For Quick Alerts
  ALLOW NOTIFICATIONS  
  For Daily Alerts

  2 ನಿಮಿಷದಲ್ಲಿ 'ಅಮ್ಮ'ನ ಪ್ರೀತಿ ದುಪ್ಪಟ್ಟು ಮಾಡಿದ ಧ್ರುವ ಸರ್ಜಾ

  By Pavithra
  |

  ವಿಶ್ವ ತಾಯಂದಿರ ದಿನವನ್ನ ಇಂದು ಎಲ್ಲೆಡೆ ಆಚರಣೆ ಮಾಡಲಾಗುತ್ತಿದೆ. ಸಿನಿಮಾರಂಗವೂ ಇದನ್ನ ಹೊರತಾಗಿ ಇಲ್ಲ. ಈಗಾಗಲೇ ಅಮ್ಮ ಐ ಲವ್ ಯೂ ಎನ್ನುವ ಹೆಸರಿನಲ್ಲಿನ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಟೈಟಲ್ ನಲ್ಲೇ ಅಮ್ಮ ಪ್ರೀತಿ ಹೇಳಿರುವ ಚಿತ್ರತಂಡ ತಾಯಂದಿರ ದಿನಕ್ಕಾಗಿ ವಿಶೇಷವಾದ ಟೀಸರ್ ಅನ್ನು ಬಿಡುಗಡೆ ಮಾಡಿದೆ.

  ಎರಡು ನಿಮಿಷ ಇರುವ ಈ ಟೀಸರ್ ಅನ್ನು ಯಾರೇ ನೋಡಿದರು ತಮ್ಮ ತಾಯಿಯ ಮೇಲಿರುವ ಪ್ರೀತಿ ಮತ್ತಷ್ಟು ಹೆಚ್ಚಾಗುವುದು ಗ್ಯಾರೆಂಟಿ. ಯಾಕಂದರೆ ಪ್ರತಿ ನಿತ್ಯ ನಮ್ಮ ಜೀವನದಲ್ಲಿ ನಮ್ಮ ತಾಯಿಯ ಜೊತೆ ನಡೆಯುವ ಸಂಭಾಷಣೆ. ಹಾಗೂ ಅವಳು ನಮಗಾಗಿ ಮಾಡುವ ತ್ಯಾಗವನ್ನ ದೃಶ್ಯದ ಮೂಲಕ ಕಟ್ಟಿಕೊಡಲಾಗಿದೆ.

  ಅಮ್ಮಂದಿರಿಗಾಗಿ ಸಿನಿಮಾ ಅರ್ಪಿಸಿದ ಚಿರಂಜೀವಿ ಸರ್ಜಾ ಅಮ್ಮಂದಿರಿಗಾಗಿ ಸಿನಿಮಾ ಅರ್ಪಿಸಿದ ಚಿರಂಜೀವಿ ಸರ್ಜಾ

  ಚಿರಂಜೀವಿ ಸರ್ಜಾ ಅಭಿನಯದ ಅಮ್ಮ ಐ ಲವ್ ಯೂ ಚಿತ್ರದ ತಾಯಂದಿರ ದಿನದ ಟೀಸರ್ ಗೆ ಧ್ರುವ ಸರ್ಜಾ ಹಿನ್ನಲೆ ಧ್ವನಿ ನೀಡಿದ್ದಾರೆ. ನಿರ್ದೇಶಕ ಕೆ ಎಂ ಚೈತನ್ಯ ವಿಭಿನ್ನ ರೀತಿಯಲ್ಲಿ ಆಲೋಚನೆ ಮಾಡಿ ಈ ಹಿಂದೆ ಯಾವ ಸಿನಿಮಾ ತಂಡವೂ ಮಾಡದ ರೀತಿಯಲ್ಲಿ ಟೀಸರ್ ರೆಡಿ ಮಾಡಿದ್ದಾರೆ.

  ದ್ವಾರಕೀಶ್ ಚಿತ್ರ ಬ್ಯಾನರ್ ನಲ್ಲಿ ಅಮ್ಮ ಐ ಲವ್ ಯೂ ಸಿನಿಮಾ ನಿರ್ಮಾಣವಾಗಿದ್ದು ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿ ಆಗಿರುವ ತಂಡ ಆದಷ್ಟು ಬೇಗ ಸಿನಿಮಾವನ್ನ ಅಭಿಮಾನಿಗಳ ಮುಂದೆ ತರಲಿದ್ದಾರೆ.

  English summary
  Dwarakish Chitra's 51st Film Amma I Love You team released Mother's Day Teaser. A humble tribute in the voice of "Action Prince Dhruva Sarja" Starring Chiranjeevi Sarja, Nishvikaa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X