ಬೆಸ್ಟ್ ಹಸ್ಬೆಂಡ್; 'ಕರಾವಳಿ' ವಿವಾದದ ನಡುವೆ ಪ್ರಜ್ವಲ್ ದೇವರಾಜ್ ಪತ್ನಿ ಪೋಸ್ಟ್ ವೈರಲ್

ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ ಸಿನಿಮಾ ಪ್ರಚಾರದ ವೇಳೆ ಚಿತ್ರತಂಡದ ಭಿನ್ನಾಪ್ರಾಯಗಳು ಹೊರಬಿದ್ದಿದೆ. ಸಂಭಾವನೆ ವಿಚಾರದಲ್ಲಿ ಪ್ರಜ್ವಲ್ ಹಾಗೂ ನಿರ್ಮಾಪಕ ಕಮ್ ನಿರ್ದೇಶಕ ಗುರುದತ್ ಗಾಣಿಗ ನಡುವೆ ಬಿರುಕು ಮೂಡಿದೆ. ಸಂಭಾವನೆ ಬಾಕಿ ಕೊಡದೇ ನಾನು ಡಬ್ಬಿಂಗ್ ಮಾಡಲ್ಲ ಎಂದು ಹೀರೊ ಹಠಕ್ಕೆ ಬಿದ್ದಿದ್ದಾರೆ. ಬೇರೆಯವರಿಂದ ಡಬ್ ಮಾಡಿಸಿ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡ ಶಾಕ್ ಕೊಟ್ಟಿದೆ.

ನಿನ್ನೆ(ಜುಲೈ 7) ಗಾಂಧಿನಗರದ ಎಎಂಬಿ ಕಪಾಲಿ ಚಿತ್ರಮಂದಿರದಲ್ಲಿ 'ಕರಾವಳಿ' ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೀತು. ಆದರೆ ಟ್ರೈಲರ್‌ನಲ್ಲಿ ಪ್ರಜ್ವಲ್ ವಾಯ್ಸ್ ಇಲ್ಲ ಎಂದು ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ನಿರ್ದೇಶಕ ಗುರುದತ್ ಗಾಣಿಗ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು ರಾದ್ಧಾಂತವಾಗಿತ್ತು. ಸಂಜೆ ವೇಳೆಗೆ 'ಕರಾವಳಿ' ಟ್ರೈಲರ್ ಬಿಡುಗಡೆಯಾಗಿ ಹಿಟ್ ಆಗಿದೆ. ಇದೆಲ್ಲದರ ನಡುವೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪೋಸ್ಟ್ ವೈರಲ್ ಆಗ್ತಿದೆ.

Amid Karavali Movie controversy Prajwal Devaraj s wife Ragini post goes viral

ಇತ್ತೀಚೆಗೆ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೀಗ ಪತಿಗೆ ರಾಗಿಣಿ ಶುಭಕೋರಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ತನ್ನ ಸುತ್ತಲೂ ಇರುವ ಪ್ರತಿಯೊಬ್ಬರ ಒಳ್ಳೆಯದನ್ನು ಯಾವಾಗಲೂ ಕೋರುವ ವ್ಯಕ್ತಿ ನೀವು. ನನ್ನನ್ನು ರಾಜಕುಮಾರಿ ರೀತಿ ನೀಡಿಕೊಳ್ಳುವ ಪತಿ, ಕುಟುಂಬಕ್ಕೆ ಮೊದಲ ಆದ್ಯತೆ ನೀಡುವ ಮಗ, ಎರಡು ದಶಕಗಳಲ್ಲಿ ತನ್ನ ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದೀರಾ. ದಯೆ, ವಾತ್ಸಲ್ಯ ಹಾಗೂ ನಿಸ್ವಾರ್ಥದ ಪ್ರತಿರೂಪ ನೀವು" ಎಂದು ರಾಗಿಣಿ ಬರೆದುಕೊಂಡಿದ್ದಾರೆ.

"ನಿಮ್ಮ ಸುತ್ತಲೂ ಇರುವ ಪ್ರತಿಯೊಬ್ಬರ ಬಗ್ಗೆಯೂ ನೀವು ತೋರಿಸುವೆ ವಿನಯ, ಗೌರವವೇ ನಿಮ್ಮ ಬಲ. ನೀವು ನಿಮ್ಮ ಕಲೆಗೆ, ನಮ್ಮ ಇಂಡಸ್ಟ್ರಿಗೆ ನೂರಕ್ಕೆ ನೂರರಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೀರಾ. ನೀವು ಹೇಗೆ, ಎಲ್ಲದ್ದಕ್ಕೂ ಬದ್ಧರಾಗಿರುವ ನಿಮ್ಮ ಗುಣವನ್ನು ನಾವು ಸದಾ ಪ್ರೀತಿಸುತ್ತೇವೆ. ನಾವು ಹೆಮ್ಮೆ ಪಡುವಂತೆ ನೀವು ಮಾಡಿದ್ದೀರಾ, ಹುಟ್ಟುಹಬ್ಬದ ಶುಭಾಶಯಗಳು" ಎಂದು ರಾಗಿಣಿ ಪ್ರಜ್ವಲ್ ಪೋಸ್ಟ್ ಮಾಡಿದ್ದಾರೆ. 'ದಿ ಬೆಸ್ಟ್ ಹಸ್ಬೆಂಡ್' ಎಂದು ಬರೆದ ಟೀಶರ್ಟ್ ಧರಿಸಿ ಪತಿಯ ಜೊತೆ ಕ್ಲಿಕ್ಕಿಸಿದ ಫೋಟೊವನ್ನು ರಾಗಿಣಿ ಹಂಚಿಕೊಂಡಿದ್ದಾರೆ.

'ಜಂಟಲ್‌ಮನ್' ಚಿತ್ರದ ನಟನೆಗಾಗಿ 2020ರಲ್ಲಿ ರಾಜ್ಯಪ್ರಶಸ್ತಿ ಪ್ರಜ್ವಲ್ ದೇವರಾಜ್ ಅವರಿಗೆ ಲಭಿಸಿತ್ತು. ಈ ವಿಚಾರವನ್ನು ನೆನಪಿಸುವ ಫೋಟೊವನ್ನು ರಾಗಿಣಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ 'ಕರಾವಳಿ' ಚಿತ್ರದ ಪೋಸ್ಟರ್ ಕೂಡ ಮರೆತ್ತಿಲ್ಲ. ಈ ಮೂಲಕ ನೀವು ಏನು ಎನ್ನುವುದು ನಮಗೆ ಗೊತ್ತು ಎಂದು ರಾಗಿಣಿ ಪರೋಕ್ಷವಾಗಿ ಟೀಕಾಕಾರಿಗೆ ತಿರುಗೇಟು ನೋಡಿದ್ದಾರೆ. ಈಗಾಗಲೇ ರಾಗಿಣಿ ಪ್ರಜ್ವಲ್ ಕೂಡ ಚಿತ್ರರಂಗ ಪ್ರವೇಶಿಸಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.

'ಕರಾವಳಿ' ಚಿತ್ರದಲ್ಲಿ ನಟಿಸೋಕೆ ಪ್ರಜ್ವಲ್ ದೇವರಾಜ್ ಅವರು 1.25 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಈಗಾಗಲೇ 1 ಕೋಟಿ ರೂ. ಅವರಿಗೆ ತಲುಪಿದೆ. ಇನ್ನುಳಿದ ಸಂಭಾವನೆ ಕೊಡುವವರೆಗೂ ಡಬ್ಬಿಂಗ್ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಬೇರೆಯವರಿಂದ ಪ್ರಜ್ವಲ್ ಪಾತ್ರಕ್ಕೆ ಡಬ್ ಮಾಡಿಸಿ ಈಗಾಗಲೇ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಇದು ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಜುಲೈ 24ಕ್ಕೆ 'ಕರಾವಳಿ' ಸಿನಿಮಾ ಬಿಡುಗಡೆ ಆಗಬೇಕಿದೆ. ಟ್ರೈಲರ್ ಹಿಟ್ ಆಗಿದೆ. ಒಳ್ಳೆ ರೀತಿಯಲ್ಲಿ ಪ್ರಚಾರ ಮಾಡಿ ಸಿನಿಮಾ ಬಿಡುಗಡೆ ಮಾಡಬೇಕಿದೆ. ಅದಕ್ಕೆ ಪ್ರಜ್ವಲ್ ಒಪ್ಪಬೇಕಿದೆ. ನಿರ್ಮಾಪಕರ ಜೊತೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ. ಪ್ರಜ್ವಲ್ ಅನುಮತಿ ಇಲ್ಲದೇ ಸಿನಿಮಾ ಬಿಡುಗಡೆ ಮಾಡುವುದು ಕೂಡ ಕಷ್ಟವಾಗಬಹುದು. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X