"ನನಗೆ ಶಾಪ ಹಾಕಿದ್ರೆ ಯಾವುದೇ ಪ್ರಯೋಜನವಿಲ್ಲ"; ವಿನೀಶ್ ದರ್ಶನ್ ಪೋಸ್ಟ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪೊಲೀಸರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ. ದರ್ಶನ್, ಪವಿತ್ರಾ ಗೌಡ ಜೊತೆಗೆ 14 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ದರ್ಶನ್ ಮೇಲೆ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರೇಯಸಿ ಪವಿತ್ರಾ ಗೌಡಗ ಅಶ್ಲೀಲ ಮೆಸೇಜ್ ಮಾಡಿದ್ದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ, ಹತ್ತೆ ಮಾಡಿರುವ ಆರೋಪ ದರ್ಶನ್ ಹಾಗೂ ಆತನ ಗ್ಯಾಂಗ್ ಮೇಲೆ ಇದೆ. 3 ದಿನಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಅಕೌಂಡ್ ಡಿಲೀಟ್ ಮಾಡಿದ್ದಾರೆ. ಇದೀಗ ಪುತ್ರ ವಿನೀಶ್ ತಮ್ಮ ಇನ್‌ಸ್ಟಾ ಅಕೌಂಟ್‌ನಲ್ಲಿ ಪ್ರತಿಕ್ರಿಯಿಸಿದ್ದಾನೆ.

"ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಹಾಗೂ ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದ. ನನಗೆ 15 ವರ್ಷ, ನನಗೂ ಮನಸ್ಸಿದೆ, ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನನಗೆ ಶಾಪ ಹಾಕಿದ್ರೆ ಯಾವುದೇ ಪ್ರಯೋಜನವಿಲ್ಲ" ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾನೆ. ನಗು ಹಾಗೂ ಧನ್ಯವಾದದ ಎಮೋಜಿ ಹಾಕಿದ್ದಾನೆ.
ಸದ್ಯ ವಿನೀಶ್ ಇನ್‌ಸ್ಟಾ ಸ್ಟೋರಿ ವೈರಲ್ ಆಗುತ್ತಿದೆ. ಇನ್ನು ನಟ ದರ್ಶನ್‌ನ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೂಡ ವ್ಯಕ್ತವಾಗುತ್ತಿದೆ. ಫಿಲ್ಮ್ ಚೇಂಬರ್ ಸಹ ದರ್ಶನ್ ಬಂಧನ ವಿಚಾರದ ಬಗ್ಗೆ ಸಭೆ ನಡೆಸಿ ಚರ್ಚಿಸುತ್ತಿದೆ. "ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಬ್ಯಾನ್ ವಿಚಾರ ಕಲಾವಿದರ ಸಂಘ ಎಲ್ಲರೂ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕೊಲೆ ವಿಚಾರ ಇದು.. ತುಂಬಾ ಸೂಕ್ಷ್ಮ ವಿಚಾರವಿದು.ನಿರ್ಮಾಪಕರು ಕೋಟ್ಯಂತರ ರೂಪಾಯಿ ಹಣ ಹಾಕಿದ್ದಾರೆ. ನಿರ್ಮಾಪಕರ ಆರ್ಥಿಕ ಸ್ಥಿತಿಯನ್ನ ನೋಡಬೇಕಾಗುತ್ತೆ. 3 ತಿಂಗಳಿಂದ ಐದು ತಿಂಗಳ ವರೆಗೆ ದರ್ಶನ್ ಶೂಟಿಂಗ್ ಭಾಗಿಯಾಗೋದು ಡೌಟು, ಆ ನಿರ್ಮಾಪಕರನ್ನ ಕರೆಸಿ, ಅವರಿಗೆ ಯಾವ ರೀತಿ ಸಹಾಯ ಮಾಡಲು ಸಾಧ್ಯವೋ ಹಾಗೆ ಮಾಡುತ್ತೇವೆ" ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷರು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ರವಿ ಎಂಬಾತ ಇಂದು(ಜೂನ್ 13) ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ 17 ಜನ ಆರೋಪಿಗಳಿದ್ದಾರೆ ಎಂದು ವರದಿಯಾಗಿದ್ದಾರೆ. ಮಂಗಳವಾರ 13 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಇನ್ನು 4 ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿತ್ತು. ಅದರಲ್ಲಿ ರವಿ ಎಂಬಾತ ಚಿತ್ರದುರ್ಗದ ಡಿವೈಎಸ್‌ಪಿ ಕಛೇರಿಗೆ ಹೋಗಿ ಶರಣಾಗಿದ್ದಾನೆ.
ಚಿತ್ರದುರ್ಗದ ರಾಘವೇಂದ್ರ ಹಾಗೂ ರವಿ ಬಾಡಿಗೆ ಕಾರಿನಲ್ಲಿ ಮೃತ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ. ಅನು, ಜಗ್ಗ, ರಾಜು ಎಂಬ ಇನ್ನು ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.


Click it and Unblock the Notifications











