For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2 ನೋಡಲು ಕಾಯುತ್ತಿದ್ದೇನೆ': ಯುಎಸ್ ಕುಸ್ತಿಪಟು ಟ್ವೀಟ್

  |

  ಕೆಜಿಎಫ್ ಸಿನಿಮಾದ ಹವಾ ಬರಿ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಜೋರಾಗಿದೆ ಎನ್ನುವುದು ತಿಳಿದಿದೆ. ಸರ್ಪ್ರೈಸ್ ಅಂದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಜಿಎಫ್ ಕ್ರೇಜ್ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಈಗೊಂದು ಉದಾಹರಣೆ ಸಿಕ್ಕಿದೆ.

  ಅಮೆರಿಕ ಮೂಲದ ವೃತ್ತಿಪರ ಕುಸ್ತಿಪಟು ವಿಲ್ಲೀ ಮ್ಯಾಕ್ ಅವರು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಕಾಯುತ್ತಿರುವುದಾಗಿ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

  Big News: ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್

  ಕೆಜಿಎಫ್ ಚಾಪ್ಟರ್ 2 ಟ್ರೈಲರ್ ನೋಡಿರುವ ವಿಲ್ಲೀ ಮ್ಯಾಕ್ ಸಿನಿಮಾಗೆ ಫಿದಾ ಆಗ್ಬಿಟ್ಟಿದ್ದಾರೆ. ಚಿತ್ರವನ್ನು ಬೇಗ ನೋಡಬೇಕು ಎಂದು ತುದಿಗಾಲಲ್ಲಿ ಕಾಯುತ್ತಿದ್ದೇನೆ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

  ಅಂದ್ಹಾಗೆ, ಪ್ರಶಾಂತ್ ನೀಲ್ ಈ ಚಿತ್ರ ನಿರ್ದೇಸಿದ್ದು, ಜುಲೈ 16 ರಂದು ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ರವೀನಾ ಟಂಡನ್ ಸೇರಿದಂತೆ ಹಲವರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಈ ಚಿತ್ರ ನಿರ್ಮಿಸಿದೆ.

  ಕೆಜಿಎಫ್ ಟ್ರೈಲರ್‌ಗೆ ಭಾರಿ ರೆಸ್‌ಪಾನ್ಸ್ ಸಿಕ್ಕಿದ್ದು, ಇದುವರೆಗೂ ಯೂಟ್ಯೂಬ್‌ನಲ್ಲಿ 169 ಮಿಲಿಯನ್ (169,710,216) ವೀಕ್ಷಣೆ ಕಂಡಿದೆ. 7.9 ಮಿಲಿಯನ್ ಲೈಕ್ಸ್ ಹಾಗೂ 6.9 ಲಕ್ಷ ಕಾಮೆಂಟ್ ಬಂದಿದೆ.

  English summary
  Professional American wrestler Willie Mack Says he can't wait for the Release of Yash's KGF 2 Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X