ಕರ್ನಾಟಕಕ್ಕೂ ಮೊದಲೇ ವಿದೇಶದಲ್ಲಿ ತೆರೆಕಾಣಲಿದೆ 'ಅಮ್ಮನ ಮನೆ'
Recommended Video

14 ವರ್ಷಗಳ ನಂತರ ರಾಘವೇಂದ್ರ ರಾಜ್ ಕುಮಾರ್ ನಟಿಸಿರುವ 'ಅಮ್ಮನ ಮನೆ' ಸಿನಿಮಾ ಮಾರ್ಚ್ 1 ರಂದು ಕರ್ನಾಟಕ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಆದ್ರೆ, ಅದಕ್ಕೂ ಮುಂಚೆಯೇ ವಿದೇಶದಲ್ಲಿ ಅಮ್ಮನ ಮನೆ ಪ್ರೀಮಿಯರ್ ಆಗಲಿದೆ.
ಹೌದು, ಕರ್ನಾಟಕದಲ್ಲಿ ಅಧಿಕೃತವಾಗಿ ರಿಲೀಸ್ ಆಗುವುದಕ್ಕೂ ಒಂದು ದಿನ ಮುಂಚೆ ಫೆಬ್ರವರಿ 28 ರಂದು ವಿದೇಶಗಳಲ್ಲಿ ರಾಘಣ್ಣನ ಸಿನಿಮಾ ಪ್ರದರ್ಶನವಾಗಲಿದೆ. ಸಹಜವಾಗಿ ಇಲ್ಲಿ ರಿಲೀಸ್ ಆಗುವುದಕ್ಕೆ ಮುಂಚೆ ಫಾರೀನ್ ದೇಶಗಳಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆಯಾಗುವುದು ವಿರಳ ಆದ್ರೆ, ರಾಘಣ್ಣ ಸಿನಿಮಾ ಆ ಸಂಸ್ಕೃತಿಯನ್ನ ಬ್ರೇಕ್ ಮಾಡಿದೆ.
ಫೆಬ್ರವರಿ 28 ರಂದು ನ್ಯೂಜಿಲ್ಯಾಂಡ್ ನ ಆಂಕ್ಲೆಂಡ್, ಆಸ್ಟ್ರೇಲಿಯಾದ ಮೆಲ್ಬರ್ನ್ ಹಾಗೂ ಸಿಂಗಾಪೂರ್ ನಲ್ಲಿ ಅಮ್ಮನ ಮನೆ ಪ್ರೀಮಿಯರ್ ಆಗ್ತಿದೆ. ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ರಾಘಣ್ಣ ಮತ್ತು ತಂಡಕ್ಕೂ ಆಹ್ವಾನವಿದೆ. ಆದ್ರೆ, ಅಲ್ಲಿಗೆ ಹೋಗ್ತಾರಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಅಮ್ಮನ ಮನೆ ಚಿತ್ರ ಗಂಡಸಿನ ಬದುಕಿನಲ್ಲಿ ಬರುವ ಮೂವರು ತಾಯಂದಿರ ಕುರಿತ ಕಥೆ ಹೇಳುತ್ತದೆ. ನಿಖಿಲ್ ಮಂಜು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಈ ಚಿತ್ರದಲ್ಲಿ ರಾಘಣ್ಣ ಸ್ಕೂಲ್ ಮೇಷ್ಟ್ರು ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಕೂಡಾ ಹಿಟ್ ಆಗಿದ್ದು, ಬಹಳ ದಿನಗಳ ನಂತರ ತೆರೆಮೇಲೆ ರಾಘವೇಂದ್ರ ರಾಜ್ ಕುಮಾರ್ ಅವರನ್ನ ನೋಡಲು ಪ್ರೇಕ್ಷಕರು ಕಾಯ್ತಿದ್ದಾರೆ.
ಇನ್ನುಳಿದಂತೆ ಶ್ರೀಲಲಿತೆ ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು, ಚಿತ್ರಕ್ಕೆ ಬಿ ಶಿವಾನಂದ ಸಂಭಾಷಣೆ, ಪಿವಿಆರ್ ಸ್ವಾಮಿ ಛಾಯಾಗ್ರಹಣ ಮತ್ತು ಸಮೀರ್ ಕುಲಕರ್ಣಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ.


Click it and Unblock the Notifications











