twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಪತ್ರೆಯಲ್ಲಿರುವ ಅಮಿತಾಬ್ ಬಚ್ಚನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ

    |

    ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಗ್ಗೆ ಆಗಾಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಸಿನಿಮಾ ಮಂದಿಯ ಸುಳ್ಳು ಸುದ್ದಿಗಳು ಬಾಲಿವುಡ್‌ನಲ್ಲಿ ತುಸು ಹೆಚ್ಚೇ. ಕೊರೊನಾ ಪೀಡಿತರಾಗಿರುವ ಅಮಿತಾಬ್ ಬಗ್ಗೆ ಈಗೊಂದು ಸುಳ್ಳು ಸುದ್ದಿ ಹರಿದಾಡುತ್ತಿದೆ.

    Recommended Video

    D Boss ಮೇಲೆ ಕೇಸ್ ಹಾಕಿದ ಗೀತಾ | Darshan | Filmibeat Kannada

    ಅಮಿತಾಬ್ ಬಚ್ಚನ್ ಕೊರೊನಾ ಸೋಂಕಿಗೆ ಗುರಿಯಾಗಿ ಪ್ರಸ್ತುತ ಆಸ್ಪತ್ರೆಯಲ್ಲಿದ್ದಾರೆ. ಅವರು ಮಾತ್ರವಲ್ಲದೆ ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ, ಮೊಮ್ಮಗಳು ಆರಾಧ್ಯ ಸಹ ಕೊರೊನಾಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದಾರೆ.

    ಅಮಿತಾಬ್ ಬಚ್ಚನ್ ಆರೋಗ್ಯ ಸ್ಥಿತಿ ಹೇಗಿದೆ? ವೈದ್ಯರು ಹೇಳಿದ್ದೇನು?ಅಮಿತಾಬ್ ಬಚ್ಚನ್ ಆರೋಗ್ಯ ಸ್ಥಿತಿ ಹೇಗಿದೆ? ವೈದ್ಯರು ಹೇಳಿದ್ದೇನು?

    ಆಸ್ಪತ್ರೆಯಲ್ಲಿರುವ ಅಮಿತಾಬ್ ಬಚ್ಚನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಅಮಿತಾಬ್ ಬಚ್ಚನ್ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಕೆಲವರು ಸುದ್ದಿ ಹರಡಿಸಿದ್ದು, ಇದು ಸುಳ್ಳು ಎಂದು ಸ್ವತಃ ಅಮಿತಾಬ್ ಹೇಳಿದ್ದಾರೆ.

    ಕಳೆದ 12 ದಿನದಿಂದ ಆಸ್ಪತ್ರೆಯಲ್ಲಿದ್ದಾರೆ

    ಕಳೆದ 12 ದಿನದಿಂದ ಆಸ್ಪತ್ರೆಯಲ್ಲಿದ್ದಾರೆ

    ಜುಲೈ 11 ನೇ ತಾರೀಖಿನಂದು ಅಮಿತಾಬ್ ಬಚ್ಚನ್ ಗೆ ಕೊರೊನಾ ಪಾಸಿಟಿವ್ ಆಗಿರುವ ವರದಿ ಬಂದಿತ್ತು. ಅಂದಿನಿಂದಲೂ ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿದ್ದಾರೆ. ಅದೇ ದಿನವೇ ಅಭಿಷೇಕ್ ಬಚ್ಚನ್‌ಗೂ ಕೊರೊನಾ ಇರುವುದು ಗೊತ್ತಾಗಿತ್ತು.

    ಟಿವಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿತ್ತು

    ಟಿವಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿತ್ತು

    ಪ್ರತಿಷ್ಠಿತ ಆಂಗ್ಲ ಟಿವಿ ಮಾಧ್ಯಮವೊಂದು ಅಮಿತಾಬ್ ಬಚ್ಚನ್ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂಬ ಸುದ್ದಿಯನ್ನು ಪ್ರಕಟಿಸಿತ್ತು. ಅದರ ವಿಡಿಯೋಕ್ಕೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, ಇದೊಂದು ಸುಳ್ಳು ಸುದ್ದಿ, ಅಷ್ಟೆ ಅಲ್ಲ, ಇದು ಬೇಜವಬ್ದಾರಿಯುತ, ತಪ್ಪಾದ, ತಿದ್ದಲು ಸಾಧ್ಯವಾಗದಂತಹಾ ಸುಳ್ಳು ಸುದ್ದಿ ಎಂದು ಸಿಟ್ಟಿನಿಂದ ಬರೆದಿದ್ದಾರೆ.

    ಕೊರೊನಾ ವಿರುದ್ಧ ಗೆಲ್ಲುತ್ತಾರಾ ಅಮಿತಾಬ್? ಅವರಿಗಿರುವ ಆರೋಗ್ಯ ಸಮಸ್ಯೆಗಳೇನು?ಕೊರೊನಾ ವಿರುದ್ಧ ಗೆಲ್ಲುತ್ತಾರಾ ಅಮಿತಾಬ್? ಅವರಿಗಿರುವ ಆರೋಗ್ಯ ಸಮಸ್ಯೆಗಳೇನು?

    ಆತಂಕಪಡುವಂತಹದ್ದು ಏನೂ ಇಲ್ಲವೆಂದ ಅಮಿತಾಬ್

    ಆತಂಕಪಡುವಂತಹದ್ದು ಏನೂ ಇಲ್ಲವೆಂದ ಅಮಿತಾಬ್

    ಕಳೆದ 12 ದಿನಗಳಿಂದ ಅಮಿತಾಬ್ ಬಚ್ಚನ್ ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ತಮ್ಮ ಆರೋಗ್ಯದ ಬಗ್ಗೆ ಟ್ವೀಟ್‌ ಮಾಡಿದ್ದ ಅವರು, ಆತಂಕ ಪಡುವಂತಹದ್ದು ಏನೂ ಇಲ್ಲ, ಆದರೆ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ಈಗ ಹೇಳಲಾರೆ ಎಂದು ಹೇಳಿದ್ದರು.

    ನಾಲ್ಕೂ ಮಂದಿ ಆಸ್ಪತ್ರೆಯಲ್ಲಿಯೇ ಇದ್ದಾರೆ

    ನಾಲ್ಕೂ ಮಂದಿ ಆಸ್ಪತ್ರೆಯಲ್ಲಿಯೇ ಇದ್ದಾರೆ

    ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್‌ ಬಚ್ಚನ್ ಅವರಿಗೆ ಜುಲೈ 11 ರಂದು ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಆ ನಂತರ ಜುಲೈ 17 ರಂದು ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾಗೆ ಕೊರೊನಾ ಪಾಸಿಟಿವ್ ಆಗಿರುವ ವರದಿ ಬಂದಿತ್ತು. ನಾಲ್ಕೂ ಮಂದಿ ಪ್ರಸ್ತುತ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿದ್ದಾರೆ.

    English summary
    A fake news spreading in social media about Amitabh Bachchan who is now hospital due to coronavirus.
    Friday, July 24, 2020, 10:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X