For Quick Alerts
  ALLOW NOTIFICATIONS  
  For Daily Alerts

  ಅಮಿತಾಭ್ ಬಚ್ಚನ್ ಅಂದು ಹೇಳಿದ್ದ ಮಾತನ್ನ ಚಿರಂಜೀವಿ ಕೇಳಲೇ ಇಲ್ಲ

  |
  ಅಮಿತಾಭ್ ಬಚ್ಚನ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ | Amithab Bhachchan | FILMIBEAT KANNADA

  ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ನಟಿಸಿದ್ದಾರೆ. ಆಂಧ್ರಪ್ರದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರದಲ್ಲಿ ಚಿರು ನಟಿಸಿದ್ದು, ಅವರ ಗುರುಗಳ ಪಾತ್ರದಲ್ಲಿ ಅಮಿತಾಭ್ ನಟಿಸಿದ್ದಾರೆ.

  ಅಕ್ಟೋಬರ್-2 ರಂದು 'ಸೈರಾ' ಸಿನಿಮಾ ಐದು ಭಾಷೆಯಲ್ಲಿ ತೆರೆಕಾಣುತ್ತಿದ್ದು ಈಗಾಗಲೇ ಎಲ್ಲ ಭಾಷೆಯಲ್ಲೂ ಪ್ರಮೋಷನ್ ಶುರುವಾಗಿದೆ. ಬಾಲಿವುಡ್ ಮಾಧ್ಯಮವೊಂದರಲ್ಲಿ ಅಮಿತಾಭ್ ಮತ್ತು ಚಿರಂಜೀವಿ ಒಟ್ಟಿಗೆ ಸಂದರ್ಶನ ನೀಡಿದ್ದು, ಈ ಸಂದರ್ಶನದಲ್ಲಿ ಚಿರು ಮಾಡಿದ ತಪ್ಪಿನ ಬಗ್ಗೆ ಬಿಗ್ ಬಿ ಸ್ಮರಿಸಿಕೊಂಡಿದ್ದಾರೆ.

  ಚಿರಂಜೀವಿ ಅವರಿಗೆ ಹಲವು ವರ್ಷಗಳ ಹಿಂದೆಯೇ ನಾನೊಂದು ಸಲಹೆ ನೀಡಿದ್ದೆ. ಆದರೆ, ಅವರು ಅದನ್ನ ತೆಗೆದುಕೊಂಡಿಲ್ಲ ಎಂದು ಅಮಿತಾಭ್ ಸಂದರ್ಶನದಲ್ಲಿ ಸ್ಮರಿಸಿಕೊಂಡಿದ್ದಾರೆ.

  'ಮಾಡಿದ ತಪ್ಪು ಅರಿವಾಯಿತು': ರಜನಿ, ಕಮಲ್ ಆ ತಪ್ಪು ಮಾಡುವುದು ಬೇಡ'ಮಾಡಿದ ತಪ್ಪು ಅರಿವಾಯಿತು': ರಜನಿ, ಕಮಲ್ ಆ ತಪ್ಪು ಮಾಡುವುದು ಬೇಡ

  ''ರಾಜಕೀಯಕ್ಕೆ ಹೋಗಬೇಡಿ, ನಾನೊಮ್ಮೆ ರಾಜಕೀಯಕ್ಕೆ ಹೋಗಿ ಅದರಿಂದ ನಾನು ಎಷ್ಟೆಲ್ಲ ಸವಾಲು ಎದುರಿಸಿದ್ದೇನೆ, ಅದರಿಂದ ಕಳೆದುಕೊಂಡಿದ್ದೇನೆ, ಅಂತಹ ಸ್ಥಿತಿ ನಿಮಗೆ ನಿರ್ಮಾಣವಾಗುವುದು ಬೇಡ ಎಂದು ಸಲಹೆ ನೀಡಿದ್ದೆ. ಆದರೆ ಚಿರಂಜೀವಿ ನನ್ನ ಮಾತು ಕೇಳಲಿಲ್ಲ'' ಎಂದು ಹೇಳಿದ್ದಾರೆ.

  ಅಮಿತ್ ಶಾ-ಮೋದಿ ಅವರನ್ನ ರಜನಿಕಾಂತ್ ಹೋಲಿಸಿದ್ದು ಯಾರಿಗೆ?ಅಮಿತ್ ಶಾ-ಮೋದಿ ಅವರನ್ನ ರಜನಿಕಾಂತ್ ಹೋಲಿಸಿದ್ದು ಯಾರಿಗೆ?

  2008ರಲ್ಲಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಪ್ರಜಾರಾಜ್ಯಂ ಪಕ್ಷ ಸ್ಥಾಪನೆ ಮಾಡಿದ್ದ ಚಿರಂಜೀವಿ 2009ರ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಿದ್ದರು. ತಿರುಪತಿಯಲ್ಲಿ ಗೆದ್ದರು, ಪಾಲಕೊಲ್ಲು ಕ್ಷೇತ್ರದಲ್ಲಿ ಸೋಲು ಕಂಡರು.

  English summary
  Bollywood Superstar Amitabh Bachchan Comment On Chiranejeevi Politics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X