ಗಜಪಡೆ ಪೋಸ್ಟ್ ವಿವಾದದ ನಡುವೆ ಅಪ್ಪು- ದರ್ಶನ್ ಬಾಲ್ಯದ ಫೋಟೊ ವೈರಲ್

ಅಶ್ವಿನಿ ಪುನೀತ್ ರಾಜ್‌ಕುಮಾರ್, ಸುಮಲತಾ ಅಂಬರೀಶ್ ಹಾಗೂ ಮೀನಾ ತೂಗುದೀಪ ಕುರಿತು ಅವಹೇಳಕಾರಿ ಪೋಸ್ಟ್‌ಗಳು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸುಖಾ ಸುಮ್ಮನೆ ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ದರ್ಶನ್- ಅಪ್ಪು ಬಾಲ್ಯದ ಫೋಟೊ ವೈರಲ್ ಆಗುತ್ತಿದೆ.

ದೊಡ್ಮನೆ ಕಲಾವಿದರ ಸಿನಿಮಾಗಳಲ್ಲಿ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ನಟಿಸುತ್ತಿದ್ದರು. ಹಾಗಾಗಿ ಎರಡೂ ಕುಟುಂಬಗಳ ನಡುವೆ ಚಿಕ್ಕಂದಿನಿಂದಲೂ ಆತ್ಮೀಯ ಒಡನಾಟವಿದೆ. ಚಿಕ್ಕಂದಿನಲ್ಲಿ ದರ್ಶನ್ ಕೂಡ ಅಣ್ಣಾವ್ರ ಮನೆ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದ ಉದಾಹರಣೆಯಿದೆ. 'ದೇವರ ಮಗ' ಚಿತ್ರದಲ್ಲಿ ದರ್ಶನ್ ವಿಲನ್ ಆಗಿ ಶಿವಣ್ಣ ಎದುರು ನಟಿಸಿದ್ದರು.

Amid Gajapade Derogatory post issue Darshan and Puneeth Rajkumar s childwood photo goes viral

'ಅರಸು' ಚಿತ್ರದಲ್ಲಿ ಕೂಡ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೂರ್ಣಿಮಾ ಎಂಟರ್‌ಟ್ರೈಸಸ್ ಬ್ಯಾನರ್‌ನಲ್ಲೇ ತಾವು ಲೈಟ್ ಬಾಯ್ ಆಗಿ ಆಗಿ ಕೆಲಸ ಆರಂಭಿಸಿದ್ದನ್ನು ನಟ ದರ್ಶನ್ ಮರೆತ್ತಿಲ್ಲ. ಉಮಾಪತಿ ಜೊತೆಗಿನ ವಿವಾದದ ಸಮಯದಲ್ಲಿ ದರ್ಶನ್ ಈ ವಿಚಾರವನ್ನು ಹೇಳಿದ್ದರು. ಸದ್ಯ ಅವಹೇಳನಕಾರಿ ಪೋಸ್ಟ್ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗಜಪಡೆ ಟ್ವಿಟ್ಟರ್ ಪೇಜ್‌ನ ಪೋಸ್ಟ್ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.

ಕಿಡಿಗೇಡಿ ಒಬ್ಬ ಗಜಪಡೆ ಹೆಸರಿನಲ ಟ್ವಿಟರ್‌ ಪೇಜ್‌ನಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ. ಅದರ ಬೆನ್ನಲ್ಲೇ ಪೇಜ್ ಹೆಸರು, ಡಿಪಿ ಬದಲಿಸುವ ಕೆಲಸವೂ ನಡೆಯಿತು. ದರ್ಶನ್ ಅಭಿಮಾನಿಯೇ ಈ ರೀತಿ ಪೋಸ್ಟ್ ಮಾಡಿರುವುದು ಎಂದು ಪುನೀತ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ತಪ್ಪಿತಸ್ಥನಿಗೆ ಶಿಕ್ಷಯಾಗಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಗಜಪಡೆ ಪೋಸ್ಟ್ ಸಂಬಂಧ ಗೃಹಸಚಿವ ಡಾ. ಜಿ ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿ ಕಿಡಿಗೇಡಿ ಬಂಧನಕ್ಕೆ ಆಗ್ರಹಿಸಿದ್ದಾರೆ. ಇನ್ನು ಗಜಪಡೆ ಪೋಸ್ಟ್ ಬೆನ್ನಲ್ಲೇ ಮೀನಾ ತೂಗುದೀಪ, ಸುಮಲತಾ ಅಂಬರೀಶ್ ಬಗ್ಗೆಯೂ ಕೆಲವರು ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ದರ್ಶನ್ ಅಭಿಮಾನಿಗಳು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್, ಸುಮಲತಾ ಅಂಬರೀಶ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಹೀಗೆ ಪೋಸ್ಟ್ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ದರ್ಶನ್ ಅಭಿಮಾನಿಗಳು ದೂರಿನಲ್ಲಿ ಮನವಿ ಮಾಡಿದ್ದಾರೆ. ಇನ್ನು ಮಾಧ್ಯಮಗಳ ಜೊತೆ ಮಾತನಾಡಿ ಶಿವಣ್ಣ ಹಾಗೂ ದರ್ಶನ್ ಇಬ್ಬರೂ ಚೆನ್ನಾಗಿದ್ದಾರೆ. ಇವರ ಹೆಸರುಗಳನ್ನು ತೆಗೆದು ಮಾತನಾಡಬೇಡಿ ಎಂದಿದ್ದಾರೆ.

Amid Gajapade Derogatory post issue Darshan and Puneeth Rajkumar s childwood photo goes viral

ಗಜಪಡೆ ಪೋಸ್ಟ್‌ಗೂ ದರ್ಶನ್ ಅಭಿಮಾನಿಗಳಿಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. ಆದರೂ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್- ಅಪ್ಪು ಅಭಿಮಾನಿಗಳ ನಡುವೆ ಕೆಸರೆರಚಾಟ ನಡೆಯುತ್ತಲೇ ಇದೆ. ಇದೆಲ್ಲದರ ಮಧ್ಯೆ ಅಪ್ಪು ಸಹೋದರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿ ಆಗಿದ್ದ ಫೋಟೊ ವೈರಲ್ ಆಗುತ್ತಿದೆ. ಇಬ್ಬರೂ ಚಿಕ್ಕಂದಿನಿಂದಲೂ ಸ್ನೇಹಿತರು. ಇಂತಹ ಸ್ನೇಹಿತರ ನಡುವೆ ತಂದಿಡುವ ಪ್ರಯತ್ನ ಮಾಡಬೇಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

'ಕ್ರಾಂತಿ' ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸಿನಿಬಝ್ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ದರ್ಶನ್ ಭಾಗಿ ಆಗಿದ್ದರು. ಆಗ ಈ ಫೋಟೊ ಬಗ್ಗೆ ಅವರು ಮಾತನಾಡಿದ್ದರು. ಈ ಫೋಟೊ ಯಾವಾಗ ಕ್ಲಿಕ್ಕಿಸಿದ್ದು ಎಂದಾಗ "ಲಕ್ಷ್ಮಿ ಅಕ್ಕನ ಬರ್ತ್‌ಡೇ ಅನ್ನಿಸುತ್ತೆ. ಇದು ವಿಜಯ ರಾಘವೇಂದ್ರ, ಇದು ಅಪ್ಪು, ಇದು ನಾನು" ಎಂದು ದರ್ಶನ್ ನೆನಪು ಮಾಡಿಕೊಂಡಿದ್ದರು. ಈಗ ಇದೇ ಫೋಟೊ ವೈರಲ್ ಆಗುತ್ತಿದೆ.

'ಡೆವಿಲ್' ಸಿನಿಮಾ ಚಿತ್ರೀಕರಣದ ವೇಳೆ ನಟ ದರ್ಶನ್ ಎಡಗೈಗೆ ಪೆಟ್ಟಾಗಿತ್ತು. ಕಳೆದ ವಾರ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೈಗೆ ಶಸ್ತ್ರ ಚಿಕಿತ್ಸೆ ನಡೆದಿತ್ತು. ಸದ್ಯ ಡಿಶ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ತಿಂಗಳಾಂತ್ಯಕ್ಕೆ ಮತ್ತೆ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗುವ ನಿರೀಕ್ಷೆಯಿದೆ.

More from Filmibeat

English summary
Darshan and Puneeth Rajkumar's chilwood photo Takes Internet By Storm Again
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X