For Quick Alerts
  ALLOW NOTIFICATIONS  
  For Daily Alerts

  ಕೇರಳ ಸಂತ್ರಸ್ಥರಿಗೆ ದೊಡ್ಡ ಸಹಾಯ ಮಾಡಿದ ಅಮಿತಾಬ್ ಬಚ್ಚನ್

  By Bharath Kumar
  |

  ಕೇರಳದಲ್ಲಿ ಪ್ರವಾಹ ಉಂಟಾಗಿ ಜನರ ಜೀವನ ಬೀದಿಗೆ ಬಂದಿದ್ದರೂ, ಬಾಲಿವುಡ್ ಸೂಪರ್ ಸ್ಟಾರ್ ಗಳು ಎಂದುಕೊಂಡ ಕೆಲವರು ಯಾವುದೇ ರೀತಿಯ ನೆರವು ನೀಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಕಿಡಿಕಾರಿದ್ದರು.

  ಅದರಲ್ಲೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನ ಟಾರ್ಗೆಟ್ ಮಾಡಿ ಕೆಲವರು ತಮ್ಮ ಆಕ್ರೋಶವನ್ನ ಹೊರಹಾಕಿದ್ದರು. ಮೊದ ಮೊದಲು ಕೇವಲ ಟ್ವೀಟ್ ಮೂಲಕ ಕೇರಳಿಗರಿಗೆ ಸಾಂತ್ವನ ಹೇಳಿ ಸುಮ್ಮನಾಗಿದ್ದ ಬಿಗ್ ಬಿ ಈಗ ದೊಡ್ಡ ಮೊತ್ತವನ್ನ ನೀಡುವ ಮೂಲಕ ನೆರವಾಗಿದ್ದಾರೆ.

  ಹೌದು, ಕೇರಳ ಸಂತ್ರಸ್ಥರ ಪರಿಹಾರ ನಿಧಿಗೆ ಅಮಿತಾಬ್ ಬಚ್ಚನ್ 51 ಲಕ್ಷ ರೂಪಾಯಿ ನೀಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

  ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!

  ಕೇವಲ 51 ಲಕ್ಷ ಹಣಮಾತ್ರವಲ್ಲ, ಅಗತ್ಯವಸ್ತುಗಳು ಹಾಗೂ ಬಟ್ಟೆಗಳನ್ನ ಕೂಡ ಕಳುಹಿಸಿದ್ದಾರಂತೆ. 80 ಜಾಕೆಟ್, 25 ಪ್ಯಾಂಟ್, 20 ಶರ್ಟ್, 40 ಜೋಡಿಯ ಶೂಗಳು, ಹಾಗೂ ಇತರೆ ಆಹಾರ ಸಾಮಾಗ್ರಿಗಳನ್ನ ಬಿಗ್ ಬಿ ಕೇರಳ ಸಂತ್ರಸ್ಥರಿಗಾಗಿ ನೀಡಿದ್ದಾರೆ ಎನ್ನಲಾಗಿದೆ.

  ತಮಿಳು ನಟ ವಿಜಯ್ ಕೇರಳಗೆ ಕೊಟ್ಟಿದ್ದು 14 ಕೋಟಿಯಲ್ಲ.! ಮತ್ತೆಷ್ಟು.?

  ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ 1 ಕೋಟಿ ನೀಡುವ ಮೂಲಕ ತಮ್ಮ ಸಹಾಯ ನೀಡಿದ್ದರು. ಇನ್ನು ಶಾರೂಖ್ ಖಾನ್ ಅಭಿಮಾನಿಗಳು ಕೇರಳ ಜನತೆಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದಾರೆ.

  ಇವರ ಜೊತೆ ಆಲಿಯಾ ಭಟ್, ವಿದ್ಯಾ ಬಾಲನ್, ಅಭಿಷೇಕ್ ಬಚ್ಚನ್, ರಣ್ಬೀರ್ ಕಪೂರ್, ರಿಷಿ ಕಪೂರ್ ಸೇರಿದಂತೆ ಹಲವರು ಕೇರಳಗೆ ನೆರವು ನೀಡಿದ್ದಾರೆ ಎನ್ನಲಾಗಿದೆ.

  English summary
  Bollywood actor Amitabh Bachchan is among the many celebrities who have made an effort to rehabilitate people affected in flood-hit Kerala. The 75-year-old actor contributed Rs. 51 lakh to the Chief Minister's Relief Fund.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X