twitter
    For Quick Alerts
    ALLOW NOTIFICATIONS  
    For Daily Alerts

    25 ವರ್ಷದ ಸಂಭ್ರಮ: '90ರ ದಶಕದ ದುಬಾರಿ ಕನಸು ಅಮೆರಿಕಾ ಅಮೆರಿಕಾ'

    |

    ''ಆಕಾಶಕ್ಕೆ ಏಣಿ ಹಾಕುವುದು, ಹಾಸಿಗೆ ಆಚೆ ಕಾಲು ಚಾಚುವುದು ನನಗೆ ಯಾವಾಗಲೂ ಇಷ್ಟ. ಕನಸುಗಳನ್ನು ಕಾಣಬೇಕು, ಆದರೆ ಆ ಕನಸು ದುಬಾರಿಯಾಗಿರಬೇಕು. ಅದು ಈಡೇರದಿದ್ದರೂ ಕನಸಿನಲ್ಲದಾರೂ ನಿಜ ಆಗಿರುತ್ತದೆ. ಹೀಗೆ ನಾನು 90ರ ದಶಕದಲ್ಲಿ ಕಂಡ ದುಬಾರಿ ಕನಸು ಅಮೆರಿಕಾ ಅಮೆರಿಕಾ ಚಿತ್ರ'' ಎಂದು ನಾಗತಿಹಳ್ಳಿ ಚಂದ್ರಶೇಖರ್ ಈ ಹಿಂದೆಯೊಮ್ಮೆ ಹೇಳಿದ್ದ ನೆನಪಾಯಿತು.

    'ಅಮೆರಿಕಾ ಅಮೆರಿಕಾ' ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್, ಹೇಮಾ ಪಂಚಮುಖಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆಗಿನ ಸಮಯದಲ್ಲೇ ಅಮೆರಿಕಾಗೆ ಹೋಗಿ ಶೂಟಿಂಗ್ ಮಾಡಿದ ಹೆಗ್ಗಳಿಕೆ ಈ ಚಿತ್ರದ್ದು.

    25 ವರ್ಷದ ಮಧುರ ನೆನಪು

    25 ವರ್ಷದ ಮಧುರ ನೆನಪು

    ಅಮೆರಿಕಾ ಅಮೆರಿಕಾ ಸಿನಿಮಾ 25 ವರ್ಷ ಪೂರೈಸಿದ ಹಿನ್ನೆಲೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿಶೇಷವಾದ ವಿಡಿಯೋ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ''1996 ಜೂನ್ 16 ರಂದು ಚಿತ್ರದ ಮುಹೂರ್ತ ನಡೆದಿತ್ತು. ಚಿತ್ರತಂಡ, ಅಮೆರಿಕನ್ನಡಿಗರು, ಉದ್ಯಮ ಮತ್ತು ಎಲ್ಲ ಪ್ರೇಕ್ಷಕರಿಗೆ ಕಾಲು ಶತಮಾನದಾದ್ಯಂತ ಕೃತಜ್ಞತೆಗಳು'' ಎಂದು ತಿಳಿಸಿದರು.

    'ಅಮೆರಿಕಾ ಅಮೆರಿಕಾ' ನಟಿ ಕಂಬ್ಯಾಕ್ ಆದ್ರೆ ಈ ಹೀರೋ ಜೊತೆ ನಟಿಸುವ ಆಸೆಯಂತೆ'ಅಮೆರಿಕಾ ಅಮೆರಿಕಾ' ನಟಿ ಕಂಬ್ಯಾಕ್ ಆದ್ರೆ ಈ ಹೀರೋ ಜೊತೆ ನಟಿಸುವ ಆಸೆಯಂತೆ

    75 ಲಕ್ಷದಲ್ಲಿ ತಯಾರಾಗಿದ್ದ ಚಿತ್ರ

    75 ಲಕ್ಷದಲ್ಲಿ ತಯಾರಾಗಿದ್ದ ಚಿತ್ರ

    ಅಮೆರಿಕಾಗೆ ಹೋಗಿ ಸಿನಿಮಾ ಚಿತ್ರೀಕರಣ ಮಾಡಿ ಬಂದಿದ್ದರೂ ಈ ಚಿತ್ರದ ಬಜೆಟ್ ಆಗಿನ ಸಮಯಕ್ಕೆ ಸುಮಾರು 70 ರಿಂದ 75 ಲಕ್ಷ. ಈ ಚಿತ್ರ 5 ಕೋಟಿವರೆಗೂ ಬಿಸಿನೆಸ್ ಮಾಡಿದೆ ಎಂದು ವರದಿಗಳು ಹೇಳಿವೆ. ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಅಮೆರಿಕಾದಲ್ಲಿ ರಿಲೀಸ್ ಆದ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆಯೂ ಈ ಚಿತ್ರದ ಹೆಸರಿನಲ್ಲಿದೆ.

    ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ

    ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ

    'ಅಮೆರಿಕಾ ಅಮೆರಿಕಾ' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಕನ್ನಡ ಸಿನಿಮಾ ಎಂದು ನ್ಯಾಷನಲ್ ಅವಾರ್ಡ್ ಮತ್ತು ಅತ್ಯುತ್ತಮ ನಟ, ಅತ್ಯುತ್ತಮ ಕಥೆ, ಅತ್ಯುತ್ತಮ ಸಿನಿಮಾ ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ.

    Recommended Video

    ಬ್ರಾಹ್ಮಣರನ್ನು ಅಪಮಾನಿಸಿದ್ದಕ್ಕೆ ಚೇತನ್ ವಿರುದ್ಧ FIR ದಾಖಲಿಸಿದ ಪೊಲೀಸ್ | Filmibeat Kannada
    ಸುದೀಪ್‌ಗೆ ಅವಕಾಶ ಕೈ ತಪ್ಪಿತ್ತು

    ಸುದೀಪ್‌ಗೆ ಅವಕಾಶ ಕೈ ತಪ್ಪಿತ್ತು

    ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ನಟಿಸಬೇಕಿತ್ತು. ಆಗಿನ್ನು ಉದಯೋನ್ಮುಖ ನಟ. ಒಂದು ಸಿನಿಮಾ ಮಾಡಿ ರಿಲೀಸ್ ಆಗಿರಲಿಲ್ಲ. ಪಾತ್ರಕ್ಕಾಗಿ ಕಾಯ್ತಿದ್ದರು. ರಮೇಶ್ ಅರವಿಂದ್ ಜೊತೆ ಅಕ್ಷಯ್ ಮಾಡಿದ್ದ ಪಾತ್ರಕ್ಕೆ ಸುದೀಪ್ ಇರಲಿ ಎಂದು ನಾಗತಿಹಳ್ಳಿ ಚಂದ್ರಶೇಖರ್ ನಿರ್ಧರಿಸಿದ್ದರು. ಆದರೆ, ಕಾರಣಾಂತರಗಳಿಂದ ಸುದೀಪ್ ಬೇಡ ಎಂದು ಕೈಬಿಡಬೇಕಾಯಿತು.

    English summary
    Nagathihalli chandrashekhar directional America America Movie Completes 25 Years; Interesting Facts.
    Wednesday, June 16, 2021, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X