ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಟೈಟಲ್ ದಿಢೀರ್ ಬದಲಾಯ್ತು

ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ನಟಿಸುತ್ತಿರು ಸಿನಿಮಾ 'ಡೆವಿಲ್'. ಸ್ವತಃ ಪ್ರಕಾಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಒಂದು ವಾರ ಚಿತ್ರೀಕರಣದ ಬಳಿಕ ಸಿನಿಮಾ ಮುಂದುವರೆಯಲಿಲ್ಲ. ದರ್ಶನ್ ಕೈಗೆ ಪೆಟ್ಟಾಗಿ ಸಿನಿಮಾ ನಿಂತಿತ್ತು. ಮತ್ತೆ ಶೂಟಿಂಗ್ ಆರಂಭಿಸುವ ವೇಳೆಗೆ ರೇಣುಕಾಸ್ವಾಮಿ ಪ್ರಕರಣದ ಬೆಳಕಿಗೆ ಬಂದಿತ್ತು.

ಸದ್ಯ ಬೆನ್ನು ನೋವಿನಿಂದ ನಟ ದರ್ಶನ್ ಬಳಲುತ್ತಿದ್ದಾರೆ. ಹಾಗಾಗಿ ವಿಶ್ರಾಂತಿ ಪಡೆಯುತ್ತಿದ್ದು ಶೀಘ್ರದಲ್ಲೇ ಮತ್ತೆ 'ಡೆವಿಲ್' ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ. ಮುಂದಿನ ತಿಂಗಳು ಚಿತ್ರೀಕರಣ ಶುರುವಾಗಬಹುದು ಎನ್ನಲಾಗ್ತಿದೆ. ಇದೆಲ್ಲದರ ನಡುವೆ ದರ್ಶನ್ ಹುಟ್ಟುಹಬ್ಬ ಬರ್ತಿದೆ. ಆದರೆ ಈ ಬಾರಿ ಅಭಿಮಾನಿಗಳು ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲ್ಲ ಎಂದು ಹೇಳಿದ್ದಾರೆ.

Amid Teaser Release Darshan s Devil the hero film title changed

ಇತ್ತೀಚೆಗೆ ವೀಡಿಯೋ ಮಾಡಿ ದರ್ಶನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದರು. ಜೊತೆಗೆ ತಮ್ಮ ಸಿನಿಮಾಗಳ ಬಗ್ಗೆಯೂ ಸ್ಪಷ್ಟನೆ ನೀಡಿದ್ದರು. ಈ ಬಾರಿ ಹುಟ್ಟುಹಬ್ಬಕ್ಕೆ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಿಲ್ಲ, ಇದೊಂದು ಬಾರಿ ಸಹಕರಿಸಿ ಎಂದು ತಮ್ಮ ಸೆಲೆಬ್ರೆಟಿ(ಅಭಿಮಾನಿ)ಗಳಲ್ಲಿ ದರ್ಶನ್ ಕೇಳಿಕೊಂಡಿದ್ದರು. ಆದರೆ ಬರ್ತ್‌ಡೇ ಸಂಭ್ರಮದಲ್ಲಿ 'ಡೆವಿಲ್' ಚಿತ್ರದ ಹೊಸ ಟೀಸರ್ ಉಡುಗೊರೆಯಾಗಿ ರಿಲೀಸ್ ಆಗಲಿದೆ.

ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಒಂದು ವಾರ ಆಕ್ಷನ್ ಸನ್ನಿವೇಶದ ಚಿತ್ರೀಕರಣ ನಡೆದಿತ್ತು. ಅದೇ ಸನ್ನಿವೇಶ ಸೇರಿದಿ ಜಬರ್ದಸ್ತ್ ಟೀಸರ್ ಕಟ್ ಮಾಡಲಾಗಿದೆ. ಅಜನೀಶ್ ಲೋಕನಾಥ್ ಬಿಜಿಎಂ ಇದೆ. ಸಾರೆಗಮ ಮ್ಯೂಸಿಕ್ ಸಂಸ್ಥೆಗೆ 'ಡೆವಿಲ್' ಚಿತ್ರದ ಆಡಿಯೋ ರೈಟ್ಸ್ ಮಾರಾಟವಾಗಿದೆ. ಹಾಗಾಗಿ ಸಾರೆಗಮ ಯೂಟ್ಯೂಬ್‌ ಚಾನಲ್‌ನಲ್ಲಿ ಟೀಸರ್ ರಿಲೀಸ್ ಆಗಲಿದೆ.

Amid Teaser Release Darshan s Devil the hero film title changed

ನೆಚ್ಚಿನ ನಟನ ಹುಟ್ಟುಹಬ್ಬದ ದಿನ ಅವರನ್ನು ಭೇಟಿ ಮಾಡಿ ಕೈ ಕುಲುಕಿ ಶುಭಾಶಯ ಕೋರಲು ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೂ ಕೂಡ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಅದನ್ನು ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ. ಆ ದಿನ ಕೈಲಾದಷ್ಟು ಸಮಾಜಮುಖಿ ಕೆಲಸ ಮಾಡಲು ಮುಂದಾಗಿದ್ದಾರೆ. ಅದೆಲ್ಲದರ ಜೊತೆಗೆ 'ಡೆವಿಲ್' ಚಿತ್ರದ ಟೀಸರ್ ನೋಡಲು ಕಾತರರಾಗಿದ್ದಾರೆ.

ಇದೆಲ್ಲದರ ನಡುವೆ 'ಡೆವಿಲ್' ಚಿತ್ರದ ಟೈಟಲ್ ಕೊಂಚ ಬದಲಾಗಿದೆ. ಸದ್ಯ ಚಿತ್ರತಂಡ ಬಿಟ್ಟಿರುವ ಹೊಸ ಪೋಸ್ಟರ್‌ನಲ್ಲಿ ಅದು ಗೊತ್ತಾಗುತ್ತಿದೆ. ಈ ಮೊದಲು ಚಿತ್ರಕ್ಕೆ 'ಡೆವಿಲ್'- ದಿ ಹೀರೊ ಎನ್ನುವ ಟೈಟಲ್ ಇತ್ತು. ಈಗ ಅದನ್ನು 'ದಿ ಡೆವಿಲ್' ಎಂದು ಬದಲಿಸಿರುವುದು ಗೊತ್ತಾಗುತ್ತಿದೆ. ಅರೇ ಇದ್ದಕ್ಕಿಂದಂತೆ ಯಾಕೆ ಸಿನಿಮಾ ಟೈಟಲ್ ಬದಲಿಸಿಬಿಟ್ಟರು ಎಂದು ಅಚ್ಚರಿಗೊಂಡಿದ್ದಾರೆ.

'ದಿ ಡೆವಿಲ್' ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಇನ್ನು ಚಿತ್ರೀಕರಣ ಆರಂಭದ ಹಂತದಲ್ಲಿದೆ. ಹಾಗಾಗಿ ಮುಂದೆ ಬೊಬ್ಬೊಬ್ಬರಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ನವೆಂಬರ್ 2, 2013ರಂದು ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ 'ದಿ ಡೆವಿಲ್' ಸಿನಿಮಾ ಮುಹೂರ್ತ ನಡೆದಿತ್ತು. ಬಳಿಕ 'ಕಾಟೇರ' ಸಿನಿಮಾ ಬಂದು ಸಕ್ಸಸ್ ಕಂಡಿತ್ತು. ಕಳೆದ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಪ್ರೋಮೊ ಶೂಟ್ ಮಾಡಿ ರಿಲೀಸ್ ಮಾಡಿದ್ದರು.

ಟೈಟಲ್‌ಗೆ ತಕ್ಕಂತೆ ಕೊಂಚ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ದರ್ಶನ್ ನಟಿಸುತ್ತಿರುವಂತೆ ಕಾಣುತ್ತಿದೆ. ಈ ಹಿಂದೆ ಬಂದಿರುವ ಟೀಸರ್‌ನಲ್ಲಿ ಕೂಡ ಅದು ಎದ್ದು ಕಾಣುತ್ತಿದೆ. ಆದರೆ ಸಿನಿಮಾ ಕಥೆ ಏನು? ದರ್ಶನ್ ಪಾತ್ರ ಏನು? ಎನ್ನುವ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ.

More from Filmibeat

English summary
Darshan starrer Devil the hero becomes The devil before teaser release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X