ಸೈರಾ ಸಿನಿಮಾದಲ್ಲಿ ಅಮಿತಾಭ್ ನಟಿಸಲು ಒಪ್ಪಿಸಿದ್ದು ಯಾರು?
Recommended Video
ಮೆಗಾಸ್ಟಾರ್ ಎಂದರೇ ಸೌತ್ ಇಂಡಸ್ಟ್ರಿಯಲ್ಲಿ ಥಟ್ ಅಂತ ನೆನಪಾಗುವುದು ಚಿರಂಜೀವಿ. ಅದೇ ರೀತಿ ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅವರನ್ನ ಮೆಗಾಸ್ಟಾರ್ ಎಂದು ಕರೆಯುತ್ತಾರೆ.
ಇಬ್ಬರು ಮೆಗಾಸ್ಟಾರ್ ಒಂದೇ ಸಿನಿಮಾದಲ್ಲಿ ನಟಿಸಿದರೆ ಹೇಗಿರುತ್ತೆ? ಅದು ಈಗ ಸಾಧ್ಯವಾಗಿದೆ. ಹೌದು, ಪಂಚ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ಚಿರಂಜೀವಿ ಒಟ್ಟಿಗೆ ನಟಿಸಿದ್ದಾರೆ.
ತೆಲುಗು ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಸೈರಾ ನರಸಿಂಹ ರೆಡ್ಡಿ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದರೇ, ಅಮಿತಾಭ್ ಅವರ ಗುರುಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇಂದು ಸೈರಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮುಂಬೈನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಬಿಗ್-ಬಿ ಬಗ್ಗೆ ಮಾತನಾಡಿದ ಚಿರಂಜೀವಿ ''ಭಾರತ ಇಂಡಸ್ಟ್ರಿಗೆ ಅಮಿತಾಭ್ ಬಚ್ಚನ್ ಅವರೊಬ್ಬರೇ ಮೆಗಾಸ್ಟಾರ್. ಅವರು ನನ್ನ ನಿಜ ಜೀವನದಲ್ಲೂ ಮೆಂಟರ್. ಸಿನಿಮಾದಲ್ಲೂ ಅದೇ ಪಾತ್ರ ಮಾಡಿದ್ದಾರೆ'' ಎಂದು ತಿಳಿಸಿದರು.
''ಸಿನಿಮಾ ಸ್ಕ್ರಿಪ್ಟ್ ಮಾಡುವಾಗ ನಿರ್ದೇಶಕರು ನನ್ನ ಬಳಿ ಗುರು ಪಾತ್ರಕ್ಕೆ ಅಮಿತಾಭ್ ಇದ್ದರೆ ಸೂಕ್ತ ಎಂದ ಕೇಳಿದರು. ಸರಿ ಪ್ರಯತ್ನ ಮಾಡೋಣ ಎಂದು ಫೋನ್ ಮಾಡಿದೆ. ಹೀಗೆ, ಸೈರಾ ಎಂಬ ಸಿನಿಮಾ, ಅದ್ಭುತ ಪ್ರಾಜೆಕ್ಟ್, ನನ್ನ ಗುರು ಪಾತ್ರ, ತುಂಬಾ ವಿಶೇಷವಾಗಿ, ನೀವು ಮಾಡಿದ್ರೆ ಚೆನ್ನಾಗಿರುತ್ತೆ ಎಂದು ಕೇಳಿದೆ. ಅದಕ್ಕೆ ಅವರು ಒಂದೇ ಮಾತಿನಲ್ಲಿ ಓಕೆ ಎಂದರು'' ಎಂದು ಚಿರು ಹೇಳಿದರು.
ಇನ್ನುಳಿದಂತೆ ರಾಮ್ ಚರಣ್ ತೇಜ ಈ ಚಿತ್ರವನ್ನ ನಿರ್ಮಿಸಿದ್ದು, ಚಿರಂಜೀವಿ, ಅಮಿತಾಭ್ ಬಚ್ಚನ್, ವಿಜಯ್ ಸೇತುಪತಿ, ಸುದೀಪ್, ನಯನತಾರ, ತಮನ್ನಾ, ರವಿ ಕಿಶನ್ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿದೆ. ಅಕ್ಟೋಬರ್ 2 ರಂದು ಐದು ಭಾಷೆಗಳಲ್ಲೂ ಸಿನಿಮಾ ತೆರೆಕಾಣಲಿದೆ.


Click it and Unblock the Notifications











