ದಕ್ಷಿಣ ಭಾರತದ ದೊಡ್ಡ ಚಿತ್ರಕ್ಕಾಗಿ ಅಮಿತಾಬ್ ಗೆಟಪ್ ನೋಡಿ
Recommended Video

ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ತೆಲುಗಿನ ಬಹುಕೋಟಿ ವೆಚ್ಚದ ಸಿನಿಮಾ ಆರಂಭವಾಗಿದೆ. ಸ್ವತಂತ್ರ ಹೋರಾಟಗಾರರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಜೀವನ ಆಧರಿತ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಸಿನಿರಂಗದ ದೊಡ್ಡ ದೊಡ್ಡ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.
ಇದೀಗ, ಚಿರಂಜೀವಿ ಮತ್ತು ಅಮಿತಾಬ್ ಬಚ್ಚನ್ ಅವರ ಲುಕ್ ಬಹಿರಂಗವಾಗಿದೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಬಿಗ್ ಬಿ ಅಮಿತಾಬ್, ಚಿರಂಜೀವಿ ಅವರ ಗುರುಗಳ ಪಾತ್ರವನ್ನ ನಿಭಾಯಿಸುತ್ತಿದ್ದಾರೆ.
'ನೀರವ್' ಎಂಬ ಪಾತ್ರದಲ್ಲಿ ಅಮಿತಾಬ್ ಬಣ್ಣ ಹಚ್ಚಿದ್ದು, ಅವರ ಲುಕ್ ಈಗ ಗಮನ ಸೆಳೆಯುತ್ತಿದೆ. ಈ ಫೋಟೋಗಳನ್ನ ಸ್ವತಃ ಅಮಿತಾಬ್ ಬಚ್ಚನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ''ಚಿರಂಜೀವಿ ಜೊತೆಯಲ್ಲಿ ಅಭಿನಯಿಸುವುದು ಗೌರವ ತಂದಿದೆ'' ಎಂದಿದ್ದಾರೆ.

ರಾಮ್ ಚರಣ್ ತೇಜ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ನಯನತಾರ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಕನ್ನಡದ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಜಗಪತಿ ಬಾಬು ಕೂಡ ವಿಶೇಷ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ, ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಇದೇ ವರ್ಷ ತೆರೆಗೆ ಬರುವ ಯೋಚನೆಯಲ್ಲಿದೆ.


Click it and Unblock the Notifications











