ಅಮಿತಾಭ್ ಬಚ್ಚನ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Recommended Video

ಅಮಿತಾಭ್ ಬಚ್ಚನ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ | Amithab Bhachchan | FILMIBEAT KANNADA

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜವಡೇಕರ್ ಅವರು ಟ್ವಿಟ್ಟರ್ ಮೂಲಕ ಈ ವಿಷಯ ಪ್ರಕಟ ಮಾಡಿದ್ದು, ಅಮಿತಾಭ್ ಬಚ್ಚನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಸುಮಾರು ನಾಲ್ಕು ದಶಕಗಳ ಕಾಲ ಭಾರತೀಯ ಚಿತ್ರರಂಗಕ್ಕೆ ಅಮಿತಾಭ್ ಬಚ್ಚನ್ ನೀಡಿರುವ ಕೊಡುಗೆಯನ್ನ ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ. ಬಿಗ್-ಬಿ ಅವರಿಗೆ ಈಗಾಗಲೇ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದೆ. ಈಗ ದಾದಾ ಸಾಹೇಬ್ ಫಾಲ್ಕೆ ಕೂಡ ಅವರ ಮುಡಿಗೇರಿದೆ.

1961ರಲ್ಲಿ 'ಸಾಥ್ ಹಿಂದೂಸ್ತಾನಿ' ಚಿತ್ರದಲ್ಲಿ ನಟಿಸುವ ಮೂಲಕ ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ಬೆಳ್ಳಿತೆರೆ ಪ್ರವೇಶ ಮಾಡಿದರು. ಅಲ್ಲಿಂದ ಆರಂಭವಾದ ಸಿನಿಜರ್ನಿ ನಾಲ್ಕು ದಶಕಗಳ ಕಾಲ ಮುಂದುವರಿದಿದೆ. ಹತ್ತಾರು ಪಾತ್ರಗಳು, ಹತ್ತಾರು ಕಥೆಗಳು, ಹತ್ತಾರು ಗೆಟಪ್ ಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದಾರೆ.

Amitabh Bachchan Got Dada Sahab Phalke Award

76ನೇ ವಯಸ್ಸಿನಲ್ಲಿ ವಿಭಿನ್ನ ಪಾತ್ರಗಳನ್ನ ಮಾಡುತ್ತಾ ಈಗಲೂ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಹಿಂದಿ ಚಿತ್ರರಂಗದ ದಂತಕಥೆಯಾಗಿರುವ ಬಿಗ್ ಬಿ ಅವರಿಗೆ ಇದುವೆರಗೂ ನಾಲ್ಕು ರಾಷ್ಟ್ರ ಪ್ರಶಸ್ತಿ (ಅಗ್ನಿಪತ್, ಪೀಕು, ಪಾ, ಬ್ಲಾಕ್ ಚಿತ್ರಗಳಿಗೆ) ಲಭಿಸಿದೆ.

ಚಿತ್ರರಂಗದಲ್ಲಿ ಅತ್ಯುನ್ನತ ಗೌರವ ಇದಾಗಿದ್ದು, ಕಳೆದ ವರ್ಷ ದಿವಂಗತ ನಟ ವಿನೋದ್ ಖನ್ನಾ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿತ್ತು. ಈ ವರ್ಷ ಲೋಕಸಭೆ ಚುನಾವಣೆ ನಡೆದ ಕಾರಣ ಸ್ವಲ್ಪ ತಡವಾಯಿತು.

2019ನೇ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ ಬದ್ಲಾ ಚಿತ್ರದಲ್ಲಿ ಅಮಿತಾಭ್ ಕೊನೆಯದಾಗಿ ನಟಿಸಿದ್ದರು. ಸದ್ಯ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಅದರ ಜೊತೆಗೆ ಸಾಕಷ್ಟು ದೊಡ್ಡ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಕೌನ್ ಬನೆಗಾ ಕರೋಡ್ ಪತಿ ಶೋ ನಿರೂಪಣೆ ಮಾಡುತ್ತಿದ್ದಾರೆ.

ಗಮನಕ್ಕೆ: ಇದು ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ಗೌರವ. ಈ ಹಿಂದೆ ಕನ್ನಡದಲ್ಲಿ ಡಾ ರಾಜ್ ಕುಮಾರ್ ಅವರಿಗೆ (1995ರಲ್ಲಿ) ಈ ಪ್ರಶಸ್ತಿ ಸಿಕ್ಕಿದೆ.

More from Filmibeat

English summary
Amitabh Bachchan has been selected for the Dada Sahab Phalke award, as announced by the Indian Union Minister of Information & Broadcasting, Prakash Javadekar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X