ರಾಮ್ ಚರಣ್ ನಿಶ್ಚಿತಾರ್ಥಕ್ಕೆ ಬಾಲಿವುಡ್ ಬಿಗ್ ಬಿ
ತೆಲುಗು ಚಿತ್ರರಂಗದ ಉದಯೋನ್ಮುಖ ಸ್ಟಾರ್ ರಾಮ್ ಚರಣ್ ತೇಜ ಮದುವೆ ಫಿಕ್ಸ್ ಆಗಿದೆ. ಬರುವ ಡಿಸೆಂಬರ್ 1 ರಂದು ಭಾವಿ ವಧು ಉಪಾಸನಾ ಕಾಮಿನೇನಿ ಹಾಗೂ ರಾಮ್ ಚರಣ್ ಮಧ್ಯೆ 'ಎಂಗೇಜ್ ಮೆಂಟ್' ನಡೆಯಲಿದೆ. ಈ 'ನಿಶ್ಚಿತಾರ್ಥ' ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಬಿಗ್ ಬಿ ಅಮಿತಾಬ್ ಗೆ ಆಹ್ವಾನ ನೀಡಿದ್ದಾರೆ.
ತಮ್ಮ ಮಗ ರಾಮ್ ಮದುವೆಯನ್ನು ಸಾಕಷ್ಟು ಅದ್ಧೂರಿಯಾಗಿ ನೆರವೇರಿಸಲು ನಿಶ್ಚಯಿಸಿರುವ ಅವರಪ್ಪ ಚಿರಂಜೀವಿ, ಅಮಿತಾಬ್ ಗೆ ನೀಡಿರುವ ಆಹ್ವಾನದಲ್ಲಿ "ಪ್ರೀತಿಯಿಂದ ರಾಮ್ ತಾತನಾಗಿ ಬಂದು ಆಶೀರ್ವಾದ ಮಾಡಿ" ಎಂದಿದ್ದಾರೆ. ಈಗಷ್ಟೇ ಮೊಮ್ಮಗಳ ಬರುವಿಕೆಯಿಂದ ಖುಷಿಯಾಗಿರುವ ಅಮಿತಾಬ್, ಈ ಆಹ್ವಾನವನ್ನು ಸ್ವೀಕರಿಸಿ ಬಂದು ಆಶೀರ್ವದಿಸುವ ಭರವಸೆ ನೀಡಿದ್ದಾರೆ.
ಈ ಮೊದಲೂ ಕೂಡ ಮೆಗಾಸ್ಟಾರ್ ಚೀರಂಜೀವಿ ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಮಧ್ಯೆ ಸಾಕಷ್ಟು ಅನ್ಯೋನ್ಯತೆ ಇತ್ತು. ಬುಡ್ಡಾ ಹೋಗಾ ತೇರಾ ಬಾಪ್ ಬಿಡುಗಡೆ ಸಮಾರಂಭ ಹಾಗೂ ಚಿರು ರಾಜಕೀಯ ಪಕ್ಷ 'ಪ್ರಜಾರಾಜ್ಯಂ' ಉದ್ಘಾಟನೆ ಮುಂತಾದವುಗಳಿಗೆ ಬಚ್ಚನ್ ದಂಪತಿ ಆಗಮನವಾಗಿತ್ತು. ಇದೀಗ ಮಗನ ಮದುವೆಗೆ ಆಹ್ವಾನಸಿರುವ ಚಿರುಗೆ ಖಂಡಿತ ನಿರಾಸೆ ಆಗಲಾರದು. (ಏಜೆನ್ಸೀಸ್)


Click it and Unblock the Notifications











