»   » ಅಂದು ಕಿಚ್ಚ ಸುದೀಪ್ ಮಾಡಿದ್ದನ್ನು ಇಂದು ಬಚ್ಚನ್ ಮಾಡಿದರು

ಅಂದು ಕಿಚ್ಚ ಸುದೀಪ್ ಮಾಡಿದ್ದನ್ನು ಇಂದು ಬಚ್ಚನ್ ಮಾಡಿದರು

Posted By:
Subscribe to Filmibeat Kannada

ತಿಂಗಳುಗಳ ಹಿಂದೆಯಷ್ಟೇ, ತಾವು ಇನ್ನು ಮುಂದೆ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ ಅಂತ ನಟ ಕಿಚ್ಚ ಸುದೀಪ್ ಹೇಳಿದ್ದರು. ಈಗ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬಾಯಿಂದ ಕೂಡ ಇದೇ ಮಾತು ಹೊರಬಂದಿದೆ.

ಮತ್ತೆ ಸುದ್ದಿಯಾದ ಅಮಿತಾಬ್ ಬಚ್ಚನ್ ಮೊಮ್ಮಗಳು, ಯಾಕೆ?

ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ಅಮಿತಾಬ್ ಬಚ್ಚನ್ ನಿರ್ಧಾರ ಮಾಡಿದ್ದಾರೆ.

Amitabh Bachchan decided to not to celebrate his birthday this year

ಅಕ್ಟೋಬರ್ 11ರಂದು ಅಮಿತಾಬ್ ಬಚ್ಚನ್ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಮತ್ತು ಕುಟುಂಬದವರು ಅದ್ಧೂರಿಯಾಗಿ ಬರ್ತಡೇ ಆಚರಿಸಲು ತಯಾರಿ ನಡೆಸಿದ್ದರು. ಆದರೆ ಬಿಗ್ ಬಿ ಮಾತ್ರ ತಮ್ಮ ಹುಟ್ಟುಹಬ್ಬದ ಆಚರಣೆ ಬೇಡ ಎಂದಿದ್ದಾರೆ.

Amitabh Bachchan decided to not to celebrate his birthday this year

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಬಚ್ಚನ್ ಅಭಿಮಾನಿಗಳಿಗೆ ತಿಳಿಸಿದ್ದು, ''ನನ್ನ 75ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಸುದ್ದಿ ಸುಳ್ಳು. ಯಾರಾದರೂ ನನ್ನ ಹುಟ್ಟುಹಬ್ಬ ಆಚರಣೆಯ ತಯಾರಿಯಲ್ಲಿ ಇದ್ದರೆ, ಅದನ್ನು ಕೈ ಬಿಡಿ'' ಅಂತ ಹೇಳಿದ್ದಾರೆ.

English summary
Bollywood Actor Amitabh Bachchan has decided to not to celebrate his birthday this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada