''ನನಗೆ ಅಸುರಕ್ಷಿತ ಭಾವನೆ ಈಗಲೂ ಕಾಡುತ್ತೆ''- ಪಾತ್ರಕ್ಕಾಗಿ ಪಲ್ಲಂಗದ ಕುರಿತು ಶ್ರದ್ಧಾ ಶ್ರೀನಾಥ್ ಮಾತು...!

ಲೈಂಗಿಕ ಹಗರಣಗಳಿಂದ ಮಲಯಾಳಂ ಚಿತ್ರರಂಗ ನಲುಗಿ ಹೋಗಿದೆ. ದಿನಕ್ಕೊಂದು ಸೆ* ಬಾಂಬ್ ಮಲಯಾಳಂ ಚಿತ್ರರಂಗದ ಮೇಲೆ ಬೀಳುತ್ತಿರುವ ಕಾರಣದಿಂದ, ದೇಶವ್ಯಾಪಿ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತ ಎನ್ನುವ ಚರ್ಚೆ ಶುರುವಾಗಿದೆ. ಇದು ಕೇವಲ ಮಲಯಾಳಂ ಚಿತ್ರರಂಗದ ಕಥೆ ಮಾತ್ರ ಅಲ್ಲ, ಎಲ್ಲ ಭಾಷೆಯ ಚಿತ್ರರಂಗದ ಕಥೆ ಕೂಡ ಒಂದೇ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ನಡುವೆ ಶ್ರದ್ಧಾ ಶ್ರೀನಾಥ್ ಮಾತನಾಡಿದ್ದಾರೆ. ಹೇಮಾ ಆಯೋಗ ಸಲ್ಲಿಸಿರುವ ವರದಿ ಕುರಿತು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಹೌದು, ಇಂಡಿಯಾ ಟುಡೇ ಮೈಂಡ್ ರಾಕ್ಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಶ್ರದ್ಧಾ ಶ್ರೀನಾಥ್, ಅದೃಷ್ಟವಶಾತ್ ಚಿತ್ರರಂಗದಲ್ಲಿ ನನಗೆ ಯಾವತ್ತು ಇಲ್ಲಿಯವರೆಗೆ ಕಹಿ ಅನುಭವ ಆಗಿಲ್ಲ ಎಂದಿದ್ದಾರೆ. ಚಿತ್ರರಂಗದಲ್ಲಿ ನಾನು ಸುರಕ್ಷಿತ ಎಂಬ ಭಾವನೆ ನನಗೆ ಇದೆ, ಆದರೆ ಚಿತ್ರರಂಗದಾಚೆ ನನಗೆ ಅಸುರಕ್ಷಿತ ಭಾವನೆ ಇವತ್ತು ಕೂಡ ಕಾಡುತ್ತೆ ಎಂದು ಹೇಳಿರುವ ಶ್ರದ್ಧಾ ಶ್ರೀನಾಥ್, ಉದಾಹರಣೆಗೆ ನಾನು ಯಾವುದಾದರೂ ಪಾರ್ಟಿ ಮುಗಿಸಿಕೊಂಡು ಹೊರಡುವಾಗ ನನ್ನ ಡ್ರೈವರ್ ಎಲ್ಲಿ ನೋಡುತ್ತಿದ್ದಾನೆ ಎನ್ನುವ ಆಲೋಚನೆ ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಾನೇ ಇರುತ್ತೆ ಎಂದಿದ್ದಾರೆ. ನನ್ನ 08ನೇ ವಯಸ್ಸಿನಿಂದನೇ ನಾನು ಈ ತರ ಯೋಚನೆ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದ್ದಾರೆ.

Amid the Hema Committee Report I Feel Unsafe Outside My Workplace Says Actress Shraddha Srinath

ಇನ್ನೂ ಚಿತ್ರರಂಗದಲ್ಲಿ ನನಗೆ ಯಾವ ಕಹಿ ಅನುಭವ ಆಗಿಲ್ಲ ಎಂದ ಮಾತ್ರಕ್ಕೆ ಚಿತ್ರರಂಗದಲ್ಲಿ ಸಮಸ್ಯೆಯೇ ಇಲ್ಲ ಎಂದು ನಾನು ಹೇಳಿಲ್ಲ ಎಂದಿರುವ ಶ್ರದ್ಧಾ ಶ್ರೀನಾಥ್, ಚಿತ್ರರಂಗದಲ್ಲಿ ಮಹಿಳೆಯರಿಗೆ ಮೂಲಭೌತ ಸೌಕರ್ಯಗಳಿಲ್ಲ ಎಂದು ಹೇಳಿದ್ದಾರೆ. ಮೇಕಪ್ ವಿಭಾಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇರಬಹುದು, ಹೇರ್ ಸ್ಟೈಲಿಸ್ಟ್‌ಗಳಾಗಿರಬಹುದು ಅವರಿಗೆ ಶೌಚಾಲಯದ ವ್ಯವಸ್ಥೆಯನ್ನೂ ನಮ್ಮಲ್ಲಿ ಯಾರು ಮಾಡುವುದಿಲ್ಲ ಎಂದು ಹೇಳಿರುವ ಶ್ರದ್ಧಾ ಶ್ರೀನಾಥ್, ಕೆಲವೊಮ್ಮೆ ತುಂಬಾ ಕಷ್ಟವಾಗುತ್ತಿರುತ್ತೆ ಆದರೆ ಯಾರ ಜೊತೆ ಆ ವಿಚಾರವನ್ನು ಹಂಚಿಕೊಳ್ಳಬೇಕೆಂದು ಗೊತ್ತಾಗುವುದಿಲ್ಲ, ಇನ್ನೂ ಕೆಲವೊಮ್ಮೆ ಮಾತನಾಡುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತೆ ಈ ಕಾರಣಕ್ಕೆ ವ್ಯವಸ್ಥಿತವಾದ ಮತ್ತು ಶಿಸ್ತು ಬದ್ಧವಾದ ಸಮಿತಿಯ ಅವಶ್ಯಕತೆ ಚಿತ್ರರಂಗಕ್ಕೆ ಇದೆ ಎಂದು ಹೇಳಿದ್ದಾರೆ ಶ್ರದ್ಧಾ ಶ್ರೀನಾಥ್.

ಅಂದ್ಹಾಗೇ ಇನ್ನೊಂದು ವರ್ಷ ಕಳೆದರೆ, ಶ್ರದ್ದಾ ಶ್ರೀನಾಥ್ ಚಿತ್ರರಂಗಕ್ಕೆ ಬಂದು ಒಂದು ದಶಕವಾಗಲಿದೆ. ಈ ಹತ್ತು ವರ್ಷದಲ್ಲಿ ಶ್ರದ್ಧಾ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಕೂಡ ಆಕ್ಟ್ ಮಾಡಿದ್ದಾರೆ. ಆದರೆ, ಚಿತ್ರಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಯಾಕೆ ಹೀಗೆ ಎಂಬ ಪ್ರಶ್ನೆಗೆ ಕೂಡ ಈ ಸಂವಾದದಲ್ಲಿ ಉತ್ತರವನ್ನು ನೀಡಿರುವ ಶ್ರದ್ಧಾ ಶ್ರೀನಾಥ್ ನಾನು ಮನಸು ಮಾಡಿದ್ದರೆ ವರ್ಷಕ್ಕೆ ಆರಾಮಾಗಿ ಹತ್ತು ಸಿನಿಮಾಗಳನ್ನು ಮಾಡಬಹುದಿತ್ತು ಆದರೆ ನಾನು ಕೇವಲ ಮೂರು ಚಿತ್ರಗಳನ್ನು ಮಾತ್ರ ಮಾಡಿದೆ, ಯಾಕೆಂದರೆ ನಾನು ಮಾಡುವ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕು ಎನ್ನುವುದಷ್ಟೇ ನನ್ನ ಆಶಯವಾಗಿರುತ್ತೆ ಎಂದು ಹೇಳಿದ್ದಾರೆ. ಸರಿಯಾದ ಪಾತ್ರಗಳನ್ನು ಆಯ್ಕೆ ಮಾಡುವಂತೆ ನನ್ನ ಮೇಲೆ ನಾನೇ ಒತ್ತಡ ಹೇರಿಕೊಳ್ಳುತ್ತೇನೆ ಎಂದಿರುವ ಶ್ರದ್ಧಾ ಶ್ರೀನಾಥ್ ನನ್ನ ಕೆಲಸವನ್ನು ನಾನು ಯಾವುತ್ತು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಕೂಡ ಹೇಳಿದ್ದಾರೆ.

Amid the Hema Committee Report I Feel Unsafe Outside My Workplace Says Actress Shraddha Srinath

ಉಳಿದಂತೆ ಶ್ರದ್ಧಾ ಶ್ರೀನಾಥ್ ಅಭಿನಯದ ಒಂದು ತೆಲುಗು ಮತ್ತು ತಮಿಳು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಇನ್ನೂ.. ಶ್ರದ್ಧಾ ಅಭಿನಯದ ಲೆಟರ್ಸ್ ಟು ಮಿಸ್ಟರ್ ಖನ್ನಾ ಎಂಬ ಹಿಂದಿ ಚಿತ್ರ ಕೂಡ ತೆರೆಗೆ ಬರಲು ಸಿದ್ಧವಾಗಿದೆ.ಇನ್ನೂ ಕನ್ನಡದಲ್ಲಿ 2022ರಲ್ಲಿ ಶ್ರದ್ಧಾ ಶ್ರೀನಾಥ್ ಡಿಯರ್ ವಿಕ್ರಮ್ ಚಿತ್ರದಲ್ಲಿ ಆಕ್ಟ್ ಮಾಡಿದ್ದರು. ಅದೇ ಕೊನೆ. ಆ ನಂತರ ಶ್ರದ್ಧಾ ಮತ್ಯಾವ ಕನ್ನಡ ಚಿತ್ರವನ್ನು ಒಪ್ಪಿಕೊಂಡಿಲ್ಲ. ಮುಂದೆ ಒಪ್ಪಿಕೊಳ್ಳುತ್ತಾರಾ ಅನ್ನುವುದು ಕೂಡ ಗೊತ್ತಿಲ್ಲ.ಆದರೆ ಇವರ ಕನ್ನಡ ಅಭಿಮಾನಿಗಳು ಇವರನ್ನು ಕನ್ನಡ ಚಿತ್ರರಂಗದಲ್ಲಿ ಮಿಸ್ ಮಾಡಿಕೊಳ್ಳುತ್ತಿರುವುದು ಮಾತ್ರ ಸತ್ಯ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X