ಅಮಿತಾಬ್ ಬಂದ್ರು ಬಗ್ಗಲಿಲ್ಲ ಯಜಮಾನ: ನಾಲ್ಕನೇ ದಿನವೂ ಡಿ-ಬಾಸ್ ಅಬ್ಬರ
Recommended Video

ಕನ್ನಡ ಸಿನಿಮಾಗಳಿಗೆ ಹೋಲಿಸಿಕೊಂಡರೆ, ಹಿಂದಿ ಚಿತ್ರಗಳ ಮಾರುಕಟ್ಟೆ, ಬಜೆಟ್, ಮೇಕಿಂಗ್ ಎಲ್ಲವೂ ದೊಡ್ಡದೇ. ಬಾಲಿವುಡ್ ನ ದೊಡ್ಡ ಸಿನಿಮಾವೊಂದು ಬರ್ತಿದೆ ಅಂದ್ರೆ ಕಲೆಕ್ಷನ್, ಟ್ರೆಂಡಿಂಗ್, ಅದು ಇದು ಅಂತ ಎಲ್ಲ ದಾಖಲೆಗಳನ್ನ ಉಡೀಸ್ ಮಾಡುತ್ತೆ ಎಂಬ ಲೆಕ್ಕಾಚಾರ ನಡೆಯುತ್ತೆ.
ಅದರಲ್ಲೂ ಸಲ್ಮಾನ್ ಖಾನ್, ಶಾರೂಕ್ ಖಾನ್, ಅಮಿತಾಬ್ ಬಚ್ಚನ್ ಅಂತಹ ಸ್ಟಾರ್ ಗಳ ಚಿತ್ರಗಳು ಬಂದ್ರೆ ಸೋಶಿಯಲ್ ಮೀಡಿಯಾದಲ್ಲೇ ಅವರದ್ದೇ ಹವಾ. ಇಂತಹ ಟ್ರೆಂಡ್ ಇರ್ಬೇಕಾದರೇ, ಇದೆಲ್ಲವನ್ನೂ ಉಲ್ಟಾ ಮಾಡಿ ಸತತ ನಾಲ್ಕನೇ ದಿನವೂ ಯೂಟ್ಯೂಬ್ ಗೆ ಅಧಿಪತಿಯಾಗಿದ್ದಾರೆ ಯಜಮಾನ.
ಅಮಿತಾಬ್ ಬಚ್ಚನ್ ಅವರ ಹೊಸ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಎರಡು ದಿನ ಆಗಿದೆ. ಆದ್ರೂ, ಯಜಮಾನರನ್ನ ಹಿಂದಿಕ್ಕಲು ಆಗಲಿಲ್ಲ. ಹಾಗಿದ್ರೆ, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಹೇಗಿದೆ ಕಾಂಪಿಟೇಶನ್? ಮುಂದೆ ಓದಿ.....

ಸತತ ನಾಲ್ಕನೇ ದಿನವೂ ನಂಬರ್ 1
ಫೆಬ್ರವರಿ 10 ರಂದು ಬಿಡುಗಡೆಯಾಗಿದ್ದ ಯಜಮಾನ ಟ್ರೈಲರ್ ನಾಲ್ಕನೇ ದಿನವೂ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಬಹುಶಃ ಸತತ ನಾಲ್ಕು ದಿನವೂ ಕನ್ನಡ ಚಿತ್ರದ ಟ್ರೈಲರ್ ಟಾಪ್ ನಲ್ಲಿರುವುದು ಬಹಳ ಅಪರೂಪ. ಈಗ ಲೇಟೆಸ್ಟ್ ಆಗಿ ಯಜಮಾನ ಈ ದಾಖಲೆ ಮಾಡಿದೆ.

ಮೊದಲ ಸ್ಥಾನಕ್ಕೆ ಬಚ್ಚನ್ ಪೈಪೋಟಿ
ಹಾಗ್ನೋಡಿದ್ರೆ, ಯಜಮಾನ ಚಿತ್ರಕ್ಕಿಂತ ಹೆಚ್ಚು ವೀಕ್ಷಣೆ ಹೊಂದಿರುವ 'ಬದ್ಲಾ' ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಫೆಬ್ರವರಿ 11 ರಂದು ಬದ್ಲಾ ಟ್ರೈಲರ್ ರಿಲೀಸ್ ಆಗಿತ್ತು. 18 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಕನ್ನಡದ ಎರಡನೇ ಸಿನಿಮಾ
ಸದ್ಯದ ಮಟ್ಟಿಗೆ ಅತಿ ಹೆಚ್ಚು ವೀವ್ಸ್ ಪಡೆದಿರುವ ಕನ್ನಡ ಟ್ರೈಲರ್ ಗಳ ಪಟ್ಟಿಯಲ್ಲಿ ಯಜಮಾನ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಇದೆ. ಯಜಮಾನ ಟ್ರೈಲರ್ ವೀಕ್ಷಣೆ ಸಂಖ್ಯೆ 15.8 ಮಿಲಿಯನ್. ಕೆಜಿಎಫ್ ಟ್ರೈಲರ್ ವೀಕ್ಷಣೆ ಸಂಖ್ಯೆ 18 ಮಿಲಿಯನ್.

ಮೂರನೇ ಸ್ಥಾನದಲ್ಲಿ ಪುನೀತ್ ಸಾಂಗ್
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಚಿತಾ ರಾಮ್ ಜೋಡಿಯ ನಟಸಾರ್ವಭೌಮ ಚಿತ್ರದ ಹಾಡು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ರಣ್ವೀರ್ ಸಿಂಗ್ ಅವರ ಗಲ್ಲಿ ಬಾಯ್ ವಿಡಿಯೋ ಇದೆ.


Click it and Unblock the Notifications











