'ಏಕೈಕ ಮೆಗಾ ಸ್ಟಾರ್ ಅಂದ್ರೆ ಅದು ಅಮಿತಾಭ್ ಬಚ್ಚನ್' - ಚಿರಂಜೀವಿ
Recommended Video
''ಅಮಿತಾಭ್ ಬಚ್ಚನ್ ಏಕೈಕ ಮೆಗಾ ಸ್ಟಾರ್'' ಎಂದು ಟಾಲಿವುಡ್ ನಟ ಚಿರಂಜೀವಿ ಹೇಳಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಇಂದು (ಆಗಸ್ಟ್ 20) ಮುಂಬೈನಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಅಮಿತಾಭ್ ಬಗ್ಗೆ ಚಿರಂಜೀವಿ ಸಂತಸ ವ್ಯಕ್ತ ಪಡಿಸಿದ್ದಾರೆ.
'ಸೈರಾ ನರಸಿಂಹ ರೆಡ್ಡಿ' ಚಿರಂಜೀವಿ ಅವರ 151ನೇ ಸಿನಿಮಾವಾಗಿದೆ. ಈ ಸಿನಿಮಾದ ಒಂದು ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದಾರೆ. ಅಮಿತಾಭ್ ಜೊತೆಗೆ ತೆರೆ ಹಂಚಿಕೊಂಡಿದ್ದು, ಖುಷಿಯ ವಿಷಯ ಎಂದು ಚಿರಂಜೀವಿ ಹೇಳಿದ್ದಾರೆ.
''ಅಮಿತಾಭ್ ಬಚ್ಚನ್ ನನ್ನ ಜೀವನದ ಮೆಂಟರ್. ನನ್ನ ಪ್ರಕಾರ ಇರುವುದು ಒಬ್ಬರೇ ಮೆಗಾ ಸ್ಟಾರ್, ಅದು ಅಮಿತಾಭ್ ಬಚ್ಚನ್. ಅವರ ಜೊತೆಗೆ ಸಿನಿಮಾ ಮಾಡುವುದು ಅಧ್ಬುತ ಅನುಭವ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ.'' ಎಂದು ಚಿರಂಜೀವಿ ಮಾತನಾಡಿದ್ದಾರೆ. ಟಾಲಿವುಡ್ ನ ಮೆಗಾಸ್ಟಾರ್ ಆಗಿರುವ ಚಿರಂಜೀವಿ, ಬಚ್ಚನ್ ರಿಗೆ ಮೆಗಾಸ್ಟಾರ್ ಎಂದಿದ್ದಾರೆ.

'ಸೈರಾ ನರಸಿಂಹ ರೆಡ್ಡಿ' ಸ್ವಾತಂತ್ರ್ಯ ಪೂರ್ವ ಕಥೆ ಹೊಂದಿದೆ. 1857 ರ ವೇಳೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸೈರಾ ನರಸಿಂಹ ರೆಡ್ಡಿ ಹೋರಾಟದ ಕಥೆ ಇಲ್ಲಿದೆ. ಈ ಕಥೆ ಎಲ್ಲರಿಗೂ ತಲುಪಬೇಕು ಎಂದು ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡುತ್ತಿದ್ದಾರಂತೆ.

ಅಂದಹಾಗೆ, ಚಿತ್ರದಲ್ಲಿ ನಟ ಸುದೀಪ್, ವಿಜಯ್ ಸೇತುಪತಿ, ನಯನ ತಾರಾ, ತಮನ್ನಾ ಭಾಟಿಯಾ, ಜಗಪತಿ ಬಾಬು, ರವಿ ಕೃಷ್ಣ ನಟಿಸಿದ್ದಾರೆ.


Click it and Unblock the Notifications











