ಬಿಗ್‌ಬಿ, ಶಾರುಕ್, ಸಲ್ಲು, ಯಶ್, ದರ್ಶನ್‌, ರಮ್ಯಾ ಸೇರಿದಂತೆ ಭಾರತದ ಖ್ಯಾತ ತಾರೆಯರಿಗೆ ಟ್ವಿಟ್ಟರ್ ಶಾಕ್

ದಿಢೀರನೆ ಪ್ರಮುಖ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಹಾಗೂ ಕ್ರೀಡಾಪಟುಗಳು ಟ್ವಿಟ್ಟರ್ ಬ್ಲೂ ಟಿಕ್ ಕಳೆದುಕೊಂಡಿದ್ದಾರೆ. ನಿನ್ನೆ ರಾತ್ರಿಯಿಂದಲೇ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕ್ರಿಕೆಟ್ರಿಗರಾದ ವಿರಾಟ್ ಕೊಹ್ಲಿ ಸಿನಿಮಾ ನಟರಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಯಶ್, ದರ್ಶನ್ ಸೇರಿದಂತೆ ಹಲವರು ಟ್ವಿಟ್ಟರ್ ಬ್ಲೂ ಟಿಕ್ ಮಾಯವಾಗಿದೆ.

ಟ್ವಿಟ್ಟರ್‌ನ ಎಲಾನ್ ಮಸ್ಕ್ ಖರೀದಿಸುವ ಮುನ್ನ ಒಂದು ರೀತಿ, ಖರೀದಿಸಿದ ನಂತರ ಮತ್ತೊಂದು ರೀತಿ ಮೈಕ್ರೋಬ್ಲಾಗಿಂಗ್ ಸೈಟ್‌ಗಳ ನಿಮಯ ಬಂದಂತಾಗಿದೆ. ಟ್ವಿಟ್ಟರ್‌ನ ಎಲಾನ್ ಮಸ್ಕ್ ಖರೀದಿಸುವ ಮುನ್ನ ಭಾರತೀಯ ಬಳಕೆದಾರರಿಗೆ ಆ ಮೈಕ್ರೋಬ್ಲಾಗಿಂಗ್ ಸೈಟ್ ಉಚಿತವಾಗಿ ಬ್ಲೂ ಟಿಕ್ ನೀಡಿತ್ತು. ಎಲನ್ ಮಸ್ಕ್ ಟ್ವಿಟರ್ ಸಿಇಒ ಆದ ಬಳಿಕ ಆ ನಿಮಯಗಳನ್ನು ಬದಲಿಸಲಾಗಿದೆ.

Amitabh bachchan to Darshan: Numerous of celebrities lost their verified blue tick badge on twitter

ಬ್ಲೂಟಿಕ್ ಬೇಕೆಂದರೆ ಹಣ ಕಟ್ಟಲೇಬೇಕು. ಸಬ್ ಸ್ಕ್ರೈಬ್ ಮಾಡಿಕೊಳ್ಳದವರ ಖಾತೆಯ ಬ್ಲೂಟಿಕ್ ತೆಗೆದು ಹಾಕುವುದಾಗಿ ಇತ್ತೀಚೆಗೆ ಟ್ವೀಟ್ ಹೇಳಿತ್ತು. ಹೇಳಿದಂತೆಯೇ ನಿನ್ನೆ ಆ ಕೆಲಸ ಮಾಡಿದೆ. ಪ್ರಮುಖರ ಖಾತೆಗಳಿಂದ ಬ್ಲೂಟಿಕ್ ಮಾಯವಾಗಿದೆ. ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇರುವ ಪ್ರಮುಖರು ಟ್ವಿಟ್ಟರ್‌ ನಡೆಯಿಂದ ಶಾಕ್ ಆಗಿದ್ದಾರೆ. ಏಪ್ರಿಲ್ 1 ರಿಂದ ಟ್ವಿಟ್ಟರ್ ನಿಯಮಗಳನ್ನು ಬದಲಿಸಿ ಬೇಗ ಸಬ್‌ಸ್ಕ್ರೈಬ್ ಮಾಡಿಕೊಳ್ಳುವಂತೆ ಟ್ವಿಟ್ಟರ್ ಹೇಳಿತ್ತು. ಕೆಲವರು ಮುನ್ನೆಚ್ಚರಿಕೆ ವಹಿಸಿದ ಕಾರಣ ಅವರ ಖಾತೆಗಳ ಬ್ಲೂಟಿಕ್ ಉಳಿದುಕೊಂಡಿದೆ.

ಇನ್ನು ಈ ಟ್ವಿಟ್ಟರ್ ಬ್ಲೂಟಿಕ್‌ಗಾಗಿ ಒಂದು ತಿಂಗಳಿಗೆ 900 ಅಥವಾ ವರ್ಷಕ್ಕೆ 9400 ರೂಪಾಯಿ ಹಣ ಪಾವತಿಸಬೇಕು. ಬ್ಲೂಟಿಕ್ ಚಂದಾದಾರರಿಗೆ ಅಕ್ಷರಮಿತಿ ಹೆಚ್ಚಿಸುದಾಗಿ ಹೇಳಿದ್ದರು. ಪವನ್ ಕಲ್ಯಾಣ್, ಸಮಂತಾ, ಆಲಿಯಾ ಭಟ್, ಸಲ್ಮಾನ್ ಖಾನ್, ಕ್ರಿಕೆಟಿಗ ರೋಹಿತ್ ಶರ್ಮಾ ಸೇರಿದಂತೆ ಟ್ವಿಟ್ಟರ್ ಬ್ಲೂಟಿಕ್ ಕಳೆದುಕೊಂಡ ಖ್ಯಾತನಾಮರ ಸಂಖ್ಯೆ ಬೆಳೆಯುತ್ತಿದೆ.

More from Filmibeat

English summary
Amitabh bachchan to Darshan: Numerous of celebrities lost their verified blue tick badge on twitter. Shah Rukh Khan, Yash, Ramya, Alia Bhatt, Salman khan, sudeep are among the big names that have lost their blue ticks. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X