ಲಾಕ್ ಡೌನ್ ನಡುವೆಯೂ ಭಾವಿ ಪತ್ನಿ ಭೇಟಿಯಾದ ನಿಖಿಲ್: ಇದೇಗೆ ಸಾಧ್ಯ ಎಂದು ನೆಟ್ಟಿಗರ ಪ್ರಶ್ನೆ

ನಟ, ರಾಜಕಾರಣಿ ನಿಖಿಲ್ ಕುಮಾರ್ ಆಗಾಗ ಭಾವಿ ಪತ್ನಿಯ ಜೊತೆ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಜಾಗ್ವರ್ ಹೀರೊನ ಜೋಡಿ ಫೋಟೋಗೆ ಅಭಿಮಾನಿಗಳಿಂದ ಸಾವಿರಗಟ್ಟಲ್ಲೆ ಲೈಕ್ಸ್ ಹರಿದು ಬರುತ್ತಿತ್ತು. ಆದರೆ ನಿಖಿಲ್ ಇತ್ತೀಚಿಗೆ ಹಂಚಿಕೊಂಡ ಫೋಟೋ ಅಭಿಮಾನಿಗಳು ಪ್ರಶ್ನೆ ಮಾಡುವಂತೆ ಮಾಡಿದೆ.

ಹೌದು, ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಂಪೂರ್ಣ ಭಾರತ ಲಾಕ್ ಡೌನ್ ಆಗಿದೆ. ಜನರು ಮನೆಯಿಂದ ಹೊರ ಬರುವ ಹಾಗಿಲ್ಲ. ಸಿನಿಮಾ ಗಣ್ಯರು, ರಾಜಕಾರಣಿಗಳು ಮನೆಯಲ್ಲಿಯೇ ಇದ್ದು, ಜನತೆಗೂ ಮನೆಯಲ್ಲಿಯೆ ಇರಿ ಎನ್ನುವ ಸಂದೇಶ ರವಾನಿಸುತ್ತಿದ್ದಾರೆ. ಆದರೆ ನಿಖಿಲ್ ಕುಮಾರ್ ಮಾತ್ರ ಭಾವಿ ಪತ್ನಿಯನ್ನು ಹೇಗೆ ಭೇಟಿಯಾಗಿ ಯುಗಾದಿ ಆಚರಿಸಿದ್ದಾರೆ. ಇದು ಹೇಗೆ ಸಾದ್ಯ, ನಿಖಿಲ್ ಗೆ ನಿಯಮ ಅನ್ವಯ ಆಗುವುದಿಲ್ಲವಾ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಭಾವಿ ಪತ್ನಿ ಜೊತೆ ಯುಗಾದಿ ಆಚರಣೆ

ಭಾವಿ ಪತ್ನಿ ಜೊತೆ ಯುಗಾದಿ ಆಚರಣೆ

ನಿಖಿಲ್ ಭಾವಿ ಪತ್ನಿ ರೇವತಿ ಜೊತೆ ಯುಗಾದಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಭಾವಿ ಪತ್ನಿ ರೇವತಿ ನಿಖಿಲ್ ಗೆ ಬೇವು-ಬೆಲ್ಲ ನೀಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಬೇವು-ಬೆಲ್ಲ ಸವಿದು ಹಬ್ಬ ಸಂಭ್ರಮಿಸಿರುವ ಫೋಟೋ ನೋಡಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಮನೆಯಲ್ಲಿ ಹಬ್ಬ ಮಾಡಿ ನಂತರ ಭಾವಿ ಪತ್ನಿಗೆ ಭೇಟಿ

ಮನೆಯಲ್ಲಿ ಹಬ್ಬ ಮಾಡಿ ನಂತರ ಭಾವಿ ಪತ್ನಿಗೆ ಭೇಟಿ

ನಿಖಿಲ್ ಮೊದಲು ತನ್ನ ಮನೆಯಲ್ಲಿ ಯುಗಾದಿ ಆಚರಣೆ ಮಾಡಿದ್ದಾರೆ. ಸರಳವಾಗಿ ಹಬ್ಬ ಆಚರಣೆ ಮಾಡಿದರೂ, ಸಂಭ್ರಮವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮನೆಯಲ್ಲಿ ಪೂಜೆ ಮಾಡಿ ತಾಯಿ ಅನಿತಾ ಕುಮಾರಸ್ವಾಮಿ ಅವರ ಆಶೀರ್ವಾದ ಪಡೆದು ನಂತರ ಭಾವಿ ಪತ್ನಿ ಮನೆಗೆ ಭೇಟಿ ನೀಡಿರುವ ಸಾಧ್ಯತೆ ಇದೆ. ಈ ಎಲ್ಲಾ ಫೋಟೋವನ್ನು ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿಖಿಲ್ ಗೆ ನಿಯಮ ಅನ್ವಯ ಆಗುವುದಿಲ್ಲವಾ?

ನಿಖಿಲ್ ಗೆ ನಿಯಮ ಅನ್ವಯ ಆಗುವುದಿಲ್ಲವಾ?

"ಮನೆಯಿಂದ ಆಚೆಗೆ ಬರಲು ಸಾಧ್ಯವಿಲ್ಲ. ಇಡೀ ಕರ್ನಾಟಕ ಲಾಕ್ ಡೌನ್ ಆಗಿದೆ. ನೀವೆ ಹೀಗೆ ಮಾಡಿದರೆ ಹೇಗೆ? ಭಾವಿ ಪತ್ನಿ ಮನೆಗೆ ಹೋಗಲು ಈಗ ಹೇಗೆ ಸಾಧ್ಯವಾಯಿತು. ನಿಮಗೆ ನಿಯಮ ಎಲ್ಲಾ ಪಾಲನೆ ಆಗುವುದಿಲ್ಲವ, ಕೊರೊನಾ ಪರಿಣಾಮ ಜಾಸ್ತಿ ಇದೆ. ಹೇಗೆ ಭಾವಿ ಪತ್ನಿಯನ್ನು ಭೇಟಿಯಾಗಿದ್ದೀರಿ? ಎಂದು ಪ್ರಶ್ನಿಸುತ್ತಿದ್ದಾರೆ.

ಮದುವೆ ಯಾವಾಗ?

ಮದುವೆ ಯಾವಾಗ?

ನಿಖಿಲ್ ಮತ್ತು ರೇವತಿ ಮದುವೆ ರಾಮನಗರದಲ್ಲಿ ಅದ್ದೂರಿಯಾಗಿ ಮಾಡಲು ಸಿದ್ಧತೆ ಮಾಡಲಾಗಿತ್ತು. ಏಪ್ರಿಲ್ 16ರಂದು ನಿಖಿಲ್ ಮದುವೆ ನಿಗದಿಯಾಗಿತ್ತು. ಆದರೀಗ ಕೊರೊನಾ ವೈರಸ್ ಹಾವಳಿಯ ಪರಿಣಾಮ ಇಡೀ ಭಾರತ ಏಪ್ರಿಲ್ 14ರ ವರೆಗೂ ಲಾಕ್ ಡೌನ್ ಆಗಿದೆ. ಹಾಗಾಗಿ ನಿಖಿಲ್ ಮದುವೆ ಯಾವಾಗ, ಎಲ್ಲಿ ಎನ್ನುವ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

More from Filmibeat

English summary
Amid Lockdown Nikhil Kumar meets his Fiance Revathi. Netizens questions to Nikhil Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X