twitter
    For Quick Alerts
    ALLOW NOTIFICATIONS  
    For Daily Alerts

    'ಏಕೈಕ ಮೆಗಾ ಸ್ಟಾರ್ ಅಂದ್ರೆ ಅದು ಅಮಿತಾಭ್ ಬಚ್ಚನ್' - ಚಿರಂಜೀವಿ

    |

    Recommended Video

    Sye Raa Narasimha Reddy Movie: ದಾಖಲೆ ಮೊತ್ತಕ್ಕೆ ಮಾರಾಟವಾದ 'ಸೈರಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕು

    ''ಅಮಿತಾಭ್ ಬಚ್ಚನ್ ಏಕೈಕ ಮೆಗಾ ಸ್ಟಾರ್'' ಎಂದು ಟಾಲಿವುಡ್ ನಟ ಚಿರಂಜೀವಿ ಹೇಳಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಇಂದು (ಆಗಸ್ಟ್ 20) ಮುಂಬೈನಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಅಮಿತಾಭ್ ಬಗ್ಗೆ ಚಿರಂಜೀವಿ ಸಂತಸ ವ್ಯಕ್ತ ಪಡಿಸಿದ್ದಾರೆ.

    'ಸೈರಾ ನರಸಿಂಹ ರೆಡ್ಡಿ' ಚಿರಂಜೀವಿ ಅವರ 151ನೇ ಸಿನಿಮಾವಾಗಿದೆ. ಈ ಸಿನಿಮಾದ ಒಂದು ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದಾರೆ. ಅಮಿತಾಭ್ ಜೊತೆಗೆ ತೆರೆ ಹಂಚಿಕೊಂಡಿದ್ದು, ಖುಷಿಯ ವಿಷಯ ಎಂದು ಚಿರಂಜೀವಿ ಹೇಳಿದ್ದಾರೆ.

    ಮತ್ತೊಮ್ಮೆ ವಿಭಿನ್ನ ಗೆಟಪ್ ನಲ್ಲಿ ಅಮಿತಾಭ್ ಬಚ್ಚನ್ ದರ್ಶನ ಮತ್ತೊಮ್ಮೆ ವಿಭಿನ್ನ ಗೆಟಪ್ ನಲ್ಲಿ ಅಮಿತಾಭ್ ಬಚ್ಚನ್ ದರ್ಶನ

    ''ಅಮಿತಾಭ್ ಬಚ್ಚನ್ ನನ್ನ ಜೀವನದ ಮೆಂಟರ್. ನನ್ನ ಪ್ರಕಾರ ಇರುವುದು ಒಬ್ಬರೇ ಮೆಗಾ ಸ್ಟಾರ್, ಅದು ಅಮಿತಾಭ್ ಬಚ್ಚನ್. ಅವರ ಜೊತೆಗೆ ಸಿನಿಮಾ ಮಾಡುವುದು ಅಧ್ಬುತ ಅನುಭವ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ.'' ಎಂದು ಚಿರಂಜೀವಿ ಮಾತನಾಡಿದ್ದಾರೆ. ಟಾಲಿವುಡ್ ನ ಮೆಗಾಸ್ಟಾರ್ ಆಗಿರುವ ಚಿರಂಜೀವಿ, ಬಚ್ಚನ್ ರಿಗೆ ಮೆಗಾಸ್ಟಾರ್ ಎಂದಿದ್ದಾರೆ.

    Amitabh Bachchan Is The Only Megastar Says Chiranjeevi

    'ಸೈರಾ ನರಸಿಂಹ ರೆಡ್ಡಿ' ಸ್ವಾತಂತ್ರ್ಯ ಪೂರ್ವ ಕಥೆ ಹೊಂದಿದೆ. 1857 ರ ವೇಳೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸೈರಾ ನರಸಿಂಹ ರೆಡ್ಡಿ ಹೋರಾಟದ ಕಥೆ ಇಲ್ಲಿದೆ. ಈ ಕಥೆ ಎಲ್ಲರಿಗೂ ತಲುಪಬೇಕು ಎಂದು ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡುತ್ತಿದ್ದಾರಂತೆ.

    Amitabh Bachchan Is The Only Megastar Says Chiranjeevi

    'ಸೈರಾ' ಸಿನಿಮಾದಲ್ಲಿ ಸುದೀಪ್ ಹೆಸರಿನ ಜೊತೆಯಿರುವ ಬಿರುದು ಏನು?'ಸೈರಾ' ಸಿನಿಮಾದಲ್ಲಿ ಸುದೀಪ್ ಹೆಸರಿನ ಜೊತೆಯಿರುವ ಬಿರುದು ಏನು?

    ಅಂದಹಾಗೆ, ಚಿತ್ರದಲ್ಲಿ ನಟ ಸುದೀಪ್, ವಿಜಯ್ ಸೇತುಪತಿ, ನಯನ ತಾರಾ, ತಮನ್ನಾ ಭಾಟಿಯಾ, ಜಗಪತಿ ಬಾಬು, ರವಿ ಕೃಷ್ಣ ನಟಿಸಿದ್ದಾರೆ.

    English summary
    Amitabh Bachchan is the only Megastar says Tollywood megastar Chiranjeevi.
    Tuesday, August 20, 2019, 18:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X