ವೀರಪ್ಪನ್ ರನ್ನು ವಿಲನ್ ಮಾಡಲಾಗಿದೆ; ಮುತ್ತುಲಕ್ಷ್ಮೀ

ನಮ್ಮ ಅನುಮತಿ ಪಡೆಯದೆ ಚಿತ್ರವನ್ನು ಎ.ಎಂ.ಆರ್ ರಮೇಶ್ ತೆರೆಗೆ ತರುತ್ತಿದ್ದಾರೆ ಎಂದು 'ನಕ್ಕೀರನ್' ಪತ್ರಿಕೆಯ ಸಂಪಾದಕ ಆರ್ ಆರ್ ಗೋಪಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಅದಾದ ಬಳಿಕ ಅಟ್ಟಹಾಸ ಚಿತ್ರ ಕೃತಿಚೌರ್ಯ ಆರೋಪಕ್ಕೂ ಗುರಿಯಾಯ್ತು. ತಮ್ಮ 'ವೀರಪ್ಪನ್: ನರಹಂತಕನ ರುದ್ರ ನರ್ತನ' ಎಂಬ ಕೃತಿಯಿಂದ ಕತೆಕದ್ದು ಚಿತ್ರಕಥೆ ಮಾಡಿದ್ದಾರೆ ಎಂದು ಪತ್ರಕರ್ತ ಟಿ.ಗುರುರಾಜ್ ಗಂಭೀರ ಆರೋಪ ಮಾಡಿದ್ದರು.
ಅಂದಹಾಗೆ, 'ಅಟ್ಟಹಾಸ' ಹಾಗೂ 'ವನ ಯುದ್ಧಂ' ಚಿತ್ರಗಳೆರಡರಲ್ಲೂ 'ವೀರಪ್ಪನ್' ಪಾತ್ರದಲ್ಲಿ ನಟ ಕಿಶೋರ್ ನಟಿಸಿದ್ದಾರೆ. ಬಾಲಿವುಡ್ ನಟ ಸುರೇಶ್ ಒಬೆರಾಯ್ ಅವರು ವರನಟ ಡಾ.ರಾಜ್ ಪಾತ್ರವನ್ನು ಪೋಷಿಸಿದ್ದಾರೆ. ಸುಲಕ್ಷಣಾ ಅವರು ಪಾರ್ವತಮ್ಮ ರಾಜ್ ಕುಮಾರ್ ಆಗಿ ಕಾಣಿಸಿಕೊಂಡಿದ್ದಾರೆ. ಡಾ ರಾಜ್ ಅವರೊಂದಿಗೆ ಅಪಹರಣಕ್ಕೆ ಒಳಗಾಗಿದ್ದ ನಾಗಪ್ಪ ಮರಡಗಿ ಅವರೂ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತ ಹಾಗೂ ವಿಜಯ್ ಮಿಲ್ಟನ್ ಅವರ ಛಾಯಾಗ್ರಹಣವಿದೆ. ಮೂರು ದಶಕಗಳ ಕಾಲ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್‌ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ರಾಜ್ ಕುಮಾರ್ ಕಿಡ್ನಾಪ್ ಕುರಿತಾದ ಚಿತ್ರವನ್ನು ಬೆಳ್ಳಿತೆರೆಗೆ ತರುತ್ತಿರುವುದು ಇದೇ ಮೊದಲು.
ಚಿತ್ರದಲ್ಲಿ ಅರ್ಜುನ್ ಸರ್ಜಾ, ಸುರೇಶ್ ಒಬೆರಾಯ್, ಭಾವನಾ ರಾವ್, ಜಯಚಿತ್ರಾ, ವಿಜಯಲಕ್ಷ್ಮಿ, ರವಿಕಾಳೆ ಮುಂತಾದವರು ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕಂತೂ ಬಿಡುಗಡೆ ಮುಂದಕ್ಕೆ ಹೋಗಿದೆ. ಚಿತ್ರಕ್ಕೆ ಇನ್ನೇನಾದರೂ ಕಂಟಕ ಕಾಡದಿರಲಿ ಎಂದು ಚಿತ್ರತಂಡ ಬಯಸುತ್ತಿದೆ. ಈಗಿನ ಮಾಹಿತಿಯಂತೆ ಬರುವ ತಿಂಗಳು ಆಗಲಿರುವ ಬಿಡುಗಡೆಗೆ (ವೀರಪ್ಪನ್ ಅಭಿಮಾನಿಗಳಲ್ಲ...!?) ಕಾಯಲಾಗುತ್ತಿದೆ. (ಏಜೆನ್ಸೀಸ್)


Click it and Unblock the Notifications











