For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಎರಡನೇ ಬಾಲಿವುಡ್ ಸಿನಿಮಾ ಆರಂಭ

  |

  ಕನ್ನಡ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲೂ ಬ್ಯುಸಿಯಾಗುವ ಸೂಚನೆ ಸಿಕ್ಕಿದೆ. ಮೊದಲ ಸಿನಿಮಾ ಬಿಡುಗಡೆಗೂ ಮುಂಚೆಯೇ ಎರಡನೇ ಹಿಂದಿ ಚಿತ್ರ ಕೈಗೆತ್ತಿಕೊಂಡಿದ್ದ ನಟಿ ಈಗ ಶೂಟಿಂಗ್ ಆರಂಭಿಸಿದ್ದಾರೆ.

  ಹೌದು, ರಶ್ಮಿಕಾ ಮಂದಣ್ಣ ಮತ್ತು ಅಮಿತಾಭ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಗುಡ್ ಬೈ' ಚಿತ್ರದ ಮುಹೂರ್ತ ಇಂದು ಮುಂಬೈನಲ್ಲಿ ನಡೆದಿದೆ. 'ಗುಡ್ ಬೈ' ಸಿನಿಮಾದ ಪೂಜೆ ಕಾರ್ಯಕ್ರಮದ ಪೋಟೋಗಳನ್ನು ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ಅಮಿತಾಬ್ ಜೊತೆ ರಶ್ಮಿಕಾ ಸಿನಿಮಾ: ಇಷ್ಟೊಂದು ಸಂಭಾವನೆ ಪಡೆದ್ರಾ ಕಿರಿಕ್ ಸುಂದರಿ?ಅಮಿತಾಬ್ ಜೊತೆ ರಶ್ಮಿಕಾ ಸಿನಿಮಾ: ಇಷ್ಟೊಂದು ಸಂಭಾವನೆ ಪಡೆದ್ರಾ ಕಿರಿಕ್ ಸುಂದರಿ?

  ವಿಕಾಸ್ ಭಾಲ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ರಿಲಾಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಬಾಲಾಜಿ ಟೆಲಿಫಿಲಂಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.

  ಇದಕ್ಕೂ ಮುಂಚೆ ಸಿದ್ಧಾರ್ಥ್ ಮಲ್ಹೋತ್ರ ನಟಿಸುತ್ತಿರುವ 'ಮಿಷನ್ ಮಜ್ನು' ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ರಶ್ಮಿಕಾಗೆ ಮೊದಲ ಹಿಂದಿ ಸಿನಿಮಾ. ಈ ಚಿತ್ರದ ಚಿತ್ರೀಕರಣ ಅದಾಗಲೇ ಆರಂಭವಾಗಿದ್ದು, ಮೊದಲ ಹಂತದ ಶೂಟಿಂಗ್‌ನಲ್ಲಿ ನಟಿ ಭಾಗವಹಿಸಿದ್ದರು.

  ಕನ್ನಡ, ತೆಲುಗಿನಲ್ಲಿ ಸಕ್ಸಸ್ ಕಂಡಿದ್ದ ನಟಿ ರಶ್ಮಿಕಾ ಈಗ ತಮಿಳು ಹಾಗೂ ಹಿಂದಿಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರಶ್ಮಿಕಾ ನಟಿಸಿರುವ ಮೊದಲ ತಮಿಳು ಸಿನಿಮಾ ಏಪ್ರಿಲ್ 2 ರಂದು ಬಿಡುಗಡೆಯಾಗಿದೆ.

  Chandan & Kavitha Engaged : ಉಂಗುರ ಬದಲಿಸಿಕೊಂಡ ಚಂದನ್ ಮತ್ತು ಕವಿತಾ ಗೌಡ | Filmibeat Kannada

  ಕಾರ್ತಿ ನಟನೆಯ 'ಸುಲ್ತಾನ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು. ಈ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಇಂದು ತೆರೆಕಂಡಿದೆ.

  ಇನ್ನು ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಶರ್ವಾನಂದ್ ನಟಿಸುತ್ತಿರುವ ಹೊಸ ಪ್ರಾಜೆಕ್ಟ್‌ನಲ್ಲೂ ರಶ್ಮಿಕಾ ನಾಯಕಿಯಾಗಿದ್ದಾರೆ.

  English summary
  Amitabh Bachchan and Rashmika Mandanna starrer GoodBye Movie Shooting Starts Today. Directed by Vikas Bahl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X