»   » ಟೀವಿಯಲ್ಲೇ ಒಂದು ಕೈ ನೋಡುವ ಎಂದ ಅಂಬಿಕಾ

ಟೀವಿಯಲ್ಲೇ ಒಂದು ಕೈ ನೋಡುವ ಎಂದ ಅಂಬಿಕಾ

Posted By: Super
Subscribe to Filmibeat Kannada

ಅಂಬಿಕಾ ಅವರ ಮೂರನೇ ಇನಿಂಗ್ಸ್‌ ಆರಂಭವಾಗಿದೆ.

ಸುಮಲತಾ ಅವರನ್ನು ಅಂಬರೀಷ್‌ ವಿಧ್ಯುಕ್ತವಾಗಿ ಮದುವೆಯಾಗುವ ಮೂಲಕ ನಿರಾಶೆಗೊಂಡಿದ್ದ ಅಂಬಿಕಾ, ಅಂಬರೀಷ್‌ ದಪ್ಪಗಾಗಿ ರಾಜಕಾರಣದಲ್ಲಿ ಆಸಕ್ತಿ ತಳೆದ ನಂತರ ಹೆಚ್ಚೂಕಮ್ಮಿ ಚಿತ್ರರಂಗದಿಂದ ದೂರಸರಿದರು. ಮದುವೆಯಾದ ಮೇಲೆ ಎಲ್ಲ ನಟಿಮಣಿಯರದೂ ಇದೇ ಪಾಡು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಹಾರಿ ಬಂದ ಅಂಬಿಕಾ ಸಿಂಹದಮರಿಯಲ್ಲಿ ಶಿವಣ್ಣನಿಗೆ ಅಮ್ಮನಾಗುವ ಮೂಲಕ ಎರಡನೇ ಇನಿಂಗ್ಸ್‌ ಆರಂಭಿಸಿದ್ದರು. ಚಳಿ ಚಳಿ ಹಾಡುನ ಅಂಬಿಕಾಳನ್ನು ಕಣ್ಣು ತುಂಬಿಸಿಕೊಂಡಿದ್ದ ಪ್ರೇಕ್ಷಕರಿಗೆ ಮಾಸಿದ ಕಣ್ಣಿನ ಅಂಬಿಕಾ ಇಷ್ಟವಾಗಲಿಲ್ಲ . ಅಲ್ಲಿಗೆ ಚಳಿ ಚಳಿ ತಾರೆಯ ಎರಡನೇ ಇನಿಂಗ್ಸ್‌ ಮುಕ್ತಾಯವಾಯಿತು.


ಈ ಶತಮಾನದ ಮಾದರಿ ಹೆಣ್ಣಿನಂತೆ ಪಟ್ಟು ಬಿಡದ ಹಾಗೂ ಬಣ್ಣದ ಮೋಹ ತೊರೆಯಲಾರದ ಅಂಬಿಕಾ ಕಿರುತೆರೆಯಾದರೂ ಪರವಾಗಿಲ್ಲ ಎಂದು ಮೂರನೇ ಇನಿಂಗ್ಸ್‌ ಆರಂಭಿಸಿದ್ದಾರೆ. ಟೀವಿ ಮಟ್ಟಿಗೆ ಇದು ಅಂಬಿಕಾ ಅವರ ಮೊದಲ ಅನುಭವ. ಅಂಬಿಕಾ ಅಭಿನಯದ ಬಣ್ಣ ಧಾರಾವಾಹಿ ಈಗಾಗಲೇ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವೂ ಆಗುತ್ತಿದೆ.

ಎಚ್‌.ಪಿ.ರವೀಂದ್ರ ಬಣ್ಣ ದ ನಿರ್ದೇಶಕರು. ಅಶೋಕ್‌ರಾವ್‌, ನಾಗೇಶ್‌ಮಯ್ಯ, ವೈಜಯಂತಿ ಕಾಶಿ, ಉಷಾ ಮುಂತಾದವರು ಬಣ್ಣದ ಭೂಮಿಕೆಯಲ್ಲಿದ್ದಾರೆ.

English summary
Anant Nag is back where he belongs

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada