ಬಹುನಿರೀಕ್ಷಿತ ಹಾಸ್ಯಪ್ರಧಾನ ತುಳು ಚಿತ್ರ 'ಅಮ್ಮೆರ್ ಪೊಲೀಸ್' ಬಿಡುಗಡೆ

By Harshitha

ಮಂಗಳೂರು ಜೂನ್ 22 : ಮತ್ತೊಂದು ಹಾಸ್ಯ ಪ್ರಧಾನ ತುಳು ಚಿತ್ರ 'ಅಮ್ಮೆರ್ ಪೊಲೀಸ್' ಇಂದು ಮಂಗಳೂರಿನಲ್ಲಿ ಬಿಡುಗಡೆಗೊಂಡಿದೆ. ತುಳು ಚಿತ್ರರಂಗದಲ್ಲಿ ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದು, ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಇಂದು ತೆರೆಕಂಡಿದೆ.

ಲಕುಮಿ ಕ್ರಿಯೇಷನ್ಸ್ ಲಾಂಛನದಡಿ ನಿರ್ಮಾಣಗೊಂಡಿರುವ ಈ ಹಾಸ್ಯ ಪ್ರಧಾನ ಚಲನಚಿತ್ರವನ್ನು ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ರಾಜೇಶ್.ಬಿ.ಶೆಟ್ಟಿ ನಿರ್ಮಾಣದ ಈ 'ಅಮ್ಮೆರ್ ಪೊಲೀಸ್' ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 14 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.

ಸುಮಾರು 150 ಮಂದಿ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷತೆಯಾಗಿದೆ. ಸಂಪೂರ್ಣ ಹಾಸ್ಯ ಮನರಂಜನೆಯನ್ನು ಒಳಗೊಂಡ ಈ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶವೂ ಇದೆ ಎಂದು ನಿರ್ದೇಶಕ ಸೂರಜ್ ಶೆಟ್ಟಿ ತಿಳಿಸಿದ್ದಾರೆ.

Ammer police tulu film released in Mangalore

'ಅಮ್ಮೆರ್ ಪೊಲೀಸ' ಸಿನಿಮಾ ಮಂಗಳೂರಿನ ಜ್ಯೋತಿ, ಪಿವಿಆರ್, ಸಿನಿಪೊಲಿಸ್, ಬಿಗ್ ಸಿನಿಮಾಸ್, ಸುರತ್ಕಲ್ ನ ನಟರಾಜ್, ಮೂಡಬಿದಿರೆಯಲ್ಲಿ ಅಮರಶ್ರೀ, ಕಾರ್ಕಳದ ರಾಧಿಕ, ಮಣಿಪಾಲ್, ಪುತ್ತೂರಿನ ಅರುಣಾ, ಬೆಳ್ತಂಗಡಿಯ ಭಾರತ್, ಸುಳ್ಯದ ಸಂತೋಷ್ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.

More from Filmibeat

English summary
Tulu Movie 'Ammer Police' released in Mangaluru. The Movie is directed by Sooraj Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X