»   » 'ಅಮಿಕ್ಕೊಂಡಿರಪ್ಪ' ಅಂತಾವ್ರೆ 'ನಮ್ದುಕೆ' ಹುಡುಗ್ರು

'ಅಮಿಕ್ಕೊಂಡಿರಪ್ಪ' ಅಂತಾವ್ರೆ 'ನಮ್ದುಕೆ' ಹುಡುಗ್ರು

Posted By:
Subscribe to Filmibeat Kannada

ಪ್ರತಿಭೆ ಇದ್ದರು ಅವಕಾಶಗಳು ಸಿಗದೆ ಅದೇಷ್ಟೊ ಕಲಾವಿದರು ಮೂಲೆ ಗುಂಪಾಗಿದ್ದಾರೆ. ಇಂತಹವರ ಮಧ್ಯೆ ಕೆಲವರು ಮಾತ್ರ ತಮ್ಮ ಕಲೆಗೊಂದು ವೇದಿಕೆ ಕಲ್ಪಿಸಿಕೊಂಡರು ಸಾಧಿಸುವತ್ತ ಹೆಜ್ಜೆ ಇಡುತ್ತಾರೆ.

ಹೀಗೆ, ಯುವ ಪ್ರತಿಭೆಗಳೇ ಸೇರಿ ಮಾಡಿರುವ ಕಿರುಚಿತ್ರ 'ಅಮಿಕ್ಕೊಂಡಿರಪ್ಪ-ಅಧಿಕ ಪ್ರಸಂಗಿ'. 'ನಮ್ದು ಕೆ' ಎಂಬ ಹೆಸರಿನಲ್ಲಿ ಪ್ರೊಡಕ್ಷನ್ ತಂಡವನ್ನ ರಚಿಸಿಕೊಂಡು ವೆಬ್ ಸರಣಿ ತಯಾರಿಸುತ್ತಿದ್ದಾರೆ ಪ್ರತಿಭಾನ್ವಿತ ಯುವಕರು.

Amikondirappa Adhika Prasangi Second Episode

'ಅಮಿಕ್ಕೊಂಡಿರಪ್ಪ' ಎಂಬ ಹೆಸರಿನಲ್ಲಿ ವೆಬ್ ಸರಣಿ ನಿರ್ಮಿಸುತ್ತಿದ್ದು, ಇದರ ಮೊದಲ ಭಾಗ 'ಎಫ್ ಬಿ ಪ್ರಸಂಗಿ' ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈಗ 'ಅಮಿಕ್ಕೊಂಡಿರಪ್ಪ' ವೆಬ್ ಸರಣಿಯ ಎರಡನೇ ಸಂಚಿಕೆ 'ಅಧಿಕ ಪ್ರಸಂಗಿ'' ಎಂಬ ಕಿರುಚಿತ್ರವನ್ನ ಪ್ರಸ್ತುತ ಪಡಿಸಿದ್ದು, ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ನಿಮ್ಮನ್ನ ನಗಿಸೋಕೆ ನಮ್ದುಕೆ ತಂಡದಿಂದ fbಪ್ರಸಂಗಿ ವಿಡಿಯೋ

ಅಂದ್ಹಾಗೆ, ಈ ಕಿರುಚಿತ್ರಕ್ಕೆ ಕಥೆ ಬರೆದು, ಸಂಭಾಷಣೆ ರಚಿಸಿರುವುದು ಭಾರದ್ವಾಜ್ ಡಿ.ಜೆ. ಮಾನಸ ಶರ್ಮ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಶ್ರವಣ್ ನಾರಾಯಣ್ ಸಂಕಲನ ಹಾಗೂ ನಿರ್ದೇಶನದ ಜವಾಬ್ದಾರಿಯನ್ನ ನಿಭಾಯಿಸಿದ್ದಾರೆ. ಇನ್ನುಳಿದಂತೆ ಹಂಪಕುಮಾರ್ ಅಂಗಡಿ, ಶ್ರವಣ್ ನಾರಾಯಣ್, ಸಂದೀಪ್ ಟಿಸೀ, ಭಾರದ್ವಾಜ್ ಡಿ.ಜೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

'ಅಮಿಕ್ಕೊಂಡಿರಪ್ಪ-ಅಧಿಕ ಪ್ರಸಂಗಿ' ಕಿರುಚಿತ್ರ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

English summary
Amikondirappa is a Web Series. AdhikaPrasangi is the second episode in the series. Presented by Namdu Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada