಅರ್ಜುನ್ ಜನ್ಯ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಜಾಕ್ ಮಂಜು ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಟೀಸರ್ ಹಾಗೂ ಮೇಕಿಂಗ್ ನಿಂದ ಗಮನ ಸೆಳೆದಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ.


Click it and Unblock the Notifications











