ಬಡ ಮಹಿಳೆ ಹಸಿದಾಗ ಅನ್ನ ಹಾಕಿ 'ಅದನ್ನ' ಅಲ್ಲ ; ರಶ್ಮಿ ಗೌತಮ್...!

By ಫಿಲ್ಮಿಬೀಟ್ ಡೆಸ್ಕ್

ರಶ್ಮಿ ಗೌತಮ್.. ಟಾಲಿವುಡ್‌ನ ಡೇರ್ ಡೆವಿಲ್ ನಾಯಕಿ ಕಂ ನಿರೂಪಕಿ. ಸನಾತನ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮ.. ದೇವರು ಮತ್ತು ನಂಬಿಕೆಯನ್ನ ನಿಂದಿಸುವ ಹಕ್ಕು ಯಾರಿಗೂ ಇಲ್ಲ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್‌ ಗೆ ತಿರುಗೇಟು ಕೊಟ್ಟಿದ್ದ ರಶ್ಮಿ ಗೌತಮ್ , ಸದ್ಯಕ್ಕೆ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಇನ್ಸ್ಟಾಗ್ರಾಂ ಸ್ಟೋರಿ

ಹೌದು, ರಶ್ಮಿ ಗೌತಮ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಖ್ಯಾತ ಲೇಖಕಿ ರಾಚೆಲ್ ಮೋರನ್​ ಅವರ ಸಾಲುಗಳನ್ನ ಹಂಚಿಕೊಂಡಿದ್ದಾರೆ. ಬಡತನದಲ್ಲಿರುವಾಗ ಮತ್ತು ಹಸಿವಿನಿಂದ ಬಳಲುತ್ತಿರುವಾಗ ನಾವು ಮನುಷ್ಯರಾಗಿ ಅವರ ಬಾಯಿಗೆ ಆಹಾರ ಇಡಬೇಕೇ ಹೊರತು ಖಾಸಗಿ ಅಂಗವಲ್ಲ ಎಂಬ ಸಾಲುಗಳು ಅವು. ಇನ್ನೂ ಹೆಚ್ಚಿನ ಪುರುಷರು ಈ ಜಗತ್ತಿನಲ್ಲಿ ಒಳ್ಳೆಯರಾಗಿದ್ದರೆ ವ್ಯಭಿಚಾರ ಎಂಬುದು ಇರುತ್ತಲೇ ಇರಲಿಲ್ಲ ಎಂಬ ಸಾಲುಗಳಿಂದ ಆರಂಭವಾದ ಈ ಪೋಸ್ಟ್ ಬಗ್ಗೆ ಈಗ ಚರ್ಚೆ ಶುರುವಾಗಿದೆ. ರಶ್ಮಿ ಗೌತಮ್ ಹಂಚಿಕೊಂಡ ಈ ವಿಚಾರಕ್ಕೂ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್‌ಗೂ ಏನಾದರೂ ಸಂಬಂಧ ಇದೆಯಾ ಅನ್ನುವ ಅನುಮಾನ ಅನೇಕರನ್ನ ಕಾಡುತ್ತಿದೆ.

Amid the pen drive case did Rashmi Gautam take a dig at Prajwal Revanna

ಇನ್ನೂ ನಿಮಗೆ ಗೊತ್ತು.. ಸದ್ಯಕ್ಕೆ ಪ್ರಜ್ವಲ್ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಪೆನ್ ಡ್ರೈವ್‌ ಬೆಲೆ ಹೆಚ್ಚಾಗಿದೆ. ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ದೇಶವ್ಯಾಪಿ ಹಾಸನದ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು, ಸಿನಿಮಾ ತಾರೆಯರು ಕೂಡ ಇದೇ ವಿಚಾರದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಕಾಶ್ ರಾಜ್ , ಪ್ರಥಮ್, ಚೇತನ್ ಅವರಿಂದ ಹಿಡಿದು ಸ್ವರಾ ಭಾಸ್ಕರ್.. ಪೂನಂ ಕೌರ್.. ತಮಿಳು ನಟಿ ಕಸ್ತೂರಿಯವರೆಗೆ ಎಲ್ಲರು ಪ್ರಜ್ವಲ್ ಅವರ ಮೇಲೆ ಕಿಡಿ ಕಾರಿದ್ದಾರೆ. ಇದರ ನಡುವೆ ರಶ್ಮಿ ಗೌತಮ್ ಹಸಿವು.. ಆಹಾರ.. ವ್ಯಭಿಚಾರ.. ಮನುಷ್ಯತ್ವದ ಬಗ್ಗೆ ಮಾತನಾಡಿದ್ದಾರೆ.

ಇನ್ನೂ ಇವರನ್ನ ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಿಸುವವರಿಗೆ, ಇವರ ಅಭಿಮಾನಿಗಳಿಗೆ.. ಮೂಕ ಪ್ರಾಣಿಗಳ ಪರ ಧ್ವನಿ ಎತ್ತುವ ರಶ್ಮಿ ಅವರ ಗುಣದ ಬಗ್ಗೆ ಗೊತ್ತೇ ಇರುತ್ತೆ. ಈ ಕಾರಣಕ್ಕೆ.. ಮೂಕ ಪ್ರಾಣಿಗಳಿಗೆ ಹಿಂಸೆ ಕೊಡುವರ ಮೇಲೆ ಹರಿಹಾಯುವ ರಶ್ಮಿ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾತನಾಡದೇ ಇರಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನ ಅನೇಕರು ಕೇಳ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನ ಗುರಿಯಾಗಿಸಿಕೊಂಡೇ, ರಶ್ಮಿ ಗೌತಮ್ ಈ ವಿಚಾರವನ್ನ ಹಂಚಿಕೊಂಡಿದ್ದಾರೆ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ

Amid the pen drive case did Rashmi Gautam take a dig at Prajwal Revanna

ಆದರೆ ಇದನ್ನ ಒಪ್ಪದ ಇನ್ನು ಕೆಲವರು ಎಲ್ಲ ವಿಚಾರದಲ್ಲಿಯೂ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸುವ ನೀವು ಈ ಬಾರಿ ಅಡ್ಡ ಗೋಡೆ ಮೇಲೆ ದೀಪ ಇಡುವ ಪ್ರಯತ್ನ ಮಾಡಿದ್ದೇಕೆ ಎಂಬ ಪ್ರಶ್ನೆಯನ್ನ ರಶ್ಮಿ ಗೌತಮ್‌ಗೆ ಕೇಳುತ್ತಿದ್ದಾರೆ. ಯಾರನ್ನಾದರೂ ಉದ್ದೇಶಿಸಿ ನಿಮ್ಮ ಮಾತನ್ನ ನೀವು ಹೇಳಬೇಕಿದ್ದರೆ ಅವರ ಹೆಸರನ್ನ ನಮೂದಿಸಿ ಇಲ್ಲದೇ ಇದ್ದರೆ ಗೊಂದಲ ಹೆಚ್ಚಾಗುತ್ತೆ ಎನ್ನುತ್ತಿದ್ದಾರೆ.

Amid the pen drive case did Rashmi Gautam take a dig at Prajwal Revanna

ಅಂದ್ಹಾಗೇ ರಶ್ಮಿ ಗೌತಮ್ ಮೊದಲು ಹೆಸರು ಮಾಡಿದ್ದು ನಿರೂಪಕಿಯಾಗಿ. ಆ ನಂತರ ಬಣ್ಣದ ಲೋಕಕ್ಕೆ ಬಂದ ರಶ್ಮಿ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತೆಲುಗಿಗೆ ಡಬ್ ಆದ ನಂತರ, ರಮ್ಯಾ ಮಾಡಿದ್ದ ಪಾತ್ರವನ್ನ ನಿರ್ವಹಿಸಿದ್ದರು. ಇನ್ನೂ ಇವರ ಮದುವೆಯ ಬಗ್ಗೆ ಅನೇಕರಲ್ಲಿ ಕುತೂಹಲ ಇದೆ. ಇದಕ್ಕೆ ಪೂರಕವಾಗಿ ಕೆಲ ದಿನದ ಹಿಂದೆ ಹಾಸ್ಯನಟ ಸುಡಿಗಾಲಿ ಸುಧೀರ್ ಅವರನ್ನು ರಶ್ಮಿ ಪ್ರೀತಿಸುತ್ತಿದ್ದಾರೆ ಎಂದು ಅನೇಕರು ಮಾತನಾಡಿಕೊಂಡಿದ್ದರು. ಆ ನಂತರ ಅವೆಲ್ಲವೂ ಸುಳ್ಳು, ಮತ್ತು ಅವರಿಬ್ಬರು ಕೇವಲ ಸ್ನೇಹಿತರು, ರಶ್ಮಿ ಗೌತಮ್ ಅಮೆರಿಕಾದ ವ್ಯಕ್ತಿಯೊಬ್ಬನ ಜೊತೆ ಮದುವೆಯಾಗಲಿದ್ದಾರೆ ಎಂದು ಕೂಡ ಸುದ್ದಿಯನ್ನ ಹಬ್ಬಿಸಿದ್ದರು. ನಿಜಕ್ಕೂ ರಶ್ಮಿ ಕೈ ಹಿಡಿಯುವ ಆ ಅದೃಷ್ಟವಂತ ಯಾರು ಅನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆಯಾದರೂ, ಸದ್ಯಕ್ಕೆ ರಶ್ಮಿ ಅವರ ಈ ಫೋಸ್ಟ್ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವುದು ಸುಳ್ಳಲ್ಲ

More from Filmibeat

English summary
Amid the pen drive case, Actress Rashmi Gautam's Remarks seemingly aimed at Prajwal Revanna have sparked a heated discussion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X