"ಯಾವಾಗಲೂ ನೀವೆ ನನ್ನ ಹೀರೊ ಅಪ್ಪ"; ವಿನೀಶ್ ದರ್ಶನ್ ಪೋಸ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. 13 ಜನ ಆರೋಪಿಗಳನ್ನು ಮತ್ತೆ 5 ದಿನ ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಆಳ ಅಗಲ ಹುಡುಕುತ್ತಿದ್ದಾರೆ. ಇವತ್ತು(ಜೂನ್ 16) ವಿಶ್ವ ತಂದೆಯಂದಿರ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದರ್ಶನ್ ಪುತ್ರ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ತಂದೆಯಂದಿರ ದಿನದ ಶುಭ ಕೋರಿದ್ದಾನೆ.

ದರ್ಶನ್‌ಗೆ ಒಬ್ಬನೇ ಮಗ ವಿನೀಶ್. ಈಗಾಗಲೇ ಆತನು ತಂದೆಯ ಸಿನಿಮಾಗಳಲ್ಲಿ ಸಣ್ಣ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಪ್ರತಿ ಮಗುವಿಗೂ ತಂದೆಯೇ ಮೊದಲ ಹೀರೊ. ಈ ದಿನ ತಂದೆ ಮಕ್ಕಳಿಗೆ ಬಹಳ ವಿಶೇಷ. ಒಬ್ಬೊಬ್ಬರು ಒಂದೊಂದು ರೀತಿ ತಂದೆಗೆ ಶುಭಾಶಯ ಕೋರುತ್ತಾರೆ. ವಿಪರ್ಯಾಸ ಏನು ಅಂದ್ರೆ, ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ತಂದೆಗೆ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರುವಂತಾಗಿದೆ.

Amid Darshan arrest son vinish write special message for his Dad on Father s Day

"ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ತಿದ್ದೀನಿ. ಐ ಲವ್ ಯು. ಯಾವಾಗಲೂ ನೀವೇ ನನ್ನ ಹೀರೊ" ಎಂದು ವಿನೀಶ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ತಂದೆ ಜೊತೆಗಿನ ಒಂದಷ್ಟು ಫೋಟೊಗಳನ್ನು ಕೊಲಾಜ್ ಮಾಡಿ ಹಾಕಿಕೊಂಡಿದ್ದಾರೆ. 15 ವರ್ಷ ವಯಸ್ಸಿನ ವಿನೀಶ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ.

ತಂದೆ ಪೊಲೀಸ್ ಕಸ್ಟಡಿಯಲ್ಲಿ ಇರುವ ವೇಳೆ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ಇತ್ತೀಚೆಗೆ ವಿನೀಶ್ ಪ್ರತಿಕ್ರಿಯಿಸಿದ್ದ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ. "ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಹಾಗೂ ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದ. ನನಗೆ 15 ವರ್ಷ, ನನಗೂ ಮನಸ್ಸಿದೆ, ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನನಗೆ ಶಾಪ ಹಾಕಿದ್ರೆ ಯಾವುದೇ ಬದಲಾವಣೆ ಆಗುವುದಿಲ್ಲ" ಎಂದು ಬರೆದುಕೊಂಡಿದ್ದ. ಆ ಪೋಸ್ಟ್ ಸಖತ್ ವೈರಲ್ ಆಗಿತ್ತು.

ಮಗನನ್ನು ಕೂಡ ಚಿತ್ರರಂಗಕ್ಕೆ ಕರೆತರಲು ದರ್ಶನ್ ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ. ಆದರೆ ಯಾವಾಗ ಎನ್ನುವುದು ಗೊತ್ತಿಲ್ಲ. ಮೊದಲು ಸಿನಿಮಾ ನಿರ್ಮಾಣದ ಎಲ್ಲಾ ವಿಚಾರಗಳನ್ನು ಕಲಿಯಬೇಕು, ಮೊದಲು ಕಸ ಗುಡಿಸುವುದು ಗೊತ್ತಾಗಬೇಕು ಆಮೇಲೆ ಉಳಿದಿದ್ದು ಎಂದು ಹೇಳುತ್ತಾ ಬರ್ತಿದ್ದಾರೆ.

ಸದ್ಯ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಿಲನಾ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೋಮವಾರ(ಜೂನ್ 10) ಕೂಡ ಮೈಸೂರಿನಲ್ಲಿ ಹಾಸ್ಯ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಮಂಗಳವಾರ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದರು. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ದರ್ಶನ್‌ನ ಅಲ್ಲಿಂದಲೇ ಪೊಲೀಸರು ಬೆಂಗಳೂರಿಗೆ ಕರೆ ತಂದಿದ್ದರು.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ದರ್ಶನ್ ಸೂಚನೆಯಂತೆ ಆರೋಪಿಗಳು ಬೆಂಗಳೂರಿಗೆ ಕರೆ ತಂದಿದ್ದರು. ಪವಿತ್ರಾ ಗೌಡಗೆ ಅಸಭ್ಯ ಮೆಸೇಜ್ ಕಳುಹಿಸಿದ್ದಕ್ಕೆ ಶೆಡ್‌ನಲ್ಲಿ ಕೂಡಿ ಹಾಕಿ ಥಳಿಸಿದ್ದರು. ಈ ವೇಳೆ ಆತನ ಪ್ರಾಣವೇ ಹೋಗಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದರೆ ದರ್ಶನ್ ಎ2 ಆಗಿದ್ದಾರೆ. ಪೊಲೀಸರ ತನಿಖೆ ಮುಂದುವರೆದಿದೆ. ಕ್ರಿಸ್‌ಮಸ್ ವಿಶೇಷವಾಗಿ 'ಡೆವಿಲ್' ಸಿನಿಮಾ ತೆರೆಗೆ ಬರಬೇಕಿತ್ತು. ಸದ್ಯ ಶೂಟಿಂಗ್ ತಡವಾಗಲಿದ್ದು ಈ ವರ್ಷ ಸಿನಿಮಾ ರಿಲೀಸ್ ಆಗುವುದು ಅನುಮಾನ.

More from Filmibeat

English summary
Vinish Darshan Father's Day post goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X