»   » ಸುದೀಪ್ ಅಭಿನಯದ 'ಹೆಬ್ಬುಲಿ'ಯಲ್ಲಿ ಅಮಿತಾಬ್ ಬಚ್ಚನ್

ಸುದೀಪ್ ಅಭಿನಯದ 'ಹೆಬ್ಬುಲಿ'ಯಲ್ಲಿ ಅಮಿತಾಬ್ ಬಚ್ಚನ್

By: ಜೀವನರಸಿಕ
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರಕ್ಕಾಗಿ 'ಗಜಕೇಸರಿ' ಕೃಷ್ಣ ಭರ್ಜರಿ ತಯಾರಿಯಲ್ಲಿದ್ದಾರೆ. ಹೆಬ್ಬುಲಿಯಲ್ಲಿ ಕಿಚ್ಚ ಸುದೀಪ್ ಕೃಷ್ಣ ಆಕ್ಷನ್ ಕಟ್ ನಲ್ಲಿ ನಟಿಸೋದು ಪಕ್ಕಾ ಆಗಿದ್ದು ಫೋಟೋಶೂಟ್ ಜನವರಿಯಲ್ಲಿ ನಡೆಯಲಿದೆ.

ಚಿತ್ರದ ಶೂಟಿಂಗ್ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದ್ದು ಜಮ್ಮು-ಕಾಶ್ಮೀರ ಮತ್ತು ಲಢಾಕ್ ಭಾಗಗಳನ್ನ ಹೆಚ್ಚಾಗಿ ಶೂಟಿಂಗ್ ನಲ್ಲಿ ಬಳಸಿಕೊಳ್ಳೋ ಪ್ಲಾನ್ ಇದ್ದು, ಚಿತ್ರವನ್ನ ಮೂರುಭಾಷೆಯಲ್ಲಿ ನಿರ್ಮಿಸೋದೂ ಕೂಡ ಪಕ್ಕಾ ಆಗಿದೆ. [ಕಿಚ್ಚ ಸುದೀಪ್ ಗೆ ಸೂಪರ್ ಸ್ಟಾರ್ ರಜನಿಕಾಂತ್ ಕರೆ]

ಸೂಪರ್ ಸ್ಟಾರ್ ಕಿಚ್ಚ ತಮಿಳು, ತೆಲುಗು ಪ್ರೇಕ್ಷಕರಿಗೂ ಹತ್ತಿರವಾಗಿರೋದ್ರಿಂದ ಚಿತ್ರವನ್ನ ಕನ್ನಡ, ಹಿಂದಿಯ ಜೊತೆಗೆ ತಮಿಳು ಅಥವಾ ತೆಲುಗಿನಲ್ಲಿ ತೆರೆಗೆ ತರೋ ಪ್ರಯತ್ನ ನಡೆಯಲಿದೆ. ಆದ್ರೆ ಸದ್ಯದ ಬ್ರೇಕಿಂಗ್ ನ್ಯೂಸ್ ಅಂದ್ರೆ ಬಿಗ್ ಬಿ ಅಮಿತಾಬ್ ಬಚ್ಚನ್ ಚಿತ್ರದಲ್ಲೊಂದು ಮುಖ್ಯಪಾತ್ರ ಮಾಡಲಿರೋದು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Amitabh Bachchan to act in Sudeep's Hebbuli

ಅಮಿತಾಬ್ ಬಚ್ಚನ್ ರನ್ನ ಕರೆತರುವ ಪ್ರಯತ್ನಕ್ಕೆ ಚಿತ್ರತಂಡ ಕೈಹಾಕಿದ್ದು ಕಿಚ್ಚ ಸುದೀಪ್ ಕಡೆಯಿಂದ ಈ ಕೆಲಸ ಸುಲಭವಾಗೋ ಸಾಧ್ಯತೆಗಳಿದೆ. ಚಿತ್ರದ ಸ್ಕ್ರಿಪ್ಟ್ ವರ್ಕ್ ನ ಹೆಚ್ಚಿನ ಭಾಗವನ್ನ ಮುಗಿಸಿರೋ ನಿರ್ದೇಶಕ ಕೃಷ್ಣ, ಹೆಬ್ಬುಲಿಯನ್ನ ಸುದೀಪ್ ಕೆರಿಯರ್ ನ ಬಿಗ್ ಬಜೆಟ್ ಚಿತ್ರವಾಗಿಸೋಕೆ ಕೈ ಹಾಕಿದಂತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

ಕೇವಲ ಅಮಿತಾಬ್ ಮಾತ್ರವಲ್ಲ. ಅರ್ಜುನ್ ರಾಂಪಾಲ್ ರನ್ನ ವಿಲನ್ ಪಾತ್ರಕ್ಕೆ ಕರೆತರವ ಯೋಜನೆ ಕೂಡ ಇದೆ. ಇನ್ನು ತಮಿಳು, ತೆಲುಗಿನ ದೊಡ್ಡ ತಾರಾಗಣವೂ ಚಿತ್ರದಲ್ಲಿ ಇರಲಿದ್ದು ಹೆಬ್ಬುಲಿಯ ಅಬ್ಬರಕ್ಕೆ ನಾವೂ ನೀವೂ ತಯಾರಾಗಬೇಕಷ್ಟೆ. ಇನ್ನು ಮಾರ್ಚ್ನಲ್ಲಿ ಶೂಟಿಂಗ್ ಆರಂಭಿಸಿದ್ರೆ ಚಿತ್ರವನ್ನ ಇದೇ ವರ್ಷದಲ್ಲಿ ತೆರೆಗೂ ತರೋ ಯೋಚನೆಯಲ್ಲಿ ಚಿತ್ರತಂಡದ ಕೆಲಸ ಚುರುಕಾಗಿ ಸಾಗಿದೆ.

ಅಂದಹಾಗೆ ಅಮಿತಾಬ್ ಬಚ್ಚನ್ ಈ ಹಿಂದೆ ಕನ್ನಡದ 'ಅಮೃತಧಾರೆ' ಚಿತ್ರದಲ್ಲಿ ಅಭಿನಯಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ರಮ್ಯಾ, ಧ್ಯಾನ್ ಮುಖ್ಯಭೂಮಿಕೆಯಲ್ಲಿದ್ದರು. ಅದಾದ ಬಳಿಕ ಈಗ ಹೆಬ್ಬುಲಿ ಚಿತ್ರದ ಮೂಲಕ ಅವರು ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದಾರೆ.

English summary
Bollywood legend Amitabh Bachchan to act in Kannada in upcoming high voltage movie ‪‎Hebbuli‬ which have created the vibe with the title is planning to launch the movie by April of next year , where Sudeep will be playing the role of an Army officer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada