ರಾಮ್ ಚರಣ್ ಗೆ ಸಿಕ್ಕಿದೆ ಮರೆಯಲಾಗದ ಗಿಫ್ಟ್, ಏನದು?
ಟಾಲಿವುಡ್ ನಟ ರಾಮ್ ಚರಣ್ ತೇಜ ಇಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ಅವರ ಬರ್ತ್ ಡೇ ಗೆ ಉಡುಗೊರೆಗಳು ಬರುವುದು ಸಾಮಾನ್ಯ. ಆದರೆ, ಈ ಬಾರಿ ಅವರಿಗೆ ಸಿಕ್ಕ ಗಿಫ್ಟ್ ಎಂದೂ ಮರೆಯಲಾಗದಂತೆ. ಈ ರೀತಿ ತಮ್ಮ ಪತಿಗೆ ಸಿಕ್ಕ ಉಡುಗೊರೆ ಬಗ್ಗೆ ರಾಮ್ ಚರಣ್ ಪತ್ನಿ ಉಪಾಸನ ಹೇಳಿಕೊಂಡಿದ್ದಾರೆ.
ಅಂದಹಾಗೆ, ರಾಮ್ ಚರಣ್ ಗೆ ಸಿಕ್ಕ ಈ ಗಿಫ್ಟ್ ಏನು ಗೊತ್ತೆ, ಅಮಿತಾಬ್ ಬಚ್ಚನ್ ಅವರಿಂದ ಬಂದ ಶುಭಾಶಯ. ರಾಮ್ ಚರಣ್ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ ವಿಡಿಯೋ ಮೂಲಕ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದಾರೆ.
ರಾಮ್ ಚರಣ್ ಮುಂದಿನ ಜೀವನಕ್ಕೆ ಶುಭ ಹಾರೈಸಿರುವ ಅವರು ತೆಲುಗಿನಲ್ಲಿ ಸಹ ಶುಭಾಶಯ ಹೇಳಿ ಸರ್ ಪ್ರೈಸ್ ನೀಡಿದ್ದಾರೆ. ಅಮಿತಾಬ್ ಕಡೆಯಿಂದ ಬಂದ ಈ ವಿಶ್ ರಾಮ್ ಚರಣ್ ಗೆ ಬಹಳ ವಿಶೇಷವಾಗಿದೆಯಂತೆ. ಚಿರಂಜೀವಿ ನಟನೆಯ 'ಸೈರಾ' ಚಿತ್ರದಲ್ಲಿ ಬಚ್ಚನ್ ನಟಿಸುತ್ತಿದ್ದಾರೆ.

ಉಳಿದಂತೆ, ನಿರ್ದೇಶಕ ರಾಜಮೌಳಿ, ನಟ ಅಲ್ಲು ಅರ್ಜುನ್, ನಟಿ ರಕುಲ್ ಪ್ರೀತ್ ಸಿಂಗ್ ಹೀಗೆ ತೆಲುಗು ಚಿತ್ರರಂಗದ ಸ್ನೇಹಿತರು ಶುಭಾಶಯ ತಿಳಿಸಿದ್ದಾರೆ.
ಸದ್ಯ, ಸೌತ್ ಇಂಡಿಯಾದ ಬಿಗ್ ಸಿನಿಮಾ 'ಆರ್ ಆರ್ ಆರ್'ನಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಮೌಳಿ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಜೂನಿಯರ್ ಎನ್ ಟಿ ಆರ್ ಚಿತ್ರದ ಮತ್ತೊಬ್ಬ ನಾಯಕನಾಗಿದ್ದಾರೆ.


Click it and Unblock the Notifications











