"ಈ ಪೆನ್‌ಡ್ರೈವ್‌ನಲ್ಲಿರೋದು ನಾನೇ... ಆ ನಟಿಯೂ ನಿಜ"; ಬಿಗ್‌ಬಾಸ್ ಪ್ರಥಮ್ ವ್ಯಂಗ್ಯ
ಹಾಸನದ ಪೆನ್‌ಡ್ರೈವ್ ಪ್ರಕರಣ ಭಾರೀ ಸುದ್ದಿ ಆಗುತ್ತಿದೆ. ದೇಶಾದ್ಯಂತ ಈ ಬಗ್ಗೆ ಚರ್ಚೆ ಆಗುತ್ತಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಆರೋಪ ಪ್ರಕರಣ ಭಾರೀ ಚರ್ಚೆ ಹುಟ್ಟಾಕ್ಕಿದೆ. ಈಗಾಗಲೇ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ಸಹ ದಾಖಲಾಗಿದೆ.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಹಾಸನದ ಮೈತ್ರಿ ಅಭ್ಯರ್ಥಿಯೂ ಆಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಬಂದಿರುವ ಗಂಭೀರ ಆರೋಪ ಸಂಚಲನ ಸೃಷ್ಟಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿದೆ. ಇದೆಲ್ಲದರ ನಡುವೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ ಎನ್ನು ಮಾತುಗಳು ಕೇಳಿಬರ್ತಿದೆ. ಇನ್ನು ಈ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಸಿನಿಮಾ ತಾರೆಯರು ದನಿ ಎತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ತಮಿಳು ನಟಿ ಕಸ್ತೂರಿ, ತೆಲುಗು ನಟಿ ಪೂನಂ ಕೌರ್ ಕೆಂಡ ಕಾರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ಪ್ರಥಮ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಹಾಸನದ ಘಟನೆ ಅಕ್ಷಮ್ಯ. ತಪ್ಪಿತಸ್ಥರಿಗೆ ಗಲ್ಲಗಲಿ; SIT ಯಲ್ಲಿರುವ ನಾಗಲಕ್ಷ್ಮೀ ಮೇಡಮ್‌ಗೆ ಮಹಿಳೆಯರ ಕಾಳಜಿ ಇದೆ; FSIL test ಮಾಡಿದ್ರೆ 4 ದಿನದಲ್ಲಿ ವರದಿ ಬರುತ್ತದೆ. ಅಲ್ಲಿರುವ ಧ್ವನಿ ಸಂಬಂಧ ಪಟ್ಟವರದ್ದಾಗಿದ್ರೆ ಶಿಕ್ಷಿಸಿ" ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಪ್ರಥಮ್ ಖಂಡಿಸಿದ್ದರು. ಆದರೆ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಕೆಲವರು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಥಮ್ "ನಾನು ಫಿಲ್ಮ್ ಮಾಡಿ ಸಾಲದಲ್ಲಿದ್ದೇನೆ. ಎಲ್ಲದಕ್ಕೂ ಪ್ರಥಮ್‌ನ ಕೇಳಬೇಡಿ. ಕರ್ನಾಟಕದ ಅಳಿಯ ಫಿಲ್ಮ್ ಮುಂದಿನ ತಿಂಗಳು ರಿಲೀಸ್. ಗೆಲ್ಲಿಸಿ" ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿ ಸುಮ್ಮನಾಗದ ಪ್ರಥಮ್ ಈಗ ಹೊಸ ವೀಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಪೆನ್‌ಡ್ರೈವ್ ಬಗ್ಗೆ ಮಾತನಾಡಿದ್ದಾರೆ. "ಪೆನ್‌ಡ್ರೈವ್ ಬಗ್ಗೆ ಮಾತನಾಡುವ ಟೈಂ ಬಂತು. ಪೆನ್‌ಡ್ರೈವ್ ಇದೆ. ಇದೇ ಪೆನ್‌ಡ್ರೈವ್ ಬಗ್ಗೆ ತಾನೇ ಮಾತಾಡಿ ಮಾತಾಡಿ ಅಂದಿದ್ದು. ಈ ಪೆನ್‌ಡ್ರೈವ್‌ನಲ್ಲಿರೋ ವಿಡಿಯೋ ನಿಜ. ನಾನು, ಹೀರೊಯಿನ್ ಇಬ್ಬರೂ ಸೇರಿ ಮಾಡಿದಂತಹ ವೀಡಿಯೋ ಇದು" ಎಂದು ಪ್ರಥಮ್ ವ್ಯಂಗ್ಯ ಮಾಡಿದ್ದಾರೆ.
ಪ್ರಥಮ್ ನಿರ್ದೇಶಿಸಿ ನಟಿಸಿರುವ 'ಕರ್ನಾಟಕದ ಅಳಿಯ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾ ಪ್ರಚಾರಕ್ಕೆ ಈ ಪೆನ್‌ಡ್ರೈವ್ ಪ್ರಕರಣದ ವಿಚಾರವನ್ನು ಪ್ರಥಮ್ ಬಳಸಿಕೊಂಡಿದ್ದಾರೆ. ಮಾತು ಮುಂದುವರೆಸಿರುವ ಪ್ರಥಮ್ "ಈ ಪೆನ್‌ಡ್ರೈವ್ ಇಷ್ಟು ದೊಡ್ಡ ಸಮಸ್ಯೆ ಮಾಡುತ್ತೆ ಎಂದು ಗೊತ್ತಿರಲಿಲ್ಲ. ಜನರ ಬಳಿ ಮುಚ್ಚಟ್ಟು ನಾನು ಏನು ಸಾಧಿಸಬೇಕಾದ್ದು ಇಲ್ಲ. ನಾನು ಮಾಡಿಲ್ಲ, ನನ್ನದ್ದಲ್ಲ. ಫೇಕ್ ಅಂತ ನಾನು ಹೇಳಲ್ಲ"
"ಈ ಪೆನ್‌ಡ್ರೈವ್‌ನಲ್ಲಿರೋದು ನಾನೇ. ಆ ನಟಿಯೂ ನಿಜ. ಸಿಎಂ ಗಮನಕ್ಕೂ ತಂದಿದ್ದೆ. ಅವರು ಮುಂದಿನ ತಿಂಗಳ ಗಮನ ಹರಿಸುತ್ತೇನೆ ಎಂದಿದ್ದರು. ಎಲ್ಲರಿಗೂ ಪೆನ್‌ಡ್ರೈವ್ ಮಾಡಿ ಹಂಚಲು ಸಾಧ್ಯವಿಲ್ಲ. ಒಂದು ಪೆನ್‌ಡ್ರೈವ್ ಬೆಲೆ 600 ರೂ. ಯಾರು ಕೊಡ್ತಾರೆ. ಆದರೂ ನೀವು ನೋಡಬೇಕು. ಈ ಪೆನ್‌ಡ್ರೈವ್‌ನಲ್ಲಿರೋ ವಿಡಿಯೋ ಯೂಟ್ಯೂಬ್‌ನಲ್ಲಿದೆ"ಶ ಎಂದು ತಮ್ಮ ಚಿತ್ರದ ಹಾಡಿನ ವಿಡಿಯೋ ಲಿಂಕ್ ಶೇರ್ ಮಾಡಿದ್ದಾರೆ.
ಈ ಪ್ರಕರಣದ ವಿಚಾರವನ್ನು ನಿಮ್ಮ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೀರ ಅಲ್ವಾ? ಎಂದು ನೆಟ್ಟಗರು ಪ್ರಥಮ್ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. 'ಕರ್ನಾಟಕದ ಅಳಿಯ' ಚಿತ್ರದಲ್ಲಿ ಪ್ರಥಮ್ ಜೊತೆಗೆ ಅಕ್ಷಿತಾ ಬೊಪಯ್ಯ, ರೇಖಾ, ಐಶ್ವರ್ಯಾ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











