ಅಮಿತಾಭ್ ಬಚ್ಚನ್ ಅಂದು ಹೇಳಿದ್ದ ಮಾತನ್ನ ಚಿರಂಜೀವಿ ಕೇಳಲೇ ಇಲ್ಲ
Recommended Video
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ನಟಿಸಿದ್ದಾರೆ. ಆಂಧ್ರಪ್ರದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರದಲ್ಲಿ ಚಿರು ನಟಿಸಿದ್ದು, ಅವರ ಗುರುಗಳ ಪಾತ್ರದಲ್ಲಿ ಅಮಿತಾಭ್ ನಟಿಸಿದ್ದಾರೆ.
ಅಕ್ಟೋಬರ್-2 ರಂದು 'ಸೈರಾ' ಸಿನಿಮಾ ಐದು ಭಾಷೆಯಲ್ಲಿ ತೆರೆಕಾಣುತ್ತಿದ್ದು ಈಗಾಗಲೇ ಎಲ್ಲ ಭಾಷೆಯಲ್ಲೂ ಪ್ರಮೋಷನ್ ಶುರುವಾಗಿದೆ. ಬಾಲಿವುಡ್ ಮಾಧ್ಯಮವೊಂದರಲ್ಲಿ ಅಮಿತಾಭ್ ಮತ್ತು ಚಿರಂಜೀವಿ ಒಟ್ಟಿಗೆ ಸಂದರ್ಶನ ನೀಡಿದ್ದು, ಈ ಸಂದರ್ಶನದಲ್ಲಿ ಚಿರು ಮಾಡಿದ ತಪ್ಪಿನ ಬಗ್ಗೆ ಬಿಗ್ ಬಿ ಸ್ಮರಿಸಿಕೊಂಡಿದ್ದಾರೆ.
ಚಿರಂಜೀವಿ ಅವರಿಗೆ ಹಲವು ವರ್ಷಗಳ ಹಿಂದೆಯೇ ನಾನೊಂದು ಸಲಹೆ ನೀಡಿದ್ದೆ. ಆದರೆ, ಅವರು ಅದನ್ನ ತೆಗೆದುಕೊಂಡಿಲ್ಲ ಎಂದು ಅಮಿತಾಭ್ ಸಂದರ್ಶನದಲ್ಲಿ ಸ್ಮರಿಸಿಕೊಂಡಿದ್ದಾರೆ.

''ರಾಜಕೀಯಕ್ಕೆ ಹೋಗಬೇಡಿ, ನಾನೊಮ್ಮೆ ರಾಜಕೀಯಕ್ಕೆ ಹೋಗಿ ಅದರಿಂದ ನಾನು ಎಷ್ಟೆಲ್ಲ ಸವಾಲು ಎದುರಿಸಿದ್ದೇನೆ, ಅದರಿಂದ ಕಳೆದುಕೊಂಡಿದ್ದೇನೆ, ಅಂತಹ ಸ್ಥಿತಿ ನಿಮಗೆ ನಿರ್ಮಾಣವಾಗುವುದು ಬೇಡ ಎಂದು ಸಲಹೆ ನೀಡಿದ್ದೆ. ಆದರೆ ಚಿರಂಜೀವಿ ನನ್ನ ಮಾತು ಕೇಳಲಿಲ್ಲ'' ಎಂದು ಹೇಳಿದ್ದಾರೆ.
2008ರಲ್ಲಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಪ್ರಜಾರಾಜ್ಯಂ ಪಕ್ಷ ಸ್ಥಾಪನೆ ಮಾಡಿದ್ದ ಚಿರಂಜೀವಿ 2009ರ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಿದ್ದರು. ತಿರುಪತಿಯಲ್ಲಿ ಗೆದ್ದರು, ಪಾಲಕೊಲ್ಲು ಕ್ಷೇತ್ರದಲ್ಲಿ ಸೋಲು ಕಂಡರು.


Click it and Unblock the Notifications











